ಗೋಪಾಲ ಭಂಡಾರಿ ಪರ ಕುಟುಂಬ ಸದಸ್ಯರಿಂದ ಮತಯಾಚನೆ

ಹೆಬ್ರಿ, ಮೇ 9: ಕಾಂಗ್ರೆಸ್ ಪಕ್ಷದ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್. ಗೋಪಾಲ ಭಂಡಾರಿ ಪರವಾಗಿ ಅವರ ಪತ್ನಿ ಪ್ರಕಾಶಿನಿ ಭಂಡಾರಿ, ಮಗಳು ದೀಪಾ ಭಂಡಾರಿ, ಅಳಿಯ ಶ್ವೇತಾ ಕುಮಾರ್, ಸೊಸೆ ಅಕ್ಷತಾ ಪ್ರದೀಪ್ ಭಂಡಾರಿ, ಮಗ ಸುದೀಪ್ ಭಂಡಾರಿ, ಪ್ರದೀಪ್ ಭಂಡಾರಿ, ಗೋಪಾಲ ಭಂಡಾರಿ ಸಹೋದರ ಎಚ್. ರಾಜೇಶ್ ಭಂಡಾರಿ ಸಹಿತ ಕುಟುಂಬಸ್ಥದ ಸದಸ್ಯರು ಕ್ಷೇತ್ರದಾದ್ಯಂತ ಸಂಚರಿಸಿ ಮತಯಾಚನೆ ನಡೆಸಿದರು.
ಕಾರ್ಕಳ ಕ್ಷೇತ್ರದ ವಿವಿಧ ಗೇರುಬೀಜದ ಕಾರ್ಖಾನೆಗಳ ಸಹಿತ ವಿವಿದೆಡೆ ಭೇಟಿ ನೀಡಿದ ಅವರು ಮತಯಾಚನೆ ನಡೆಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ಹೆಬ್ರಿ ಪೇಟೆಯ ವಿವಿದೆಡೆಯಲ್ಲಿ ಮಂಗಳವಾರ ನೂರಾರು ಬೆಂಬಲಿಗರೊಂದಿಗೆ ತೆರಳಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಮುಖಂಡರಾದ ಸೀತಾನದಿ ರಮೇಶ ಹೆಗ್ಡೆ, ಎಚ್.ಜಯಕರ ಪೂಜಾರಿ, ಎಚ್.ಶೀನಾ ಪೂಜಾರಿ, ಧೀರಜ್ ಕುಮಾರ್ ಶೆಟ್ಟಿ, ಎಚ್.ಭೋಜ ಪೂಜಾರಿ, ವರಂಗ ಲಕ್ಷ್ಮಣ ಆಚಾರ್, ಎಚ್.ನರೇಂದ್ರ ನಾಯಕ್, ತಣ್ಣೀರು ಉದಯ ಆಚಾರ್, ಮಠದಬೆಟ್ಟು ರಾಜೇಶ್ ಆಚಾರ್, ಸತೀಶ್ಚಂದ್ರ ಹೆಗ್ಡೆ, ಅಣ್ಣಪ್ಪ ಕುಲಾಲ್, ಸೀತಾನದಿ ಚಂದ್ರಶೇಖರ ಶೆಟ್ಟಿ, ಕಾಸನಮಕ್ಕಿ ಮಹೇಶ ಶೆಟ್ಟಿ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು ಭಾಗವಹಿಸಿದ್ದರು.







