ಮುಸ್ತಫಾ ಬಸ್ತಿಕೋಡಿಗೆ ಪಿ.ಎಚ್.ಡಿ ಪದವಿ

ಬಂಟ್ವಾಳ, ಮೇ 11: ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮುಸ್ತಫಾ ಬಸ್ತಿಕೋಡಿ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಮುಸ್ತಫಾ ಬಸ್ತಿಕೋಡಿ ಅವರು 'ಹೈ ಪರ್ಫೋಮನ್ಸ್ ಕಂಪ್ಯೂಟಿಂಗ್' ಫೀಲ್ಡ್ ನ ' ಪ್ರೋಗ್ರಾಮಿಂಗ್ ಪರಡಿಗ್ಮ್ ಫೊರ್ ಪ್ಯಾರಲೆಲ್ ಅರ್ಕಿಟೆಕ್ಚರ್ಸ್' ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಲಭಿಸಿದೆ.
'ಕಿಂಗ್ ಅಬ್ದುಲ್ ಅಝೀಝ್ ಯುನಿವರ್ಸಿಟಿ ಜಿದ್ದಾ' ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ. ವಸೀಂ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ಹಾಗೂ ಎನ್ ಐ ಟಿ ಕೆ ಸುರತ್ಕಲ್ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಚಂದ್ರಶೇಖರ್ ಅವರ ಸಹಮಾರ್ಗದರ್ಶನದಲ್ಲಿ ಕಳೆದ ವರ್ಷ ಈ ವಿಷಯದಲ್ಲಿ ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲೋರಿಡಾ, ಒರ್ಲಾಂಡೊ, ಯುಎಸ್ಎ ಯಲ್ಲಿ ನಡೆದ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ ಮಾಡಿದ್ದರು.
ಮುಸ್ತಫಾ ಬಸ್ತಿಕೋಡಿ ಅವರು ವಾಮದಪದವಿನ ಎಚ್.ಅಬ್ದುಲ್ ರಹ್ಮಾನ್ ಹಾಗೂ ಜಮೀಳಾ ದಂಪತಿಯ ಪುತ್ರ.







