ವಿತರಣೆಯಾಗದ ವೋಟರ್ ಸ್ಲಿಪ್ ಮತದಾನದ ದಿನದಂದು ವಿತರಣೆ: ಉಡುಪಿ ಡಿಸಿ
ಉಡುಪಿ, ಮೇ 9: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರತಿ ಮತದಾರನ ಮನೆಗೆ ವೋಟರ್ ಸ್ಲಿಪ್‌ಗಳನ್ನು ವಿತರಿಸುವಂತೆ ಎಲ್ಲಾ ಬಿಎಲ್‌ಓಗಳಿಗೆ ಸೂಚನೆ ನೀಡಲಾಗಿದ್ದು, ವಿತರಣೆಯಾಗದೇ ಇರುವ ವೋಟರ್ ಸ್ಲಿಪ್‌ಗಳನ್ನು, ಆಯಾ ಮತಗಟ್ಟೆ ವ್ಯಾಪ್ತಿಯ ಬಿಎಲ್‌ಒಗಳ ವಶದಲ್ಲಿಯೇ ಇರಿಸಲಾಗಿದೆ.
ಮತದಾನದ ದಿನವಾದ ಮೇ 12ರಂದು ಮತಗಟ್ಟೆ ಹೊರಗೆ ಸ್ಥಾಪಿಸುವ ಮತದಾರರ ಸಹಾಯ ಕೇಂದ್ರದಲ್ಲಿ ಹಾಜರಿರುವ ಬಿಎಲ್‌ಒಗಳಿಗೆ ಮತದಾರ ರಿಗೆ ವೋಟರ್ ಸ್ಲಿಪ್‌ಗಳನ್ನು ವಿತರಿಸುವಂತೆ ಸೂಚಿಸಲಾಗಿದೆ. ವೋಟರ್ ಸ್ಲಿಪ್ ಪಡೆಯದೇ ಇರುವ ಮತದಾರರು ಇವುಗಳನ್ನು ಪಡೆದು ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
Next Story





