Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಈ ಚುನಾವಣೆ ದೇಶದ ಭವಿಷ್ಯದ ದಿಕ್ಸೂಚಿ

ಈ ಚುನಾವಣೆ ದೇಶದ ಭವಿಷ್ಯದ ದಿಕ್ಸೂಚಿ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ7 May 2018 12:04 AM IST
share
ಈ ಚುನಾವಣೆ ದೇಶದ ಭವಿಷ್ಯದ ದಿಕ್ಸೂಚಿ

ಈ ಚುನಾವಣೆ ಭಾರತದ ಜನತಂತ್ರದ ಭವಿಷ್ಯ ನಿರ್ಧರಿಸಲಿದೆ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕೋ ಇಲ್ಲ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಪ್ರತಿಪಾದಿಸುವ ಮನುವಾದಿ ಹಿಂದುತ್ವ ಈ ದೇಶವನ್ನು ಪ್ರಪಾತಕ್ಕೆ ತಳ್ಳಬೇಕೋ ಎಂಬುದನ್ನು ನಿರ್ಧರಿಸುವ ಚುನಾವಣೆ.


ಕರ್ನಾಟಕವನ್ನು ಬಾಧಿಸುತ್ತಿರುವ ಯಾವುದೇ ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪವಿಲ್ಲದೇ ಈ ಬಾರಿ ವಿಧಾನಸಭೆ ಚುನಾವಣೆ ಕೊನೆ ಹಂತಕ್ಕೆ ಬಂದು ನಿಂತಿದೆ. ಇನ್ನು 5 ದಿನಗಳಲ್ಲಿ ಮತದಾನ ನಡೆಯಲಿದೆ. ಮಹಾದಾಯಿ, ಕಾವೇರಿ, ಅರಣ್ಯನಾಶ, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ ಈ ಯಾವ ಪ್ರಶ್ನೆಗಳು ಕೂಡ ಈ ಚುನಾವಣೆಯಲ್ಲಿ ಚರ್ಚೆಯಾಗಲಿಲ್ಲ. ಸಿದ್ದರಾಮಯ್ಯ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಗಂಭೀರವಾದ ಟೀಕೆಯನ್ನು ಬಿಜೆಪಿ ಮಾಡಲಿಲ್ಲ. ಆದರೆ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ಮೇಲೆ ಬೈಗುಳದ ಸುರಿಮಳೆ ಮಾಡಿತು.

ಸಿದ್ದರಾಮಯ್ಯ ಸರಕಾರ ಬರುವುದಕ್ಕಿಂತ ಮುಂಚೆ 2008ರಿಂದ 2013ರವರೆಗೆ ರಾಜ್ಯವನ್ನು ಆಳಿದ ಬಿಜೆಪಿಗೆ ತನ್ನ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇದು ಜಿಹಾದಿ ಸರಕಾರ. ಇದನ್ನು ಬದಲಿಸಿ ಎಂದೆಲ್ಲಾ ಉಡಾಫೆಯಾಗಿ ಮಾತನಾಡಿದರು. ಆದರೆ ನೋಟು ಅಮಾನ್ಯೀಕರಣದ ವೈಫಲ್ಯ, ಸರಕಾರಿ ಬ್ಯಾಂಕುಗಳನ್ನು ಲೂಟಿ ಮಾಡಿ ವಿದೇಶಕ್ಕೆ ಓಡಿ ಹೋದ ನೀರವ್ ಮೋದಿ, ವಿಜಯ ಮಲ್ಯಗಳ ಬಗ್ಗೆ ಜನರಿಗೆ ವಾಸ್ತವಾಂಶ ಇಡಲು ಮುಂದಾಗಲಿಲ್ಲ.

