Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ದ್ರಾಕ್ಷಿ ಮಾತ್ರವಲ್ಲ, ಅದರ ಬೀಜವೂ...

ದ್ರಾಕ್ಷಿ ಮಾತ್ರವಲ್ಲ, ಅದರ ಬೀಜವೂ ಆರೋಗ್ಯಲಾಭ ನೀಡುತ್ತದೆ

ವಾರ್ತಾಭಾರತಿವಾರ್ತಾಭಾರತಿ11 May 2018 4:25 PM IST
share
ದ್ರಾಕ್ಷಿ ಮಾತ್ರವಲ್ಲ, ಅದರ ಬೀಜವೂ ಆರೋಗ್ಯಲಾಭ ನೀಡುತ್ತದೆ

ದ್ರಾಕ್ಷಿ ಹಣ್ಣುಗಳನ್ನು ಇಷ್ಟ ಪಡದವರು ಯಾರಾದರೂ ಇದ್ದಾರಾ? ಅವು ಹಲವಾರು ಪೌಷ್ಟಿಕಾಂಶಗಳನ್ನು ಒಳಗೊಂಡಿವೆ. ಸಾಮಾನ್ಯವಾಗಿ ನಾವು ದ್ರಾಕ್ಷಿಗಳನ್ನು ತಿನ್ನುವಾಗ ಅವುಗಳ ಬೀಜಗಳನ್ನು ಎಸೆಯುತ್ತೇವೆ. ಈ ಬೀಜಗಳೂ ಖಾದ್ಯಯೋಗ್ಯ ಮತ್ತು ಪ್ರಬಲ ಉತ್ಕರ್ಷಣ ನಿರೋಧಕಗಳು ಮತ್ತು ಒಲಿಗೊಮೆರಿಕ್ ಪ್ರೋಂಥೊಸೈನಾಡಿನ್ ಕಾಂಪ್ಲೆಕ್ಸ್(ಒಪಿಸಿ) ಎಂಬ ನೈಸರ್ಗಿಕ ಸಸ್ಯ ಸಂಯುಕ್ತಗಳನ್ನು ಒಳಗೊಂಡಿವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಒಪಿಸಿಗಳು ತಮ್ಮ ಉತ್ಕರ್ಷಣ ನಿರೋಧಕ ಚಟುವಟಿಕೆಗಳಿಂದಾಗಿ ಹೆಚ್ಚಿನ ಆದ್ಯತೆಯನ್ನು ಪಡೆದಿವೆ. ಇದರಿಂದಾಗಿ ದ್ರಾಕ್ಷಿ ಬೀಜಗಳು ಶರೀರದಲ್ಲಿ ಫ್ರೀ ರ್ಯಾಡಿಕಲ್ಸ್‌ಗಳನ್ನು ನಾಶ ಮಾಡಲು ಸಮರ್ಥವಾಗಿವೆ ಹಾಗೂ ಬೇಗನೆ ವಯಸ್ಸಾಗುವುದನ್ನು ಮತ್ತು ಕೆಲವು ಗಂಭೀರ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತವೆ.

ದ್ರಾಕ್ಷಿ ಬೀಜಗಳಿಂದ ತೆಗೆದ ಸಾರವು ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸಾಂಪ್ರದಾಯಿಕ ಪರಿಹಾರವಾಗಿದೆ. ಈ ಬೀಜಗಳು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ.....

► ಅಧಿಕ ರಕ್ತದೊತ್ತಡ ಅಪಾಯವನ್ನು ತಗ್ಗಿಸುತ್ತವೆ

ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಸಮಸ್ಯೆಗಳಿಗೆ ಕಾರಣವಾಗುವ ಹಾನಿಯಿಂದ ರಕ್ತನಾಳಗಳು ಮತ್ತು ಅಪಧಮನಿಗಳನ್ನು ರಕ್ಷಿಸುವಲ್ಲಿ ದ್ರಾಕ್ಷಿಬೀಜಗಳು ಪರಿಣಾಮಕಾರಿಯಾಗಿವೆ. ಅಲ್ಲದೆ ಅವುಗಳಲ್ಲಿರುವ ಸಂಯುಕ್ತಗಳು ಶರೀರದಲ್ಲಿ ವಿಟಾಮನ್ ಸಿ ಚಟುವಟಿಕೆಗಳನ್ನು ಪ್ರಚೋದಿಸುತ್ತವೆ,ಇದರಿಂದಾಗಿ ಕೊಲಾಜಿನ್ ಉತ್ಪತ್ತಿ ಹೆಚ್ಚುತ್ತದೆ ಮತ್ತು ಹಾನಿಗೀಡಾಗಿರುವ ರಕ್ತನಾಳಗಳ ದುರಸ್ತಿ ಪ್ರಕ್ರಿಯೆಯು ವೇಗವನ್ನು ಪಡೆದುಕೊಳ್ಳುತ್ತದೆ.

► ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ

ದ್ರಾಕ್ಷಿಬೀಜಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ವಿಟಾಮಿನ್ ಸಿ ಬ್ಯಾಕ್ಟೀರಿಯಾ ಮತ್ತು ರೋಗಕಾರಕ ವೈರಸ್‌ಗಳ ವಿರುದ್ಧ ಹೋರಾಡಲು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಸಿ ವಿಟಾಮಿನ್‌ನ 30ರಿಂದ 50 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ.

► ಬಾವನ್ನು ತಡೆಯುತ್ತವೆ

ಸುದೀರ್ಘ ಕಾಲ ಕುಳಿತುಕೊಳ್ಳುವುದರಿಂದ ಕಾಲುಗಳು ಬಾತುಕೊಳ್ಳುವುದನ್ನು ದ್ರಾಕ್ಷಿ ಬೀಜಗಳು ತಡೆಯುತ್ತವೆ. ಶರೀರದಲ್ಲಿ ಅತಿಯಾಗಿ ದ್ರವಗಳು ತುಂಬಿಕೊಂಡರೆ ಅದು ನೋವನ್ನುಂಟು ಮಾಡುತ್ತದೆ,ಆದರೆ ದ್ರಾಕ್ಷಿ ಬೀಜಗಳನ್ನು ತಿನ್ನುವ ಮೂಲಕ ಈ ನೋವನ್ನು ತಗ್ಗಿಸಬಹುದಾಗಿದೆ. ಅವು ಜೀವಕೋಶಗಳು ಮತ್ತು ಅಂಗಾಂಶಗಳ ನಡುವೆ ದ್ರವ ವರ್ಗಾವಣೆ ಮತ್ತು ಸಮತೋಲನವನ್ನು ಕ್ರಮಬದ್ಧಗೊಳಿಸುತ್ತವೆ.

► ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತವೆ

ದ್ರಾಕ್ಷಿ ಬೀಜಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ಫ್ಲಾವನಾಯ್ಡಾಗಳು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಎಚ್‌ಡಿಎಲ್ ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್‌ಗಳ ನಡುವಿನ ಸಮತೋಲನವನ್ನು ಉತ್ತಮಗೊಳಿಸುತ್ತವೆ. ಇದರಿಂದಾಗಿ ಅಪಧಮನಿಗಳು ಮತ್ತು ರಕ್ತನಾಳಗಳಲ್ಲಿ ಲೋಳೆಯು ಪದರಗಳ ರೂಪದಲ್ಲಿ ಸಂಗ್ರಹಗೊಳ್ಳುವ ಅಪಾಯವು ಕಡಿಮೆಯಾಗುತ್ತದೆ. ಇದು ಹೃದಯಾಘಾತದಂತಹ ಹೃದಯ ಸಮಸ್ಯೆಗಳ ಅಪಾಯವನ್ನು ತಗ್ಗಿಸುತ್ತದೆ.

► ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ

ಶರೀರದ ತೂಕವನ್ನು ಇಳಿಸಿಕೊಳ್ಳಲು ದ್ರಾಕ್ಷಿಬೀಜಗಳು ನೆರವಾಗುತ್ತವೆ. ಅವು ಶರೀರದಲ್ಲಿ ಕೊಬ್ಬು ಸಂಗ್ರಹಗೊಳ್ಳುವುದನ್ನು ತಡೆಯುತ್ತವೆ ಮತ್ತು ಕೊಬ್ಬು ಹೀರುವಿಕೆ ಮಟ್ಟವನ್ನು ಕಡಿಮೆ ಮಾಡುತ್ತವೆ. ಅವುಗಳನ್ನು ತಿನ್ನುವುದರಿಂದ ಶಕ್ತಿಯು ಹೆಚ್ಚುವುದಲ್ಲದೆ ಚಯಾಪಚಯವು ಚುರುಕುಗೊಳ್ಳುತ್ತದೆ ಮತ್ತು ಇದು ಶರೀರದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇನ್ನಷ್ಟು ನೆರವಾಗುತ್ತದೆ.

