ಬಿಜೆಪಿಗೆ ಕರ್ನಾಟಕದಲ್ಲಿ ನಾಯಕರೇ ಇಲ್ಲ: ರಾಜ್ ಬಬ್ಬರ್ ಟೀಕೆ

ಉಡುಪಿ, ಮೇ 8: ಬಿಜೆಪಿಗೆ ಕರ್ನಾಟಕದಲ್ಲಿ ನಾಯಕರೇ ಇಲ್ಲ. ಹೀಗಾಗಿ ಅವರು ಮೋದಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಆದುದ ರಿಂದ ಈ ಬಾರಿಯ ಚುನಾವಣೆಯು ಸಿದ್ಧರಾಮಯ್ಯ ಹಾಗೂ ನರೇಂದ್ರ ಮೋದಿ ನಡುವೆ ನಡೆಯುತ್ತಿದೆ ಎಂದು ಚಲನಚಿತ್ರ ನಟ ಹಾಗೂ ಲೋಕಸಭಾ ಸದಸ್ಯ ರಾಜ್ ಬಬ್ಬರ್ ಹೇಳಿದ್ದಾರೆ.
ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಿರಿಯಡ್ಕದಲ್ಲಿ ಮಂಗಳ ವಾರ ನಡೆದ ಕಾಪು ಕ್ಷೇತ್ರ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಪರ ಚುನಾ ವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಚೌಕಿದಾರ, ಪ್ರಧಾನ ಸೇವಕ ಎಂದು ಹೇಳುವ ನರೇಂದ್ರ ಮೋದಿ ನಾಲ್ಕು ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಚುನಾ ವಣೆಗೆ ಮೊದಲು ನೀಡಿದ ಪ್ರತಿಯೊಬ್ಬರ ಖಾತೆಗೆ 15ಲಕ್ಷ ಜಮೆ ಮಾಡುವ ಭರವಸೆಯನ್ನು ಈಡೇರಿಸಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ ಎಂದರು.
ಮೀನುಗಾರರಿಗೆ ಡಿಸೇಲ್ ಸಬ್ಸಿಡಿ ನೀಡುವ ಏಕೈಕ ರಾಜ್ಯ ಅಂದರೆ ಕರ್ನಾಟಕ ಮಾತ್ರ. ಬಿಜೆಪಿ ಅಧಿಕಾರ ಇರುವ ಯಾವುದೇ ರಾಜ್ಯದಲ್ಲಿ ಈ ರೀತಿಯ ಸೌಲಭ್ಯ ಇಲ್ಲ. ಪ್ರಧಾನ ಸೇವಕ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಬ್ಯಾಂಕ್ ಲೂಟಿ ಮಾಡಿದವರಿಗೆ ವಿದೇಶಕ್ಕೆ ಓಡಿ ಹೋಗಲು ಅನುವು ಮಾಡಿಕೊಟ್ಟರು. ಮಕ್ಕಳು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಮೋದಿ ಮಾತನಾಡುತ್ತಿಲ್ಲ ಎಂದು ಅವರು ದೂರಿದರು.
ಸಿದ್ಧರಾಮಯ್ಯ ಕಳೆದ ಐದು ವರ್ಷಗಳಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಗಳನ್ನು ಜಾರಿಗೆ ತಂದರು. ಆದರೆ ದೇಶದ ಇತರ ರಾಜ್ಯಗಳಲ್ಲಿ ಅಧಿಕಾರ ನಡೆಸುವ ಬಿಜೆಪಿ ಇಂದಿರಾ ಕ್ಯಾಂಟಿನ್ ನಂತಹ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆಯೇ ಎಂದು ರಾಜ್ ಬಬ್ಬರ್ ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಮಾತನಾಡಿ, ಜಾತಿ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ವಿರುದ್ಧ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಕಾಪು ಕ್ಷೇತ್ರವೊಂದರಲ್ಲೇ 14 ದೇವಸ್ಥಾನಗಳ ಜೀರ್ಣೋ ದ್ಧಾರಕ್ಕೆ ರಾಜ್ಯ ಸರಕಾರ ಸಹಾಯ ಮಾಡಿದೆ. ರಾಜಕೀಯದಲ್ಲಿ ಧರ್ಮ ಇರ ಬೇಕೆ ಹೊರತು ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಯು.ಆರ್.ಸಭಾಪತಿ, ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಎಂ.ಎ.ಗಫೂರ್, ಡೋಮನಿಕ್, ಸುಧೀರ್ ಹೆಗ್ಡೆ, ಮಹಾಬಲ ಕುಂದರ್, ಹರೀಶ್ ಕುಮಾರ್, ಹರೀಶ್ ಕಿಣಿ, ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು.