ಅದೇನಿದ್ದರೂ ಈ ಚುನಾವಣೆ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಬರೀ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗಳ ನಡುವಿನ ಪೈಪೋಟಿ ಮಾತ್ರವಲ್ಲ, ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರಲ್ಲಿನ ಪ್ರತಿಷ್ಠೆಯ ಹೋರಾಟವೂ ಅಲ್ಲ. ಅಷ್ಟೇ ಆಗಿದ್ದರೆ, ಪ್ರಧಾನಿ ನರೇಂದ್ರ ಮೋದಿ ಈ ರಾಜ್ಯದಲ್ಲಿ ಕಿರುಚಾಡುತ್ತ, ಅರಚಾಡುತ್ತ ಓಡಾಡುತ್ತಿರಲಿಲ್ಲ. ಈ ಚುನಾವಣೆ ಭಾರತದ ಜನತಂತ್ರದ ಭವಿಷ್ಯ ನಿರ್ಧರಿಸಲಿದೆ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕೋ ಇಲ್ಲ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಪ್ರತಿಪಾದಿಸುವ ಮನುವಾದಿ ಹಿಂದುತ್ವ ಈ ದೇಶವನ್ನು ಪ್ರಪಾತಕ್ಕೆ ತಳ್ಳಬೇಕೋ ಎಂಬುದನ್ನು ನಿರ್ಧರಿಸುವ ಚುನಾವಣೆ. ಕರ್ನಾಟಕದಲ್ಲಿ ಸಂವಿಧಾನ ವಿರೋಧಿ ಶಕ್ತಿಗಳು ಸೋತರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವುಗಳನ್ನು ಹಿಮ್ಮೆಟ್ಟಿಸಲು ಅವಕಾಶ ದೊರಕಿದಂತಾಗುತ್ತದೆ.

ಜಾತಿ, ಮತ, ಭೇದವಿಲ್ಲದೆ ಸರ್ವರಿಗೂ ಸಮಾನಾವಕಾಶ ನೀಡಿದ ಸಂವಿಧಾನವನ್ನು ಸಂಘ ಪರಿವಾರ ಮುಂಚಿನಿಂದಲೂ ದ್ವೇಷಿಸುತ್ತಲೇ ಬಂದಿದೆ. 1949ರಲ್ಲಿ ಭಾರತದ ಸಂವಿಧಾನ ರಚನಾ ಸಭೆ ಅಂತಿಮವಾಗಿ ನಮ್ಮ ಸಂವಿಧಾನವನ್ನು ಅಂಗೀಕರಿಸಿದಾಗ, ಆರೆಸ್ಸೆಸ್ ಮುಖವಾಣಿಯಾಗಿದ್ದ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನ ಎಂಬ ಶೀರ್ಷಿಕೆಯಲ್ಲಿ ಭಾರತೀಯ ಸಂವಿಧಾನದಲ್ಲಿ ಭಾರತೀಯ ಎಂಬುದಕ್ಕೆ ಸ್ಥಾನವೇ ಇಲ್ಲ. ಅದರಲ್ಲಿ ಭಾರತೀಯವಲ್ಲದ ಅಸಂಗತ ಅಂಶಗಳಿವೆ ಎಂದು ಟೀಕಿಸಿತ್ತು. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪಲ್ಲಟಗೊಳಿಸಿದ ಸಂವಿಧಾನದ ಬಗ್ಗೆ ಆರೆಸ್ಸೆಸ್‌ನಲ್ಲಿ ಅಸಮಾಧಾನ ಇರುವುದು ಸಹಜವಾಗಿತ್ತು. ಸ್ವಾತಂತ್ರಾನಂತರವೂ ಸಂವಿಧಾನ ವಿರೋಧಿ ನೀತಿಯನ್ನು ಮುಂದುವರಿಸಿಕೊಂಡು ಬಂದ ಸಂಘ ಪರಿವಾರ ತನ್ನ ಹಿಂದೂ ರಾಷ್ಟ್ರ ಗುರಿ ಸಾಧನೆಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಚುನಾವಣೆ ಮೂಲಕ ಅಧಿಕಾರ ಸ್ವಾಧೀನಪಡಿಸಿಕೊಂಡು ಸಂವಿಧಾನವನ್ನು ಬದಲಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವುದು ಅದರ ಹಿಡನ್ ಅಜೆಂಡಾ ಆಗಿದೆ. ಈ ಮಾತನ್ನು ಅನಂತಕುಮಾರ್ ಹೆಗ್ಗಡೆ ಬಹಿರಂಗವಾಗಿ ಹೇಳುತ್ತಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಜೀವಂತವಿದ್ದಾಗ, ಅವರನ್ನು ಆರೆಸ್ಸೆಸ್ ಯಾವ ಪರಿ ದ್ವೇಷಿಸುತಿತ್ತು ಎಂಬುದಕ್ಕೆ ಅನೇಕ ಸಾಕ್ಷ್ಯಾಧಾರಗಳಿವೆ. ಇನ್ನೂ ಅನೇಕ ಸಂಗತಿಗಳು ಬೆಳಕಿಗೆ ಬಂದಿಲ್ಲ. ಇತ್ತೀಚೆಗೆ ಅಫ್ಝಲ್ ಪುರದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತ ಬಯಲುಪಡಿಸಿದ ಸಂಗತಿಯೊಂದು ಈವರೆಗೂ ಎಲ್ಲಿಯೂ ದಾಖಲಾಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ತಮ್ಮ ಸಾವಿರಾರು ಮಂದಿ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸೇರಿದರು. ಇದನ್ನು ಸಹಿಸಲಾಗದ ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಅಂಬೇಡ್ಕರ್ ಮೇಲೆ ವಿಷ ಕಾರಿದರು. ಈ ಮತಾಂತರದ ಬಗ್ಗೆ ವ್ಯಂಗ್ಯ ಮಾಡುತ್ತ ಬುದ್ಧ ಹೊಲೆಯನಾದ ಎಂಬ ಹೇಳಿಕೆಯನ್ನು ಗೋಳ್ವಾಲ್ಕರ್ ನೀಡಿದ್ದರು. ವಾಸ್ತವವಾಗಿ, ಸಾವಿರಾರು ಜನ ದಲಿತರು ಬೌದ್ಧರಾದರು ಎಂಬುದನ್ನು ಒಪ್ಪಿಕೊಳ್ಳದ ಗೋಳ್ವಾಲ್ಕರ್ ಈ ರೀತಿ ಚುಚ್ಚಿ ಮಾತನಾಡಿದ್ದರು. ಈ ಬಗ್ಗೆ ಬಾಬಾ ಸಾಹೇಬರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಕೆರಳಿ ಕೆಂಡವಾದ ಅವರು, ಎಲ್ಲರೂ ಬಾಯಿಯಿಂದ ತಿಂದು ಕೆಳಗೆ ಬಿಡುತ್ತಾರೆ. ಆದರೆ ಕೆಲವರು ಕೆಳಗಡೆಯಿಂದ ಬಿಡಬೇಕಾದದ್ದು ಬಾಯಿಯಿಂದ ಬಿಡುತ್ತಾರೆ ಎಂದು ಉಗ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಈಗಲೂ ಕೂಡ ಗೋಳ್ವಾಲ್ಕರ್ ಕ್ತರಾಗಿರುವ ಯೋಗಿ ಆದಿತ್ಯನಾಥ್, ಅನಂತಕುಮಾರ್ ಹೆಗಡೆ, ಪ್ರತಾಪ ಸಿಂಹ ಮುಂತಾದವರು ಬಾಯಿ ಭೇದಿ ಮಾಡಿಕೊಳ್ಳುವುದರಲ್ಲಿ ಕುಖ್ಯಾತಿ ಗಳಿಸಿದ್ದಾರೆ. ಇದು ಸಂಘ ಪರಿವಾರದಲ್ಲಿ ಬೆಳೆದು ತರಬೇತಿ ಪಡೆದ ಪರಿಣಾಮ.

