Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. 'ಕರ್ನಾಟಕ ಚುನಾವಣೆಯ ಫಲಿತಾಂಶ ಪ್ರಕಟವಾದ...

'ಕರ್ನಾಟಕ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೇ ಮೋದಿಯ ಅಧಿಕಾರ ತ್ಯಾಗದ ದಿನಗಣನೆ ಆರಂಭ'

ವಿಶೇಷ ಸಂದರ್ಶನದಲ್ಲಿ ಜಿಗ್ನೇಶ್ ಮೇವಾನಿ

ಸಂದರ್ಶನ: ಅಮ್ಜದ್‌ ಖಾನ್ ಎಂ.ಸಂದರ್ಶನ: ಅಮ್ಜದ್‌ ಖಾನ್ ಎಂ.11 May 2018 7:19 PM IST
share
ಕರ್ನಾಟಕ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೇ ಮೋದಿಯ ಅಧಿಕಾರ ತ್ಯಾಗದ ದಿನಗಣನೆ ಆರಂಭ

ಬೆಂಗಳೂರು, ಮೇ 9: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ, ರಾಷ್ಟ್ರ ರಾಜಕಾರಣ ಹಾಗೂ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಖರಿ, ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳು, ಅತ್ಯಾಚಾರಗಳ ಕುರಿತು ದಲಿತ ಹೋರಾಟಗಾರ, ಯುವ ನಾಯಕ, ಗುಜರಾತ್‌ನ ಶಾಸಕ ಜಿಗ್ನೇಶ್ ಮೇವಾನಿ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಾ.ಭಾ: ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯ ಕುರಿತು ನಿಮ್ಮ ಅನಿಸಿಕೆ ಏನು?
ಜಿಗ್ನೇಶ್ ಮೇವಾನಿ: ಕಳೆದ 20 ದಿನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೆ. ಬಿಜೆಪಿಯ ಹಿಂದುತ್ವ ಹಾಗೂ ಕೋಮುವಾದಿ ರಾಜಕಾರಣವನ್ನು ರಾಜ್ಯದ ಜನತೆ ಒಪ್ಪಿಲ್ಲ. ಬಸವಣ್ಣ, ನಾರಾಯಣಗುರು, ಸೂಫಿ ಸಂತರ ಪರಂಪರೆ ಇಲ್ಲಿನ ಜನರ ಮನಸ್ಸಿನಲ್ಲಿ ಭದ್ರವಾಗಿ ಬೇರೂರಿದೆ.

ವಾ.ಭಾ: ಚುನಾವಣೆಯಲ್ಲಿ ಅಭಿವೃದ್ಧಿಗಿಂತ, ಧಾರ್ಮಿಕ ವಿಚಾರಗಳಿಗೆ ಪ್ರಾಧ್ಯಾನತೆ ನೀಡುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ?
ಜಿಗ್ನೇಶ್ ಮೇವಾನಿ: ಹಿಂದುತ್ವವಾದಿ ಶಕ್ತಿಗಳು ಹಿಂದೂ-ಮುಸ್ಲಿಮರನ್ನು ವಿಭಜಿಸುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿಲ್ಲ. ವಿಜಯಪುರದಲ್ಲಿ ಐದು ಸಾವಿರ ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ನಾಲ್ಕು ವರ್ಷ 11 ತಿಂಗಳು ವಿಕಾಸದ ಬಗ್ಗೆ ಮಾತನಾಡುವವರು, ಆನಂತರ ಒಡೆದು ಆಳುವ ನೀತಿ ಅನುಸರಿಸುತ್ತಾರೆ.

ವಾ.ಭಾ: ರಾಜ್ಯದಲ್ಲಿ ಸಮಾಜವನ್ನು ಒಡೆದು ಆಳುವ ಪ್ರಯತ್ನ ಯಶಸ್ವಿಯಾಗುತ್ತದೆಯೇ?
ಜಿಗ್ನೇಶ್ ಮೇವಾನಿ: ರಾಜ್ಯದ ಶೇ.80ರಷ್ಟು ಜನ ಅವರ ಸಿದ್ಧಾಂತ ಒಪ್ಪುವುದಿಲ್ಲ. ಬಿಜೆಪಿ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಶೇ.20ಕ್ಕಿಂತ ಹೆಚ್ಚು ಮತಗಳನ್ನು ಪಡೆಯುವುದಿಲ್ಲ. ರಾಜ್ಯದ ನಾಗರಿಕ ಸಮಾಜ ಜಾಗೃತವಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ರಾಜ್ಯದಲ್ಲಿ ನಡೆದ ಸಂವಿಧಾನ ಉಳಿಸಿ ಆಂದೋಲನವು ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ.

