ಬ್ಯಾರಿ ಅಕಾಡಮಿ: ಸಂಶೋಧನಾರ್ಥಿಗಳಿಗೆ ಕಮ್ಮಟ

ಮಂಗಳೂರು, ಮೇ 8: ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ವಿಷಯಗಳಲ್ಲಿ ಕ್ಷೇತ್ರ ಕಾರ್ಯಸಹಿತ ಸಂಶೋಧನಾ ಆಸಕ್ತರಿಗಾಗಿ ಅನುಭವಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ಒಂದು ದಿನದ ಉಚಿತ ತರಬೇತಿ ಕಮ್ಮಟ ಆಯೋಜಿಸಲು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ತೀರ್ಮಾನಿಸಿದೆ.
ಕಮ್ಮಟವು ಮಂಗಳೂರಿನಲ್ಲಿ ಜೂನ್/ಜುಲೈ ತಿಂಗಳಿನಲ್ಲಿ ನಡೆಯಲಿದೆ. ಕಮ್ಮಟದಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಹೆಸರು, ವಿಳಾಸ ಮತ್ತು ವಿದ್ಯಾರ್ಹತೆಗಳೊಂದಿಗೆ ಅರ್ಜಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಹ್ಯಾಮಿಲ್ಟನ್ ಕಾಂಪ್ಲೆಕ್ಸ್, 1ನೇ ಮಹಡಿ, ಸ್ಟೇಟ್ಬ್ಯಾಂಕ್, ಮಂಗಳೂರು 575001 ಅಥವಾ bearyacademy@yahoo.inಗೆ ಮೇ 30ರೊಳಗೆ ಸಲ್ಲಿಸುವಂತೆ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story