ಈ ರೀತಿ ಅಂಬೇಡ್ಕರ್ ಮತ್ತು ಸಂವಿಧಾನವನ್ನು ದ್ವೇಷಿಸುತ್ತ ಬಂದ ಸಂಘ ಪರಿವಾರ ದಲಿತರಿಗೆ ಮೀಸಲಾತಿ ನೀಡುವುದನ್ನು ಮುಂಚೆಯಿಂದಲೂ ದ್ವೇಷಿಸುತ್ತ ಬಂದಿದೆ. ಹಿಂದೂ ವಾರ್ಸಾ ಕಾಯ್ದೆಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡುವ ಅಂಬೇಡ್ಕರ್‌ರ ಕಾನೂನು ತಿದ್ದುಪಡಿಯನ್ನು ಸಂಘ ಪರಿವಾರ ಆಗಲೇ ವಿರೋಧಿಸಿತ್ತು. ಆದರೆ ಜನ ಬೆಂಬಲವಿಲ್ಲದೆ ಅದು ಸುಮ್ಮನಿತ್ತು. ಈಗ ದೊರೆತ ಚುನಾವಣಾ ಗೆಲುವಿನಿಂದ ಹಿಂದುತ್ವದ ಉನ್ಮಾದ ಕೆರಳಿಸಿ, ದಲಿತರ ರಕ್ಷಣೆಗೆ ಇರುವ ಮೀಸಲಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆಯನ್ನು ರದ್ದುಗೊಳಿಸಲು ಅದು ಮಸಲತ್ತು ನಡೆಸಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶವೊಂದು ಅಟ್ರಾಸಿಟಿ ಕಾಯ್ದೆಗೆ ಎದುರಾದ ಗಂಡಾಂತರಕ್ಕೆ ಸಾಕ್ಷಿಯಾಗಿದೆ. ಮೋದಿ ಸರಕಾರ ಮೇಲ್ನೋಟಕ್ಕೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿ, ನಾಟಕ ಮಾಡಿದರೂ ಇದನ್ನು ರದ್ದುಗೊಳಿಸಬೇಕು ಎಂಬುದೇ ಅದರ ಹುನ್ನಾರವಾಗಿದೆ.

