Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಡೇರಾ ಅನುಯಾಯಿಯ ಕೊಲೆಯಲ್ಲೂ ಗುರ್ಮೀತ್...

ಡೇರಾ ಅನುಯಾಯಿಯ ಕೊಲೆಯಲ್ಲೂ ಗುರ್ಮೀತ್ ಶಾಮೀಲು: ಮಾಜಿ ಚಾಲಕನಿಂದ ಸಿಬಿಐ ನ್ಯಾಯಾಲಯದ ಮುಂದೆ ಸಾಕ್ಷ್ಯ

ವಾರ್ತಾಭಾರತಿವಾರ್ತಾಭಾರತಿ9 May 2018 5:40 PM IST
share
ಡೇರಾ ಅನುಯಾಯಿಯ ಕೊಲೆಯಲ್ಲೂ ಗುರ್ಮೀತ್ ಶಾಮೀಲು: ಮಾಜಿ ಚಾಲಕನಿಂದ ಸಿಬಿಐ ನ್ಯಾಯಾಲಯದ ಮುಂದೆ ಸಾಕ್ಷ್ಯ

ಪಂಚಕುಲ, ಮೇ 9: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ನ ಮಾಜಿ ಚಾಲಕ ಖಟ್ಟಾ ಸಿಂಗ್ ಇಂದು ಇಲ್ಲಿನ ಸಿಬಿಐ ನ್ಯಾಯಾಲಯದೆದುರು ಹಾಜರಾಗಿ ಡೇರಾ ಅನುಯಾಯಿ ರಂಜಿತ್ ಸಿಂಗ್ ಎಂಬಾತನ ಕೊಲೆಯಲ್ಲೂ ಗುರ್ಮೀತ್ ಭಾಗಿಯಾಗಿದ್ದಾನೆಂಬುದಕ್ಕೆ ಸಾಕ್ಷ್ಯ ನುಡಿದಿದ್ದಾನೆ.

ಸಿರ್ಸಾದಲ್ಲಿನ ಡೇರಾ ಮುಖ್ಯ ಕಾರ್ಯಾಲಯದಲ್ಲಿರುವ ತನ್ನ ಗುಹೆಯಲ್ಲಿ ಜೂನ್ 16,2002ರಂದು  ತನ್ನ  ಸಹವರ್ತಿಗಳ ಸಭೆಯೊಂದರಲ್ಲಿ ರಂಜಿತ್ ನನ್ನು ಕೊಲ್ಲಲು ಗುರ್ಮೀತ್ ಆದೇಶಿಸಿದ್ದನೆಂದು ಹಾಗೂ ಆಗ ತಾನು ಕೂಡ ಅಲ್ಲಿದ್ದುದಾಗಿ ಖಟ್ಟಾ ಸಿಂಗ್ ನ್ಯಾಯಾಲಯದೆದುರು ತಿಳಿಸಿದ್ದಾನೆ. ತನ್ನ ಸೋದರಿಯನ್ನು ಗುರ್ಮೀತ್ ಲೈಂಗಿಕವಾಗಿ ಬಳಸಿಕೊಂಡಿದ್ದನೆಂದು ತಿಳಿದ ನಂತರ ರಂಜಿತ್ ಆತನ ವಿರುದ್ಧ ಹೋಗಿದ್ದನೆಂದು ಗುರ್ಮೀತ್ ಗೆ ಶಂಕೆ ಮೂಡಿದ್ದೇ ಆತನ ಕೊಲೆಗೆ ಕಾರಣವೆಂದು ಖಟ್ಟಾ ಹೇಳಿದ್ದಾನೆ.

