ತುಂಬೆ ಜುಮಾ ಮಸೀದಿಯ ಪದಾಧಿಕಾರಿಗಳ ಆಯ್ಕೆ

ಅಬ್ದುರ್ರಹ್ಮಾನ್ ಅದ್ದಾದಿ
ತುಂಬೆ, ಮೇ 10: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಟಿ. ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಅದ್ದಾದಿ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ಮೂಸಬ್ಬ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಖಲಂದರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಇಮ್ತಿಯಾಝ್, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಇರ್ಫಾನ್ ಹಾಗೂ ವಿವಿಧ ಉಸ್ತುವಾರಿ ಹಾಗೂ ಸದಸ್ಯರಾಗಿ ಅಬ್ದುಲ್ ಅಝೀಝ್ ಟಿ., ಸಿರಾಜುದ್ದೀನ್, ಝಹೂರ್ ಅಹ್ಮದ್, ಮುಹಮ್ಮದ್ ಇಸ್ಹಾಕ್, ಮುಹಮ್ಮದ್ ಆಸೀಫ್, ಅಬ್ದುಲ್ ರಶೀದ್, ಲತೀಫ್ ಹಿಮಾಮಿ, ಝಿಯಾವುಲ್ಲಾ, ಮುಹಮ್ಮದ್ ಹನೀಫ್, ಮುಹಮ್ಮದ್ ಶರೀಫ್ ಟಿ. ಅವರನ್ನು ಆಯ್ಕೆ ಮಾಡಲಾಯಿತು.
ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ಆಶೀರ್ವಚನ ನೀಡಿದರು.
Next Story