ಎಸ್ಸೆಸೆಲ್ಸಿ: ಕೃಷ್ಣಾಪುರ ಚೈತನ್ಯ ಪಬ್ಲಿಕ್ ಸ್ಕೂಲ್ಗೆ ಶೇ.100 ಫಲಿತಾಂಶ

ಮಂಗಳೂರು, ಮೇ 10: ಕೃಷ್ಣಾಪುರದ ಚೈತನ್ಯ ಪಬ್ಲಿಕ್ ಶಾಲೆಯು ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಗಳಿಸಿದೆ.
8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದರೆ, 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ.
ವಿದ್ಯಾರ್ಥಿಗಳಾದ ಫಾತಿಮಾ ನಝ 90.5 ಶೇ., ಶ್ರಾವ್ಯಾ 89.9 ಶೇ., ಮಧುರಾಜ್ 88.4 ಶೇ.ಆಯಿಶತುಲ್ ಹನಾನ 88.4 ಶೇ.,ನಾಝಿಯ 86.8 ಶೇ., ಪ್ರಣೀತ್ 86.5 ಶೇ. ಫಲಿತಾಂಶ ದಾಖಲಿಸಿದ್ದಾರೆ.
ಶಾಲೆಯು ಸತತ 4 ವರ್ಷಗಳಿಂದ ಎಸೆಸೆಲ್ಸಿಯಲ್ಲಿ 100 ಶೇ. ಫಲಿತಾಂಶವನ್ನು ದಾಖಲಿಸುತ್ತಿದೆ.
Next Story