ಅಮೆರಿಕಕ್ಕೆ ಈಗಲೂ ಕಳವಳ: ನಿಯೋಜಿತ ಸಿಐಎ ಮುಖ್ಯಸ್ಥೆ
ಉಗ್ರರು, ಪಾಕ್ ಪರಮಾಣು ವಿಜ್ಞಾನಿಗಳ ನಡುವಿನ ಸಂಭಾವ್ಯ ಸಂಬಂಧ

ವಾಶಿಂಗ್ಟನ್, ಮೇ 10: ಪಾಕಿಸ್ತಾನದ ಪರಮಾಣು ವಿಜ್ಞಾನಿಗಳು ಮತ್ತು ಭಯೋತ್ಪಾದಕ ಗುಂಪುಗಳ ನಡುವಿನ ಸಂಭಾವ್ಯ ಸಂಪರ್ಕದ ಬಗ್ಗೆ ಸಿಐಎ ಈಗಲೂ ಕಳವಳ ಹೊಂದಿದೆ ಹಾಗೂ ಈ ಬಗ್ಗೆ ನಿಕಟ ನಿಗಾ ಇಟ್ಟಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ನಿಯೋಜಿತ ಮುಖ್ಯಸ್ಥೆ ಗಿನಾ ಹ್ಯಾಸ್ಪೆಲ್ ಅಮೆರಿಕ ಸೆನೆಟ್‌ಗೆ ಹೇಳಿದ್ದಾರೆ.
‘‘ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಪರಮಾಣು ವಿಜ್ಞಾನಿಗಳ ನಡುವಿನ ಸಂಭಾವ್ಯ ಸಂಪರ್ಕಗಳ ಬಗ್ಗೆ ಹಿಂದೆ ಭಾರೀ ಕಳವಳವಿತ್ತು. ಈಗಲೂ ಕಳವಳ ಹೋಗಿಲ್ಲ’’ ಎಂದು ಬುಧವಾರ ಸೆನೆಟ್ ಸೆಲೆಕ್ಟ್ ಇಂಟಲಿಜನ್ಸ್ ಕಮಿಟಿಯ ಮುಂದೆ ಮಾತನಾಡಿದ ಅವರು ಹೇಳಿದರು.
ಸಿಐಎಯ ನೂತನ ಮುಖ್ಯಸ್ಥರನ್ನಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿನಾ ಹ್ಯಾಸ್ಪೆಲ್‌ರನ್ನು ಈಗಾಗಲೇ ನಿಯೋಜಿಸಿದ್ದಾರೆ. ಈ ಆಯ್ಕೆಯನ್ನು ಸೆನೆಟ್ ಖಚಿತಪಡಿಸಿದರೆ, ಅವರು ಅಮೆರಿಕದ ಗುಪ್ತಚರ ಸಂಸ್ಥೆಯ ಪ್ರಥಮ ಮಹಿಳಾ ಮುಖ್ಯಸ್ಥೆಯಾಗಲಿದ್ದಾರೆ.
Next Story





