ಬಂಟ್ವಾಳದಲ್ಲಿ ಗುಲಾಂ ನಬಿ ಆಝಾದ್ 'ರೋಡ್ ಶೋ'
ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ಮತಯಾಚನೆ
.jpg)
ಬಂಟ್ವಾಳ, ಮೇ 9: ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಝಾದ್ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಸಂಜೆ ರೋಡ್ ಶೋ ನಡೆಸಿ, ಕ್ಷೇತ್ರದ ಅಭ್ಯರ್ಥಿ ರಮಾನಾಥ ರೈ ಪರ ಮತ ಯಾಚಿಸಿದರು.
ನೂರಾರು ಕಾರ್ಯಕರ್ತರೊಂದಿಗೆ ಜೀಪ್‌ನಲ್ಲಿ ನಿಂತು ಕೊಂಡು ರಾಷ್ಟ್ರೀಯ ಹೆದ್ದಾರಿಯ ಕೈಕಂಬದಿಂದ, ಬಿ.ಸಿ.ರೋಡ್, ಅಕ್ಕರಂಗಡಿ, ಪಾಣೆಮಂಗಳೂರು ಮಾರ್ಗವಾಗಿ ಮೆಲ್ಕಾರ್ ತನಕ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲಿಯಾನ್, ಯು.ಬಿ.ವೆಂಕಟೇಶ್, ಚಂದ್ರಪ್ರಕಾಶ್ ಶೆಟ್ಟಿ, ಸದಾಶಿವ ಬಂಗೇರ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Next Story





