ಮತದಾನ ಜಾಗೃತಿಗೆ ವಿಶಿಷ್ಟ ಶಿಲ್ಪಅನಾವರಣ

ಉಡುಪಿ, ಮೇ 8: ಮಣಿಪಾಲ ಸ್ಯಾಂಡ್‌ಹಾರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ವೆಂಕಿ ಪಲಿಮಾರು ಅವರು ‘ಕರ್ನಾಟಕ ವಿಧಾನಸಭಾ ಚುಣಾವಣೆ-2018’ರ ಸಲುವಾಗಿ ಮಿಶ್ರ ಮಾಧ್ಯಮದಲ್ಲಿ ಮತದಾನ ಜಾಗೃತಿ ವಿಶಿಷ್ಟ ಶಿಲ್ಪವನ್ನು ಚಿತ್ರಾಲಯ ಕಲಾ ಗ್ಯಾಲರಿಯಲ್ಲಿ ಅನಾವರಣ ಗೊಳಿಸಿದ್ದಾರೆ.
‘ಮತದಾನ ಮಾಡುವುದು ನಮ್ಮ ಕರ್ತವ್ಯ’, ‘ಈ ಹಕ್ಕನ್ನು ಕಳೆದುಕೊಳ್ಳಬೇಡಿ’, ‘ನಿಮ್ಮ ಅಮೂಲ್ಯವಾದ ಮತವನ್ನು ಕ್ಷುಲ್ಲಕ ಆಮಿಷಗಳಿಗೆ ಮಾರಿಕೊಳ್ಳಬೇಡಿ’, ‘ಪ್ರಜ್ಞಾವಂತರಾಗಿ ಮತದಾನ ಮಾಡಿ ದೇಶದ ಏಳಿಗೆಯಲ್ಲಿ ನಿಮ್ಮ ಪಾತ್ರವನ್ನು ನಿರ್ವಹಿಸಿ’ ಎಂದು ಈ ಕಲಾಕೃತಿಯ ಮೂಲಕ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಚಿತ್ರ ನಿರ್ಮಾತೃ ಕಲಾವಿದರು ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಈ ಕಲಾಕೃತಿಯನ್ನು ಜಿಲ್ಲೆಯಾದ್ಯಂತ ಹಾಗೂ ಕರಾವಳಿಯ ಕಡಲ ಕಿನಾರೆಗಳಲ್ಲಿ ಪ್ರದರ್ಶಿಸಲು ಕಲಾವಿದರು ನಿರ್ಧರಿಸಿದ್ದಾರೆ. ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರು ಮೇ 12ರಂದು ತಪ್ಪದೆ ಮತದಾನ ಮಾಡುವಂತೆ ಕಲಾವಿದರು ತಮ್ಮ ಈ ಕಲಾಕೃತಿಯ ಮೂಲಕ ಕಳಕಳಿಯ ಮನವಿಮಾಡಿದ್ದಾರೆ.
Next Story





