Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ7 May 2018 12:03 AM IST
share
ಓ ಮೆಣಸೇ...

ಬಹುಮತ ಬರಬಹುದು, ಬರದೇ ಇರಬಹುದು. ಆದರೆ ಸರಕಾರ ನಮ್ಮದೇ

- ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ.

 ಅಂದರೆ ಬಿಜೆಪಿ, ಕಾಂಗ್ರೆಸ್ ಎರಡೂ ನಿಮ್ಮ ಪಕ್ಷ ಎಂದಾಯಿತು.

---------------------

ಕಾಂಗ್ರೆಸ್‌ನ ಭೂಮಿ ಫಲವತ್ತಾಗಿದೆ

- ಡಿ.ಕೆ.ಶಿವಕುಮಾರ್, ಸಚಿವ

ಭೂಮಿ ಫಲವತ್ತಾದರೇನಾಯಿತು, ಪಾಪಸ್ ಕಳ್ಳಿ ಗಿಡಗಳನ್ನು ನೆಟ್ಟರೆ?

---------------------

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಟೀಮ್ ನಾಟಕ ಕಂಪೆನಿ

- ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ನರೇಂದ್ರ ಮೋದಿಯಂತಹ ಹಾಲಿವುಡ್ ನಟರ ಮುಂದೆ ರಾಹುಲ್‌ಗಾಂಧಿ ಬಾಲನಟ.

---------------------

ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ದಲ್ಲ , ನಮ್ಮ ಆದರ್ಶ ಪಾಲಿಸಿದ್ದು

- ಡಿ.ವಿ.ಸದಾನಂದ ಗೌಡ,  ಕೇಂದ್ರ ಸಚಿವ

ಯಡಿಯೂರಪ್ಪ ಪುತ್ರರಿಗೆ ಟಿಕೆಟ್ ತಪ್ಪಿಸುವುದು ನಿಮ್ಮ ಆದರ್ಶವೇ?

---------------------

ಎಲ್.ಕೆ ಅಡ್ವಾಣಿಯವರಿಗೆ ಆದ ಗತಿಯೇ ಯಡಿಯೂರಪ್ಪರಿಗೂ ಆಗಲಿದೆ

- ಸಿಎಂ. ಇಬ್ರಾಹೀಂ, ಕಾಂಗ್ರೆಸ್ ಮುಖಂಡ

ನಿಮ್ಮಂತಹ ನಾಯಕರನ್ನು ನಂಬಿದ ಸಿದ್ದರಾಮಯ್ಯ ಗತಿಯ ಬಗ್ಗೆ ಆತಂಕ ಶುರುವಾಗಿದೆ.

---------------------

ಮೇ 17 ಅಥವಾ 18 ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ

-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ

ಶಿಕಾರಿ ಪುರ ಪ್ರತ್ಯೇಕ ರಾಜ್ಯವಾಗಿ ಮಾರ್ಪಾಡಾಗಿದೆಯೇ?

---------------------

ಎರಡು ಕಡೆ ಸ್ಪರ್ಧಿಸುತ್ತಿರುವ ಸಿಎಂ ಸಿದ್ದರಾಮಯ್ಯ ಒಬ್ಬ ಹೇಡಿ

- ಶೋಭಾ ಕರಂದ್ಲಾಜೆ, ಸಂಸದೆ

ಎರಡು ಕಡೆ ಸ್ಪರ್ಧಿಸಿದ್ದ ಪ್ರಧಾನಿ ಮೋದಿಯವರು ಕೂಡ.

---------------------

ಪ್ರಧಾನಿ ಮೋದಿ ಆಡಳಿತವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ

- ಬಿ.ವೈ . ವಿಜಯೇಂದ್ರ, ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ

ದೇಶ ಮಾತ್ರ ಒಪ್ಪಿಕೊಂಡಿಲ್ಲ.

---------------------
ಸಿ.ಎಂ. ಸಿದ್ದರಾಮಯ್ಯ ಆಧುನಿಕ ಭಸ್ಮಾಸುರ
- ಆರ್. ಆಶೋಕ್, ಬಿಜೆಪಿ ನಾಯಕ

ಬಿಜೆಪಿಯ ಪಾಲಿಗೆ.

---------------------

ಚೆಕ್ ಮೂಲಕವೂ ಲಂಚ ಪಡೆಯಲು ಸಾಧ್ಯ ಎಂದು ತೋರಿಸಿಕೊಟ್ಟ ಯಡಿಯೂರಪ್ಪರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು

- ವೀರಪ್ಪ ಮೊಯ್ಲಿ, ಸಂಸದ

ನಿಮಗೆ ಸಿಕ್ಕಿದ ಸರಸ್ವತಿ ಸಮ್ಮಾನ್ ದಯಪಾಲಿಸಿ ಬಿಡಿ.

---------------------

ಕುಮಾರ ಸ್ವಾಮಿ ಬಿಜೆಪಿ ಜತೆ ಹೋದರೆ ಆತ ನನ್ನ ಮಗನೇ ಅಲ್ಲ

- ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿ ಕುಮಾರಸ್ವಾಮಿಯ ಜೊತೆ ಹೋದರೆ ಪರವಾಗಿಲ್ಲ ಎಂದು ಅರ್ಥ.