ವಾ.ಭಾ: ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರಲ್ಲ?
ಜಿಗ್ನೇಶ್ ಮೇವಾನಿ: ಅನಂತ್‌ಕುಮಾರ್ ಹೆಗಡೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಮನಸ್ಸಿನಲ್ಲಿ ಇರುವುದನ್ನು ಬಹಿರಂಗವಾಗಿ ಹೇಳಿದ್ದಾರೆ. ಬಿಜೆಪಿ, ಆರೆಸೆಸ್ಸ್‌ನವರಿಗೆ ಎಲ್ಲ ಧರ್ಮಗಳನ್ನು ಗೌರವ ಸಲ್ಲಿಸುವ ಜಾತ್ಯತೀತ ಸಮಾಜ ಬೇಕಾಗಿಲ್ಲ. ಕೋಮುವಾದಿ, ಕಾರ್ಪೊರೇಟ್ ವಾತಾವರಣ ಬೇಕು.

ವಾ.ಭಾ: ರಾಜ್ಯ ಸರಕಾರದ ಸಾಧನೆಗಳನ್ನು 15 ನಿಮಿಷ ಮಾತನಾಡಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಮೋದಿ ಸವಾಲು ಹಾಕಿದ್ದಾರಲ್ಲ?
ಜಿಗ್ನೇಶ್ ಮೇವಾನಿ: ಸಿದ್ದರಾಮಯ್ಯ ಸರಕಾರದ ಐದು ವರ್ಷಗಳ ಆಡಳಿತದ ಬಗ್ಗೆ 15 ನಿಮಿಷ ಮಾತನಾಡುವುದು ಒಂದು ಕಡೆ ಇರಲಿ. ನಾಲ್ಕೂವರೆ ವರ್ಷಗಳಲ್ಲಿ ನರೇಂದ್ರಮೋದಿ ಮಾಡಿರುವ ಸಾಧನೆಗಳ ಬಗ್ಗೆ ನಾಲ್ಕು ನಿಮಿಷ ಮಾತನಾಡಲಿ. ಅವರ ಅವಧಿಯಲ್ಲಿ ಈವರೆಗೆ 9 ಕೋಟಿ ಯುವಕರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ, ಶೇ.1ರಷ್ಟು ಯುವಕ(9 ಲಕ್ಷ)ರಿಗೂ ಉದ್ಯೋಗ ಸಿಕ್ಕಿಲ್ಲ.

ಅಲ್ಲದೆ, ಜಿಎಸ್‌ಟಿ, ನೋಟ್ ಬ್ಯಾನ್ ನಂತರ ಸುಮಾರು 75 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನರೇಂದ್ರಮೋದಿ ಇವತ್ತು ಬಯಸಿದರೂ ದೇಶದ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ 5 ಲಕ್ಷ ವೈದ್ಯರನ್ನು ನೇಮಕ ಮಾಡಬಹುದು. ಪ್ರಾಥಮಿಕ ಶಾಲೆಗಳಲ್ಲಿ 16 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಅವುಗಳನ್ನು ಭರ್ತಿ ಮಾಡಿಲ್ಲ. ಹಸುವಿನ ಹೆಸರಿನಲ್ಲಿ 28 ಮುಸ್ಲಿಮರ ಹತ್ಯೆಯಾಗಿದೆ. ಐಟಿ ಸೆಕ್ಟರ್‌ನಲ್ಲಿ ನಾವು ಪ್ರಥಮ ಸ್ಥಾನದಲ್ಲಿದ್ದೆವು, ಆದರೆ ನಾಲ್ಕು ವರ್ಷಗಳಲ್ಲಿ ಉದ್ಯೋಗ ಕಡಿತವಾಗಿದೆ. 2016-17ರಲ್ಲಿ 59,427 ಮಂದಿ ಉದ್ಯೋಗ ಪಡೆದಿದ್ದರು. ಆದರೆ, 2017-18ರಲ್ಲಿ ಈ ಪ್ರಮಾಣ 13,972ಕ್ಕೆ ಇಳಿಕೆಯಾಗಿದೆ. ಎಲ್ಲ ರಂಗಗಳಲ್ಲೂ ಉದ್ಯೋಗಗಳು ಕಡಿಮೆ ಆಗುತ್ತಿದೆ.

ವಾ.ಭಾ: ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ತಡೆಯಲು ಕೇಂದ್ರ ಸರಕಾರ ವಿಫಲವಾಗಿದೆ ಎನ್ನುವುದು ನಿಮ್ಮ ಆರೋಪವೇ?
ಜಿಗ್ನೇಶ್ ಮೇವಾನಿ: ಕಥುವಾದಲ್ಲಿ ನಡೆದ ಚಿಕ್ಕ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದ ನಂತರ ದೇಶಾದ್ಯಂತ ನಡೆದ ಚಳವಳಿ, ಹೋರಾಟದ ಬಳಿಕ ಕೇಂದ್ರ ಸರಕಾರ ಸುಗ್ರೀವಾಜ್ಞೆ ಜಾರಿಗೆ ತಂದದ್ದು. 52 ಮಂದಿ ಬಿಜೆಪಿಯ ಸಂಸದರು, ಶಾಸಕರು, ಮುಖಂಡರ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪಗಳಿದ್ದು, ಪ್ರಕರಣಗಳು ದಾಖಲಾಗಿದೆ, ಹಲವು ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ದಾಖಲಾಗಿದೆ. ಇಂತಹ ಘಟನೆ ನಡೆಯುತ್ತಿರುವಾಗ 56 ಇಂಚಿನ ಎದೆ ಹೊಂದಿರುವವರು ಯಾಕೆ ಸುಮ್ಮನಿದ್ದಾರೆ. ಬಿಜೆಪಿ ಈಗ ‘ಬಲಾತ್ಕಾರಿ ಜಾನ್‌ಲೇವಾ ಪಾರ್ಟಿ’ ಆಗಿದೆ.

