ಎಸೆಸೆಲ್ಸಿ: ಎಕ್ಸಲೆಂಟ್ ಶಾಲೆಗೆ ಶೇ. 100 ಫಲಿತಾಂಶ
ಮೂಡುಬಿದಿರೆ, ಮೇ 7: ಮಾರ್ಚ್ ನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ಪಡೆದಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 30 ವಿದ್ಯಾರ್ಥಿಗಳಲ್ಲಿ ಇಬ್ಬರು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು 9 ವಿದ್ಯಾರ್ಥಿಗಳು ಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿನ್ಸ್ಟನ್ ಸಿಕ್ವೇರಾ - 611 (ಶೇ.97.76) ಮತ್ತು ಪ್ರಜ್ವಲ್ 610 (ಶೇ. 97.6) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೇಯಾಗಿದ್ದಾರೆ. ಎಮ್.ಎಸ್. ಮನ್ವಂತ್-586 (93.76), ರೋಹಿತ್ ಎಮ್.ಕೆ - 579 (92.64), ಲೋಹಿತ್ ಎಮ್.ಎಸ್ - 578 (92.48), ಸುಶಾಂತ್ ಎಮ್.ಜೆ - 553 (88.48), ಸೂರ್ಯಕಿರಣ್ ಎಮ್.ಡಿ. - 533 (85.28), ಯೋಗೇಶ್ ಕೆ. - 532 (ಶೇ. 85), ಕೆ.ರಾಘವೇಂದ್ರ ಎನ್.ಕಾಮತ್ - 532 (85) ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story