ಮಲ್ಯನಿಂದ ಸಾಲ ವಸೂಲು ಮಾಡಲು ಬ್ಯಾಂಕ್‌ಗಳಿಗೆ ಬ್ರಿಟನ್ ಕೋರ್ಟ್ ಅಸ್ತು

ಲಂಡನ್, ಮೇ 8: ವಿಜಯ ಮಲ್ಯ ತಮಗೆ ವಂಚಿಸಿರುವ 12,000 ಕೋಟಿ ರೂಪಾಯಿ ಮೊತ್ತವನ್ನು ವಸೂಲಿ ಮಾಡಲು ಅವಕಾಶ ನೀಡಬೇಕೆಂದು ಕೋರಿ ಭಾರತೀಯ ಬ್ಯಾಂಕ್‌ಗಳು ಸಲ್ಲಿಸಿರುವ ಮನವಿಗೆ ಬ್ರಿಟನ್‌ನ ನ್ಯಾಯಾಲಯವೊಂದು ಅನುಮತಿ ನೀಡಿದೆ.
ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್‌ಗೆ ನೀಡಲಾಗಿರುವ ಸಾಲಗಳಿಗೆ ಸಂಬಂಧಿಸಿ ಭಾರತೀಯ ನ್ಯಾಯಾಲಯಗಳ ಆದೇಶವನ್ನು ಮಲ್ಯ ಮೇಲೆ ಜಾರಿಗೊಳಿಸಬಹುದಾಗಿದೆ ಎಂದು ಲಂಡನ್ ನ್ಯಾಯಾಧೀಶ ಆ್ಯಂಡ್ರೂ ಹೆನ್‌ಶಾ ಹೇಳಿದರು.
ಅದೇ ವೇಳೆ, ಮಲ್ಯ ಜಾಗತಿಕ ಆಸ್ತಿಗಳನ್ನು ಮುಟ್ಟುಗೋಲಿನಿಂದ ತೆರವುಗೊಳಿಸಲೂ ನ್ಯಾಯಾಧೀಶರು ನಿರಾಕರಿಸಿದರು.
ಬ್ಯಾಂಕ್‌ಗಳಿಗೆ ಮಾಡಿರುವ ವಂಚನೆ ಮತ್ತು ಕಪ್ಪುಹಣ ಬಿಳುಪಿಗೆ ಸಂಬಂಧಿಸಿ 62 ವರ್ಷದ ಮಾಜಿ ಮದ್ಯ ದೊರೆ ಬ್ರಿಟನ್ ಮತ್ತು ಭಾರತಗಳೆರಡರಲ್ಲೂ ಹಲವಾರು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾನೆ.
ನ್ಯಾಯಾಲಯದ ಈ ತೀರ್ಪು, ಭಾರತೀಯ ಸಾಲ ವಸೂಲಾತಿ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ತಕ್ಷಣ ಜಾರಿಗೊಳಿಸಲು ತಮಗೆ ಅವಕಾಶ ನೀಡುತ್ತದೆ ಎಂದು ಐಡಿಬಿಐ ಬ್ಯಾಂಕ್ ಲಿ. ಸೇರಿದಂತೆ ಹಲವಾರು ಬ್ಯಾಂಕ್‌ಗಳನ್ನು ಪ್ರತಿನಿಧಿಸುವ ಕಾನೂನು ಸಂಸ್ಥೆ ಲಂಡನ್‌ನ ಟಿಎಲ್‌ಟಿಯ ವಕೀಲರು ಹೇಳಿದರು.







