ಎಸ್ಸೆಸ್ಸೆಲ್ಸಿ: ಕನ್ನಡ ಮಾಧ್ಯಮದಲ್ಲಿ ಸರ್ವೆ ಶಾಲೆಯ ದಿಲ್ಶಾನ ಪುತ್ತೂರು ತಾಲೂಕಿಗೆ ದ್ವಿತೀಯ

ಪುತ್ತೂರು, ಮೇ 9: 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 595 ಅಂಕ(ಶೇ.95.2) ಪಡೆಯುವ ಮೂಲಕ ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಖದೀಜತ್ ದಿಲ್ಶಾನ ಅವರು ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡದಲ್ಲಿ 125ಕ್ಕೆ 125, ಇಂಗ್ಲೀಷ್-97, ಸಮಾಜ ವಿಜ್ಞಾನ-98, ಹಿಂದಿ-93, ವಿಜ್ಞಾನ-93 ಹಾಗೂ ಗಣಿತದಲ್ಲಿ-89 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ದಿಲ್ಶಾನ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ ಮತ್ತು ಜಮೀಳಾ ದಂಪತಿಯ ಪುತ್ರಿ.
Next Story