ಸಂಘ ಪರಿವಾರ ನಿಯಂತ್ರಿತ ಬಿಜೆಪಿ ಪ್ರಭುತ್ವದ ಮೇಲೆ ಹಿಡಿತ ಸಾಧಿಸಿದ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಸಮಾನತೆಯ ದನಿಗಳಿಗೆ ಗಂಡಾಂತರ ಎದುರಾಗಿದೆ. ದಿಲ್ಲಿಯ ಜೆಎನ್‌ಯುನಲ್ಲಿ ನಡೆದ ವಿದ್ಯಮಾನಗಳು, ಹೈದರಾಬಾದ್‌ನ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲ ಸಂಶಯಾಸ್ಪದ ಸಾವು. ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಅವಾಂತರಗಳು ಇವೆಲ್ಲ ಬೌದ್ಧಿಕ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರಗಳು ಆಗಿವೆ.

ಗೋರಕ್ಷಣೆ ಹೆಸರಿನಲ್ಲಿ ದಲಿತ ಮತ್ತು ದುರ್ಬಲ ಸಮುದಾಯಗಳ ಆಹಾರ ಸ್ವಾತಂತ್ರ್ಯವನ್ನೇ ನಾಶ ಮಾಡಲು ನಡೆದ ಮಸಲತ್ತು ನಮ್ಮ ಕಣ್ಣೆದುರಿಗೆ ಇದೆ. ಹರ್ಯಾಣ, ಉತ್ತರಪ್ರದೇಶ ಮುಂತಾದ ಕಡೆ ದನ ರಕ್ಷಣೆಗಾಗಿ ನಡೆದ ಮನುಷ್ಯರ ಕೊಲೆಗಳು ಅತ್ಯಂತ ಆತಂಕಕಾರಿಯಾಗಿವೆ. ಈ ಎಲ್ಲಾ ಹತ್ಯಾಕಾಂಡಗಳು ಕೇಂದ್ರದ ಬಿಜೆಪಿ ಸರಕಾರದ ವೌನ ಸಮ್ಮತಿಯಿಂದಲೇ ನಡೆದಿವೆ.

ಕಳೆದ ನಾಲ್ಕು ವರ್ಷಗಳಲ್ಲಿ ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಹೋರಾಟಗಾರ ನರೇಂದ್ರ ದಾಭೋಳ್ಕರ್, ಕಮ್ಯುನಿಸ್ಟ್ ನಾಯಕ ಹಾಗೂ ಚಿಂತಕ ಗೋವಿಂದ ಪನ್ಸಾರೆ, ಕರ್ನಾಟಕದ ಸತ್ಯಶೋಧಕ ಡಾ. ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಕಗ್ಗೊಲೆಗಳು ನಡೆದವು. ಈವರೆಗೆ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ಕೊಲೆಗಳನ್ನು ಸಂಭ್ರಮಿಸುವ ಪಾತಕಿ ಶಕ್ತಿಗಳು ಕೇಕೆ ಹಾಕಿ ನಗುತ್ತಲೇ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಅಸಹಾಯಕ ಧ್ವನಿಗಳಿಗೆ ರಕ್ಷಣೆಯಾದ ಸಂವಿಧಾನಕ್ಕೆ ಗಂಡಾಂತರ ಬಂದಿದೆ. ಕಳೆದ ಐದು ಸಾವಿರ ವರ್ಷಗಳಿಂದ ಈ ದೇಶದ ದಲಿತ ಸಮುದಾಯವನ್ನು, ಮಹಿಳೆಯರನ್ನು, ದಮನಿತ ಸಮುದಾಯಗಳನ್ನು ಯಾವ ಧರ್ಮಗ್ರಂಥಗಳೂ ಮತ್ತು ಯಾವ ಅವತಾರಗಳೂ ರಕ್ಷಿಸಲಿಲ್ಲ. ಇದಕ್ಕೆ ಬದಲಾಗಿ, ಈ ನೊಂದವರ ಪರವಾಗಿ ದನಿಯೆತ್ತಿದ ಬಸವಣ್ಣ, ಸಂತ ತುಕಾರಾಂ, ಚೋಖಾಮೇಳ ಮುಂತಾದ ಮಹಾತ್ಮರನ್ನು ಹಾಡಹಗಲೇ ಹಿಂಸಿಸಿ, ಅವರ ಧ್ವನಿಯನ್ನು ಹತ್ತಿಕ್ಕಲಾಯಿತು. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ 1.90 ಲಕ್ಷ ಶರಣರ ಹತ್ಯೆ ನಡೆಯಿತು. ಹೀಗೆ ಸತ್ಯಕ್ಕಾಗಿ ಹೋರಾಡಿದವರು, ಸಾಯುತ್ತ ಬಂದರು. ಇಂತಹ ನೊಂದ ಜೀವಿಗಳಿಗೆ ಮೊದಲ ಬಾರಿ ರಕ್ಷಣೆ ನೀಡಿದ್ದು ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ.

ಈ ಸಂವಿಧಾನದಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ರಕ್ಷಣೆ ನೀಡುವ ಅನೇಕ ಅಂಶಗಳಿವೆ. ಇಂತಹ ಸಂವಿಧಾನ ಇದ್ದಾಗಲೂ ಕೂಡ ಬೆಲ್ಚಿ, ಕೀಲವಣಮನಿ, ಕಂಬಾಲಪಲ್ಲಿ, ಖೈರ್ಲಾಂಜಿಯಂತಹ ಹತ್ಯಾಕಾಂಡಗಳು ನಡೆದವು. ಇನ್ನು ಈ ಸಂವಿಧಾನವೇ ಇಲ್ಲವೆಂದಾಗ, ಈ ದೇಶದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕರ್ನಾಟಕದ ದಲಿತ ಸಮುದಾಯದ ಒಂದು ಪಂಗಡದವರು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು ನ್ಯಾಯಸಮ್ಮತವಾಗಿದೆ. ಆದರೆ ಇಡೀ ಮೀಸಲಾತಿ ವ್ಯವಸ್ಥೆಯನ್ನೇ ನಾಶಪಡಿಸಿ, ಸಂವಿಧಾನವನ್ನು ಸಮಾಧಿ ಮಾಡಲು ಹೊರಟವರ ಬಗ್ಗೆ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.

ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ. ಯಾರನ್ನು ಸೋಲಿಸಬೇಕು ಎಂಬುದು ಮುಖ್ಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ, ನೀರವ್ ಮೋದಿ, ಲಲಿತ್ ಮೋದಿ, ವಿಜಯ ಮಲ್ಯ ಬ್ಯಾಂಕುಗಳನ್ನು ಸಾವಿರಾರು ಕೋಟಿ ರೂಪಾಯಿ ದೋಚಿಕೊಂಡು ಹೋಗಲು ಅವಕಾಶ ನೀಡಿದ, ನೋಟು ಅಮಾನ್ಯೀಕರಣದ ಹೆಸರಿನಲ್ಲಿ ಜನರಿಗೆ ಚಿತ್ರಹಿಂಸೆ ನೀಡಿದ, ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ, ತಮ್ಮ ಕ್ರಿಮಿನಲ್ ಕೃತ್ಯಗಳನ್ನು ಮುಚ್ಚಿಕೊಳ್ಳಲು ನ್ಯಾಯಮೂರ್ತಿ ಲೋಯಾ ಅವರ ಸಾವಿಗೆ ಕಾರಣವಾದ, ಎಂಟು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಂದು ಜೈಶ್ರೀರಾಮ ಎಂದು ಕೂಗುವ ಮತ್ತು ಆಧುನಿಕ ಭಾರತದ ಜೀವಸೆಲೆಯಾದ ಸಂವಿಧಾನವನ್ನು ಬದಲಿಸಲು ಸಂಚು ನಡೆಸಿರುವ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸುವುದು ಇಂದಿನ ಅಗತ್ಯವಾಗಿದೆ. ಈ ಬಾರಿ ಮತದಾನ ಮಾಡುವಾಗ, ಸಮಾನತೆಗಾಗಿ ದನಿಯೆತ್ತಿದ ಡಾ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಮರೆಯದಿರೋಣ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X