ಡೇರಾದಲ್ಲಿನ ಸಾಧ್ವಿಗಳ ಮೇಲೆ ನಡೆದಿದೆಯೆನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಅನಾಮಿಕ ಪತ್ರವೊಂದು ಹರಿದಾಡಲು ಕೂಡ ರಂಜಿತ್ ನೇ ಕಾರಣವೆಂದು ಗುರ್ಮೀತ್ ನಂಬಿದ್ದನೆಂದು ಖಟ್ಟಾ ತಿಳಿಸಿದ್ದಾನೆ. ಕಳೆದ ವರ್ಷ ಗುರ್ಮೀತ್ 20 ವರ್ಷ ಜೈಲು ಶಿಕ್ಷೆ ಪಡೆಯಲು ಇದು ಪ್ರಮುಖ ಕಾರಣವಾಗಿತ್ತಲ್ಲದೆ ರಂಜಿತ್ ಸೋದರಿ ಕೂಡ ಆತನ ವಿರುದ್ಧ ಸಾಕ್ಷ್ಯ ನುಡಿದಿದ್ದಳು.

ಖಟ್ಟಾ ಸಾಕ್ಷ್ಯ ನುಡಿಯುವಾಗ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರ್ಮೀತ್ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದ. ಖಟ್ಟಾ ಸಿಂಗ್ ಮೇ 15ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದು ಆಗ ಪ್ರತಿವಾದಿ ವಕೀಲರು ಆತನನ್ನು ಪಾಟೀ ಸವಾಲಿಗೊಡ್ಡಲಿದ್ದಾರೆ. ರಂಜಿತ್ ನನ್ನು ಆತನ ಹುಟ್ಟೂರಾದ ಕುರುಕ್ಷೇತ್ರದ ಖಾನ್ಪುರ್ ಕೊಲಿಯನ್ ಗ್ರಾಮದಲ್ಲಿ ಜುಲೈ 10, 2002ರಂದು  ಕೊಲೆಗೈಯ್ಯಲಾಗಿತ್ತು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಚಹಾ ನೀಡಿ ತನ್ನ ಮೋಟಾರ್ ಸೈಕಲ್ ನಲ್ಲಿ  ಹಿಂದಿರುಗುತ್ತಿದ್ದ ರಂಜಿತ್ ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆತನಿಗೆ ಗುಂಡಿಕ್ಕಿ ಪರಾರಿಯಾಗಿದ್ದರು.

ತನಗೆ ರಂಜಿತ್ ಬಹಳ ವರ್ಷಗಳಿಂದ ಗೊತ್ತು, ಆತನ ಪುತ್ರಿಯರು ಮತ್ತು ಸೋದರಿ ಡೇರಾದಲ್ಲಿಯೇ ಇದ್ದರೂ ಅವರನ್ನು 2001ರಲ್ಲಿ ಆತ ಅಲ್ಲಿಂದ ಹಿಂದಕ್ಕೆ ಕರೆದುಕೊಂಡು ಬಂದಿದ್ದ. ನಂತರ ತನ್ನ ಸೋದರಿಯ ಮೇಲೆ ಗುರ್ಮೀತ್ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿದು ಆತ ಸಿಟ್ಟುಗೊಂಡಿದ್ದ.  ಈ ಬಗ್ಗೆ ತಿಳಿದಿದ್ದ ಗುರ್ಮೀತ್ ಒಮ್ಮೆ ಆತನಿಗೆ ಕರೆ ಕಳುಹಿಸಿ ಎಚ್ಚರಿಕೆ ನೀಡಿದ್ದರೂ  ಫಲ ನೀಡದೇ ಇದ್ದಾಗ ಆತನ ಹತ್ಯೆ ನಡೆದಿತ್ತು ಎಂದು ಖಟ್ಟಾ ತಿಳಿಸಿದ್ದಾನೆ. ಡೇರಾ ಮುಖ್ಯಸ್ಥ ಪ್ರಮುಖ ಆರೋಪಿಯಾಗಿರುವ ಪತ್ರಕರ್ತನ ಕೊಲೆ ಪ್ರಕರಣವೊಂದರಲ್ಲೂ ಖಟ್ಟಾ ಮೇ 5ರಂದು ಸಾಕ್ಷ್ಯ ನುಡಿದಿದ್ದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X