---------------------

ಕುಟುಂಬದವರನ್ನು ಸೇರಿಸಿಕೊಂಡು ಬಿಜೆಪಿ ಎಂದೂ ರಾಜಕಾರಣ ಮಾಡಿಲ್ಲ

- ನಿತಿನ್ ಗಡ್ಕರಿ, ಕೇಂದ್ರ ಸಚಿವ

ಗಣಿ ಲೂಟಿಕೋರರನ್ನು ಸೇರಿಸಿ ಮಾಡಿದ ರಾಜಕಾರಣವನ್ನು ಏನೆಂದು ಕರೆಯಬೇಕು?

---------------------

ನನ್ನನ್ನು ಮುಗಿಸಲು ಮೋದಿ, ಸಿಬಿಐ ಸಂಚು

- ಲಾಲು ಪ್ರಸಾದ್ ಯಾದವ್, ಬಿಹಾರದ ಮಾಜಿ ಮುಖ್ಯಮಂತ್ರಿ

ದೇಶವನ್ನೇ ಮುಗಿಸಲು ಹೊರಟವರು ಅವರು.

---------------------

ಬಿ.ಆರ್ .ಅಂಬೇಡ್ಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಬ್ರಾಹ್ಮಣರು

- ರಾಜೇಂದ್ರ ತ್ರಿವೇದಿ, ಗುಜರಾತ್ ವಿಧಾನ ಸಭೆ ಸ್ಪೀಕರ್

ಅಂಬೇಡ್ಕರ್ ಇದ್ದಿದ್ದರೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದರು.

---------------------

ಜಗತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವುದು ಪಾಕಿಸ್ತಾನ ಮತ್ತು ಸಿಎಂ ಸಿದ್ದರಾಮಯ್ಯ ಮಾತ್ರ

- ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ

ಮತ್ತೇಕೆ ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಲು ಹೋಗಿದ್ದು?

---------------------

ಯುಗಕ್ಕೊಂದು, ಜಗಕ್ಕೊಂದು ಆಗುವ ಮಹಾಕಾರ್ಯಕ್ಕೆ ನಾವೆಲ್ಲರೂ ನಿಮಿತ್ತ ಮಾತ್ರ

- ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರಮಠ

ಅತ್ಯಾಚಾರ ಆರೋಪಗಳಿಗೂ ಇದು ಅನ್ವಯಿಸುತ್ತದೆಯೇ?

---------------------

ಬಿಜೆಪಿ ಅಲಿಬಾಬಾ ಮತ್ತು ನಲ್ವತ್ತು ಚೋರರ ಪಕ್ಷ

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಲ್ಲಿರುವುದು ಬರೇ ನಲ್ವತ್ತು ಚೋರರು ಮಾತ್ರವೇ?
---------------------

ನಿರಪರಾಧಿ ಎಂದು ಸಾಬೀತಾಗುವವರೆಗೆ ಜನಾರ್ದನ ರೆಡ್ಡಿಗೆ ಬಿಜೆಪಿ ಪ್ರವೇಶ ಇಲ್ಲ

- ಮುರಳೀಧರ ರಾವ್, ರಾಜ್ಯ ಬಿಜೆಪಿ ಉಸ್ತುವಾರಿ

ನಿರಪರಾಧಿ ಎಂದು ಸಾಬೀತಾಗಲು ರೆಡ್ಡಿ ಬಿಜೆಪಿಗೆ ಎಷ್ಟು ಕೊಡಬೇಕು?
---------------------

 ಕೃಷ್ಣ ಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಶ್ರೀಕೃಷ್ಣನನ್ನೇ ಅವಮಾನಿಸಿದಂತೆ

- ಪ್ರಮೋದ್ ಮಧ್ವರಾಜ್, ಸಚಿವ

ಕೃಷ್ಣ ಮಠದೊಳಗೆ ಎದ್ದಿರುವ ಭಿನ್ನಮತ ಅವರಲ್ಲಿ ಅಭದ್ರತೆ ಸೃಷ್ಟಿಸಿರಬೇಕು.

---------------------

ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿ ದ.ಕ.ಜಿಲ್ಲೆಯಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ

- ನಳಿನ್‌ಕುಮಾರ್ ಕಟೀಲು, ಸಂಸದ

ಬಿಜೆಪಿ ಸರಕಾರ ಇಲ್ಲ ಎನ್ನುವ ಕಾರಣಕ್ಕಾಗಿ ಕೋಮುಗಲಭೆ ನಡೆಸಿದಿರಾ?

---------------------

ಪ್ರಧಾನಿ ಮೋದಿ ಬಗ್ಗೆ ಮಾತನಾಡಬೇಕಾದರೆ ಯೋಗ್ಯತೆ ಬೇಕು

- ಹುಚ್ಚ ವೆಂಕಟ್, ನಟ

ನಿಮಗೆ ಖಂಡಿತಾ ಆ ಯೋಗ್ಯತೆ ಇದೆ.

---------------------

 ಸ್ತ್ರೀಯರ ಮನಸ್ಸು ಗೆದ್ದರೆ ಇಡೀ ಕುಟುಂಬದ ಮತ ಬಿಜೆಪಿಗೆ

- ನರೇಂದ್ರ ಮೋದಿ, ಪ್ರಧಾನಿ
  ಪತ್ನಿಯ ಮನಸ್ಸನ್ನು ಗೆಲ್ಲಲಾಗದವ ಕುಟುಂಬದ ಮಾತನ್ನು ಆಡಿದರೆ ಹೇಗೆ?

share
ಪಿ.ಎ.ರೈ
ಪಿ.ಎ.ರೈ
Next Story
X