ಅಭಿಮಾನಿ ಕುಟುಂಬವನ್ನು ಭೇಟಿಯಾದ ಧವನ್

ಹೈದರಾಬಾದ್, ಮೇ 6: ಭಾರತದ ಕ್ರಿಕೆಟಿಗರು ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವೊಮ್ಮೆ ಅವರು ಅಭಿಮಾನಿಗಳನ್ನು ಮುಖಾಮುಖಿಯಾಗುತ್ತಾರೆ. ಐಪಿಎಲ್ ಇಂತಹ ಒಂದು ನಿದರ್ಶನಕ್ಕೆ ಸಾಕ್ಷಿಯಾಗಿದ್ದು, ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಶಿಖರ್ ಧವನ್ ತನ್ನ ಕಟ್ಟಾ ಅಭಿಮಾನಿ ಶಂಕರ್ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ತನ್ನನ್ನು ಭೇಟಿಯಾಗಲು ಬಂದಿರುವ ಶಂಕರ್‌ಗೆ ಕೃತಜ್ಞತೆ ಸಲ್ಲಿಸಿದ ಧವನ್, ಶಂಕರ್ ಹಾಗೂ ಅವರ ಕುಟುಂಬ ಸದಸ್ಯರೊಂದಿಗಿದ್ದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
‘‘ಶಂಕರ್‌ರನ್ನು ಭೇಟಿಯಾಗಿದ್ದು ಒಂದು ಅಪೂರ್ವ ಅನುಭವ. ಅವರು ನನ್ನ ಕಟ್ಟಾ ಅಭಿಮಾನಿ. ಅವರು ನನ್ನನ್ನು ಭೇಟಿಯಾಗಲು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ನನ್ನ ಮೇಲೆ ಪ್ರೀತಿ ಹಾಗೂ ಬೆಂಬಲ ವ್ಯಕ್ತಪಡಿಸುತ್ತಿರುವ ಶಂಕರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’’ ಎಂದರು.
Next Story





