ಸಂಘ ಪರಿವಾರ ತೊರೆದಿಲ್ಲ - ಸತ್ಯಜಿತ್ ಸುರತ್ಕಲ್

ಮಂಗಳೂರು, ಮೇ 9: ಸಂಘ ಪರಿವಾರ ತೊರೆದಿಲ್ಲ .ನನ್ನ ಮೇಲೆ ಮಾಡುತ್ತಿರುವ ಆರೋಪಗಳಿಂದ ನೋವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಾನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ .ಅದು ಕಾರಣಾಂತರದಿಂದ ತಪ್ಪಿದೆ ಬಳಿಕ ನಾನು ತಟಸ್ಥನಾಗಿದ್ದೆ. ಆದರೆ ಆ ಬಳಿಕ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿರುವುದರಿಂದ ನನಗೆ ನೋವಾಗಿದೆ ಎಂದು ಸತ್ಯಜಿತ್ ಸುರತ್ಕಲ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಲೋಕ ಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ?
ಸತ್ಯಜಿತ್ ಸುರತ್ಕಲ್ ದ.ಕ. ಜಿಲ್ಲೆಯ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬ ವದಂತಿಗಳ ಬಗ್ಗೆ ಸತ್ಯಜಿತ್ ಬಳಿ ಕೇಳಿದಾಗ ಈ ರೀತಿಯ ವದಂತಿ ಹರಡಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ ಈ ಬಗ್ಗೆ ಯಾವೂದೇ ನಿರ್ಧಾರ ಇನ್ನೂ ಆಗಿಲ್ಲ ಎಂದು ಸತ್ಯಜಿತ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕುಸುಮಾಕರ ಶೆಟ್ಟಿ , ಆರ್.ಎನ್.ಶೆಟ್ಟಿ, ಜಾನ್ ಡಿ ಸೋಜ, ಶ್ರೀಧರ್ , ಆನಂದ್ ಮೊದಲಾದವರು ಉಪಸ್ಥಿತರಿದ್ದರು.