► ಮಿದುಳಿನ ಕಾರ್ಯವನ್ನು ಉತ್ತೇಜಿಸುತ್ತವೆ

ದ್ರಾಕ್ಷಿಬೀಜಗಳಲ್ಲಿರುವ ಒಪಿಸಿಗಳು ಮಿದುಳಿನ ಗ್ರಹಣ ಶಕ್ತಿಯನ್ನು ಉತ್ತೇಜಿಸುವ ಮೂಲಕ ಏಕಾಗ್ರತೆ,ನೆನಪಿನ ಶಕ್ತಿ ಮತ್ತು ಮನಃಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ನೆರವಾಗುತ್ತವೆ. ಇದು ಅಲ್ಝೀಮರ್ಸ್‌ ಮತ್ತು ನರಗಳ ಹಾನಿಯಿಂದಾಗಿ ಉಂಟಾಗುವ ಕಾಯಿಲೆಗಳ ಅಪಾಯವನ್ನು ಎದುರಿಸುತ್ತಿರುವವರ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಿ ಮಿದುಳಿನ ಗ್ರಹಣ ಶಕ್ತಿಯನ್ನು ಉತ್ತಮಗೊಳಿಸಲು ದ್ರಾಕ್ಷಿ ಬೀಜಗಳ ಸೇವನೆ ಉತ್ತಮ ಉಪಾಯವಾಗಿದೆ.

► ಕ್ಯಾನ್ಸರ್ ತಡೆಯುತ್ತವೆ

 ದ್ರಾಕ್ಷಿ ಬೀಜಗಳನ್ನು ತಿನ್ನುವುದರಿಂದ ಚರ್ಮದ ಕ್ಯಾನ್ಸರ್‌ನ ತೀವ್ರತೆಯನ್ನು ಕನಿಷ್ಠಗೊಳಿಸಬಹುದು ಮತ್ತು ಚರ್ಮ ಟ್ಯೂಮರ್‌ನ ಬೆಳವಣಿಗೆಯನ್ನು ನಿಧಾನಿಸಬಹುದು ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡಲೂ ದ್ರಾಕ್ಷಿ ಬೀಜಗಳು ನೆರವಾಗುತ್ತವೆ. ಅವು ಫ್ರೀ ರ್ಯಾಡಿಕಲ್‌ಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದರಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಜೀವಕೋಶಗಳ ಹಾನಿಯನ್ನು ತಡೆಯುವಲ್ಲಿ ನೆರವಾಗುತ್ತವೆ.

► ಶ್ವಾಸಕೋಶಗಳಿಗೆ ರಕ್ಷಣೆ ನೀಡುತ್ತವೆ

ದ್ರಾಕ್ಷಿ ಬೀಜಗಳು ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಹಿಸ್ಟಾಮೈನ್ ಗುಣಗಳನ್ನು ಹೊಂದಿರುವುದರಿಂದ ಅಲರ್ಜಿಗಳ ವಿರುದ್ಧ ಹೋರಾಡಲು ನೆರವಾಗುತ್ತವೆ ಮತ್ತು ಶ್ವಾಸಕೋಶಗಳನ್ನು ಬಲಗೊಳಿಸುವ ಮೂಲಕ ಸೋಂಕುಗಳು ಹಾಗೂ ಅವುಗಳ ಕಾರ್ಯ ನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುವ ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ಅಲ್ಲದೆ ದ್ರಾಕ್ಷಿ ಬೀಜಗಳ ಸೇವನೆಯು ಶೀತ,ಫ್ಲೂ ಮತ್ತು ಉಸಿರಾಟ ವ್ಯವಸ್ಥೆಯೊಂದಿಗೆ ನಂಟು ಹೊಂದಿರುವ ಇತರ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

► ಉತ್ಕರ್ಷಣ ನಿರೋಧಕ ಗುಣ

ದ್ರಾಕ್ಷಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳಿರುವುದರಿಂದ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಪ್ರತಿರೋಧವನ್ನೊಡ್ಡಿ ವಿವಿಧ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತವೆ. ಉತ್ಕರ್ಷಣ ನಿರೋಧಕ ಗುಣವು ಸಂಧಿವಾತ,ಚರ್ಮ ಉರಿತ,ದ್ರವ ಸಂಗ್ರಹ,ಅಲ್ಸರ್,ಸೈನುಸಿಟಿಸ್‌ಮತ್ತು ಮೂತ್ರನಾಳ ಸೋಂಕುಗಳಂತಹ ಸಮಸ್ಯೆಗಳ ತೀವ್ರತೆಯನ್ನು ತಗ್ಗಿಸಲು ನೆರವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X