ಪೆರ್ವಾಜೆ ಮತಕೇಂದ್ರದಲ್ಲಿ ಎರಡು ಮತಗಟ್ಟೆ ಪಿಂಕ್ ಬೂತ್

ಕಾರ್ಕಳ, ಮೇ 11: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮತ ಗಟ್ಟಗಳಿಗೆ ಸಂಬಂಧಿಸಿದಂತೆ ಎರಡು ಪಿಂಕ್ ಬೂತ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರವಾಸಿ ಮಂದಿರದ ಮುಂಭಾದಲ್ಲಿರುವ ಪೆರ್ವಾಜೆ ಮತಕೇಂದ್ರದಲ್ಲಿ ಎರಡು ಮತಗಟ್ಟೆಯನ್ನು ಸಂಪೂರ್ಣವಾಗಿ ಪಿಂಕ್ ಬಣ್ಣದಲ್ಲಿ ರಚಿಸಲಾಗಿದೆ. ಆ ಪಿಂಕ್ ಮತಗಟ್ಟಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕೆಲಸ ನಿರ್ವಹಿಸಲಿದ್ದಾರೆ. ಅಲ್ಲದೆ ಈ ಮತಗಟ್ಟಗಳಲ್ಲಿ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಏಜೆಂಟರಾಗಿ ಮಹಿಳಾ ಸಿಬ್ಬಂದಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಕ್ಷೇತ್ರ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಹೇಳಿದ್ದಾರೆ.
ವಿಶೇಷಚೇತನರಿಗೆ ಮತದಾನಕ್ಕೆ ವ್ಹೀಲ್ ಚೇಯರ್ ವ್ಯವಸ್ಥೆ, ದೃಷ್ಟಿ ಸಮಸ್ಯೆಯುಳ್ಳವರಿಗೆ ಭೂತ ಕನ್ನಡಿ ನೀಡುವಂತೆ, ವಿಶೇಷೀತನ ಮತದಾರರು ಇದ್ದಲ್ಲಿ, ಅಂತವರ ಮನೆಗೆ ಪಂಚಾಯಿತಿ ಪಿಡಿಒ ಸಿಬ್ಬಂದಿಗಳು ತೆರಳಿ ಅವರನ್ನು ಚುನಾವಣೆ ಮತಗಟ್ಟೆಗೆ ಕರೆ ತರುವಂತೆ ನಿರ್ದೇಶಿಸಲಾಗಿದೆ. ಸ್ಥಳೀಯ ಗ್ರಾ.ಪಂ. ವತಿಯಿಂದ ಕುಡಿಯುವ ನೀರನ್ನು ವಿತರಿಸುವ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದ್ದು, ಚುನಾವಣೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗೆ ಬಿಸಿ ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಸಿಬ್ಬಂದಿಗಳ ಕಾರ್ಯವೈಖರಿ : 122 ಕಾರ್ಕಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಸೆಂಟರಿಂಗ್ ಗುಂಡ್ಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು. ಮತದಾನ ಸಿಬ್ಬಂದಿಗಳು-1256, ಪಿಆರ್‌ಒ-244, ಎಪಿಆರ್ 244, ಪಿ.ಒ 528, ಪಿಫ್ತ್ ಪೋಲ್ ವಿವಿ ಪ್ಯಾಡ್‌ವಿರುವುದರಿಂದ 4ನೇ ಮತಗಟ್ಟೆ ಅಧಿಕಾರಿ ಸೇವೆ ಸಲ್ಲಿಸಲಿದ್ದಾರೆ. ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರು- 95, ಆಶಾ ಕಾರ್ಯಕರ್ತೆಯರು-25 ಮಂದಿ ಇದ್ದಾರೆ. ವ 22 ಸೆಕ್ಟರ್ ಅಧಿಕಾರಿಗಳ ನೇಮಕ, 24 ಸೆಕ್ಟರ್‌ಗಳಲ್ಲಿ ತಮ್ಮ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲಿದ್ದಾರೆ.
24 ಸೆಕ್ಟರ್‌ಗಳಲ್ಲಿ ಪೊಲೀಸ್ ಸಿಬ್ಬಂದಿ-261, ಹೋಂ ಗಾರ್ಡ್-110, ಪೊಲೀಸ್ ಸಿಬ್ಬಂದಿಗಳು-117, ಸುಪರ್‌ವೈಸರ್ -10 ಕಾರ್ಯನಿರ್ವಹಿಸಲಿದ್ದಾರೆ. ಸೆಂಟ್ರಲ್ ಫೋರ್ಸ್‌ನಿಂದ ಎಸ್‌ಎಸ್‌ಎಫ್-72 ಬಿಎಸ್‌ಎಫ್‌ನಿಂದ 64 ಸಿಬ್ಬಂದಿಗಳು ಸೇರಿದಂತೆ ಮೈಕ್ರೋ ಅಧಿಕಾರಿಗಳಾಗಿ ಕೇಂದ್ರ ಸರಕಾರಿ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ.
ಒಟ್ಟು 207 ಮತಗಟ್ಟೆಗಳ ಪೈಕಿ 41 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.(ಮೈಕ್ರೋ ಆಫೀಸರ್ ಮತ್ತು ಸೆಂಟ್ರಲ್ ಪೋರ್ಸ್ ಕಾರ್ಯನಿರ್ವಹಿಸಲಿದೆ) 31 ಮತಗಟ್ಟೆಗಳಲ್ಲಿ ಸೆಂಟ್ರಲ್ ವೆಬ್ ಕ್ಯಾಮೆರಾ(ಜಿಲ್ಲಾಧಿಕಾರಿಗಳ ಹತೋಟಿಯಲ್ಲಿದ್ದು, ಕುಳಿತಲ್ಲಿಯೇ ವೀಕ್ಷಿಸಲು ಅನುಕೂಲ ಕರವಾಗುವಂತೆ) ಅಳವಡಿಸಲಾಗಿದೆ. ಡಿಜಿಟಲ್ ಕ್ಯಾಮರಾದಲ್ಲಿ ಚಿತ್ರೀಕರಣ ಸೆರೆ ಹಿಡಿಯಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಮಸ್ಟರಿಂಗ್ ಕೇಂದ್ರ :
ಗುಂಡ್ಯಡ್ಕ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರದಲ್ಲಿ 21 ಕೊಠಡಿಗಳನ್ನು ಮಾಡಲಾಗಿದೆ. 1 ಕೊಠಡಿಗೆ 10 ಮತಗಟ್ಟೆಗಳ ಮೇಲ್ವಿಚಾರಣೆ ನೀಡಲಾಗಿದೆ. ಆ ಮಟ್ಟಗಳಲ್ಲಿ ಸೆಂಟ್ರಲ್ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಸಾಮಾಗ್ರಿಗಳು ಹಾಗೂ ಮತಯಂತ್ರಗಳನ್ನು ಇಡಲಾಗಿದೆ. ನಂತರ ಮತಗಟ್ಟಗಳಿಗೆ ಅದನ್ನು ನೀಡಲಾಗುವುದು ನಂತರ ಸೆಕ್ಟರ್ ಅಧಿಕಾರಿಗಳು ಮತಕೇಂದ್ರಗಳಿಗೆ ತೆರಳಿ ಅಲ್ಲಿನ ಸುರಕ್ಷತೆಗಳ ಬಗ್ಗೆ ಓಕೆ ರೀಪೊರ್ಟ್ ನೀಡಿದ ಬಳಿಕೆವೇ ಚುನಾವಣೆ ಪ್ರಕ್ರಿಯೆ ನಡೆಯಲಿದೆ.







