ಹನೂರು: ಹನೂರು ಶೈಕ್ಷಣಿಕ ವಲಯ ಸತತ ಮೂರನೇ ಬಾರಿಗೆ ಪ್ರಥಮ
ಎಸೆಸೆಲ್ಸಿ ಫಲಿತಾಂಶ ಪ್ರಕಟ

ಹನೂರು,ಮೇ.09 : 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹನೂರು ಶೈಕ್ಷಣಿಕ ವಲಯವು ಶೇಕಡ 88.79ರಷ್ಟು ಫಲಿತಾಂಶವನ್ನು ಪಡೆಯುವುದರ ಮೂಲಕ ಜಿಲ್ಲೆಯಲ್ಲಿ ಸತತ ಮೂರನೇ ಬಾರಿಗೆ ಪ್ರಥಮ ಸ್ಥಾನವನ್ನು ಪಡೆದಿದೆ.
ಹನೂರು ಶೈಕ್ಷಣಿಕ ವಲಯದಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನರಹಿತ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಂದ ಒಟ್ಟು 1,820 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,616 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡ 88.79ರಷ್ಟು ಫಲಿತಾಂಶ ಪಡೆದುಕೊಂಡಿದೆ. ಈ ಬಾರಿಯೂ ಹ್ಯಾಟ್ರಿಕ್ ಬಾರಿಸಿದೆ. ಅದರಲ್ಲಿ ಕೌದಳ್ಳಿಯ ಸರ್ಕಾರಿ ಪ್ರೌಢಶಾಲೆ, ಪೊನ್ನಾಚಿಯ ಸಾಲೂರು ಕೃಪಾಪೋಷಿತ ಶಾಲೆ, ರಾಮಾಪುರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ತೊಮಿಯಾರ್ ಪಾಳ್ಯದ ಸಂತಥಾಮಸ್ ಶಾಲೆ, ಮಾರ್ಟಳ್ಳಿಯ ಸಂತ ಮೇರಿಸ್ ಪ್ರೌಢಶಾಲೆ, ಶೇಕಡ 100ರಷ್ಟು ಫಲಿತಾಂಶವನ್ನು ಪಡೆದಿದೆ.
ಇನ್ನು ಹನೂರಿನ ಶ್ರೀವಿವೇಕಾನಂದ ಪ್ರೌಢಶಾಲೆ ಶೇ.98.76, ಪಿ.ಜಿ ಪಾಳ್ಯದ ನಿರ್ಮಲ ಶಾಲೆ ಶೇ.98.70, ಚನ್ನಾಲಿಂಗನಹಳ್ಳಿ ಸರ್ಕಾರಿ ಪ್ರೌಢಶಾಲೆ ಶೇ.98.33, ಹನೂರಿನ ಮೊರಾರ್ಜಿ ದೇಸಾಯಿ ಮಾದರಿ ಶಾಲೆ ಶೇ.97.91, ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆ ಶೇ.97.61, ರಾಮಾಪುರದ ಸರ್ಕಾರಿ ಪ್ರೌಢಶಾಲೆ ಶೇ.97.15, ಮ.ಬೆಟ್ಟದ ಮಹದೇಶ್ವರ ಶಾಲೆ ಶೇ.97, ಎಲ್ಲೇಮಾಳ ಸರ್ಕಾರಿ ಶಾಲೆ ಶೆ.95.8, ಲೊಕ್ಕನಹಳ್ಳಿ, ಮಾರಳ್ಳಿ ಸರ್ಕಾರಿ ಶಾಲೆ ಶೇ.95, ಕೌದಳ್ಳಿ ಸಂತ ಅಂತೋಣಿ ಪ್ರೌಢಶಾಲೆ ಶೇ.94.91, ಗೋಪಿನಾಥಂ ಸರ್ಕಾರಿ ಪ್ರೌಢಶಾಲೆ ಶೇ.94.65, ಮಾರಳ್ಳಿ ಹಾಗೂ ಕುರಟ್ಟಿಹೊಸೂರು ಪ್ರೌಢಶಾಲೆ ಶೇ.94.11, ಹನೂರಿನ ಕ್ರಿಸ್ತರಾಜ ಶಾಲೆ ಶೇ.93 ಹಾಗೂ ಅಜ್ಜೀಪುರದ ಜೆಎಸ್‍ಎಸ್ ಪ್ರೌಢಶಾಲೆ ಶೆ.91.66ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.
ವಲಯದ ಟಾಫರ್ಸ್: ಶೈಕ್ಷಣಿಕ ವಲಯದ ವಿವಿಧ ಶಾಲೆಗಳಿಂದ ಕನ್ನಡದಲ್ಲಿ 13 ವಿದ್ಯಾರ್ಥಿಗಳು 125ಕ್ಕೆ 125 ಅಂಕ, ಇಂಗ್ಲೀಷ್‍ನಲ್ಲಿ 5 ವಿದ್ಯಾರ್ಥಿಗಳು 100ಕ್ಕೆ 100, ಹಿಂದಿಯಲ್ಲಿ 8 ಮಂದಿ 100 ಅಂಕವನ್ನು ಪಡೆದಿದ್ದರೆ, ವಿಜ್ಞಾನದಲ್ಲಿ ಮೂವರು 96 ಅಂಕ ಹಾಗೂ ಸಮಾಜದಲ್ಲಿ ಮೂವರು 99 ಅಂಕವನ್ನು ಪಡೆದಿರುವುದರ ಮೂಲಕ ಶೈಕ್ಷಣಿಕ ವಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ಹನೂರಿನ ಕ್ರಿಸ್ತರಾಜ ಶಾಲೆಯ ವಿದ್ಯಾರ್ಥಿನಿ ಪ್ರೇರಿತಾ 611 ಅಂಕವನ್ನು ಗಳಿಸುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ ರಾಜ್ಯದ ಶೈಕ್ಷಣಿಕ ವಲಯಗಳಲ್ಲಿ 8ನೇ ಸ್ಥಾನ ಪಡೆದಿದ್ದ ಹನೂರು ಈ ಬಾರಿ 22ನೇ ಸ್ಥಾನಕ್ಕಿಳಿದಿದೆ.







