ಚಿಕ್ಕಮಗಳೂರು: ಜ್ಞಾನ ರಶ್ಮಿ ಶಾಲೆಗೆ 8ನೇ ಬಾರಿ ಶೇ.100 ಫಲಿತಾಂಶ
ಎಸೆಸೆಲ್ಸಿ ಫಲಿತಾಂಶ ಪ್ರಕಟ

ಆರ್.ಸಾಕ್ಷಿ, ಸಿ.ಎಚ್.ದಶಮಿ, ಮುಹಮ್ಮದ್ ಸಲೀಂ
ಚಿಕ್ಕಮಗಳೂರು, ಮೇ 8: ಇಲ್ಲಿನ ಹಳೇ ಉಪ್ಪಳ್ಳಿಯ ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸತತ 8ನೇ ಬಾರಿಗೆ ಶೇ100 ಫಲಿತಾಂಶ ದೊರಕಿದೆ.
ಶಾಲೆಯ ವಿದ್ಯಾರ್ಥಿಗಳಾದ ಮುಹಮ್ಮದ್ ಸಲೀಂ ಶೇ.92.48, ಆರ್.ಸಾಕ್ಷಿ ಶೇ.92, ಸಿ.ಎಚ್.ದಶಮಿ ಶೇ.87.52 ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಒಟ್ಟು 28 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 7 ವಿದ್ಯಾರ್ಥಿಗಳು ಅತ್ಯುನ್ನತ, 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಿದ ಶಿಕ್ಷಕರಿಗೆ, ಶಾಲಾ ಆಡಳಿತ ಮಂಡಳಿಯವರಿಗೆ, ವಿದ್ಯಾರ್ಥಿಗಳಿಗೆ, ಪ್ರಾಚಾರ್ಯೆ ಎಚ್.ಪಾಲಾಕ್ಷಮ್ಮ ಮತ್ತು ಕಾರ್ಯದರ್ಶಿ ನಂದಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Next Story