ವಾ.ಭಾ: ದಲಿತರ ರಕ್ಷಣೆ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆಯೇ?
ಜಿಗ್ನೇಶ್ ಮೇವಾನಿ: ಕೇಂದ್ರ ಸಚಿವರಾದ ರಾಮ್‌ದಾಸ್ ಅಠಾವಳೆ, ರಾಮ್‌ವಿಲಾಸ್ ಪಾಸ್ವಾನ್, ಸಂಸದ ಉದಿತ್‌ರಾಜ್, ಬಿಜೆಪಿಯ ಈ ಸ್ವಘೋಷಿತ ರಾಮನಿಗಾಗಿ ಹನುಮಂತನ ಪಾತ್ರ ವಹಿಸುತ್ತಿದ್ದಾರೆ. ಉನ್ನಾವ್ ವಿಚಾರದಲ್ಲಿ ಇವರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ. ಭೀಮ್ ಆರ್ಮಿಯ ಸಹರಾನ್‌ಪುರದ ಜಿಲ್ಲಾಧ್ಯಕ್ಷನ ಸಹೋದರನ್ನು ಹತ್ಯೆ ಮಾಡಲಾಗಿದೆ. ಮೇಲ್ವರ್ಗದವರನ್ನು ದಲಿತರು ಹಾಗೂ ಮುಸ್ಲಿಮರ ಮೇಲೆ ಹಲ್ಲೆ ಮಾಡಲು ಬಿಡಲಾಗಿದೆ. ರಾಜ್ಯದ ದಲಿತರನ್ನು ಕೈ ಜೋಡಿಸಿ ಮನವಿ ಮಾಡುತ್ತೇನೆ, ಬಿಜೆಪಿಗೆ ಒಂದು ಮತವನ್ನು ನೀಡಬೇಡಿ. ಪ್ರತಿದಿನ ಆರು ಮಹಿಳೆಯರ ಮೇಲೆ ಅತ್ಯಾಚಾರ, ಎರಡು-ಮೂರು ದಲಿತರ ಹತ್ಯೆ, 15-18 ನಿಮಿಷಗಳಲ್ಲಿ ಒಬ್ಬ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಾವಿರಾರು ಜನ ಇಂದಿಗೂ ಮಲ ಹೊರುತ್ತಿದ್ದಾರೆ. ಆದಿವಾಸಿಗಳಿಗೆ ಅರಣ್ಯ ಹಕ್ಕು ನೀಡುವ ಬದಲು, ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ.

ವಾ.ಭಾ: ಕರ್ನಾಟಕದ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆಯೆ?
ಜಿಗ್ನೇಶ್ ಮೇವಾನಿ: ಕರ್ನಾಟಕದ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೇ ನರೇಂದ್ರಮೋದಿಯ ಅಧಿಕಾರ ತ್ಯಾಗದ ದಿನಗಣನೆ ಪ್ರಾರಂಭವಾಗಲಿದೆ. ರಾಜ್ಯದ ಯುವಕರು, ಮಹಿಳೆಯರು ಬಿಜೆಪಿಯ ಕುಟಿಲ ರಾಜಕೀಯ ನೀತಿಯನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಎಂದಿಗೂ ಅವರಿಗೆ ಮತ ನೀಡುವುದಿಲ್ಲ.

ಸುಪ್ರೀಂಕೋರ್ಟ್ ನ್ಯಾಯಾಧೀಶರು ಬೀದಿಗೆ ಇಳಿದು ಮಾತನಾಡುವ ಪರಿಸ್ಥಿತಿಯಿದೆ. ನ್ಯಾ.ಲೋಯಾ ಸಾವಿನ ವಿಚಾರದಲ್ಲಿ ಯಾಕೆ ಮೋದಿ ಮೌನಕ್ಕೆ ಶರಣಾಗಿದ್ದಾರೆ? ಮಾಧ್ಯಮ, ನಾಗರಿಕ ಸಮಾಜ, ನ್ಯಾಯಾಂಗ ವ್ಯವಸ್ಥೆ ಎಲ್ಲದರ ಮೇಲೂ ಒತ್ತಡ ಇದೆ. ನರೇಂದ್ರಮೋದಿ ಅಧಿಕಾರದಿಂದ ಇಳಿಯುತ್ತಿದ್ದಂತೆ ಅವರ ಭ್ರಷ್ಟಾಚಾರದ ಕಡತಗಳನ್ನು ಬಿಜೆಪಿ ನಾಯಕರೆ ಮೊದಲು ತೆರೆದು ಇಡಲಿದ್ದಾರೆ.

ವಾ.ಭಾ: ಪತ್ರಕರ್ತೆ ಗೌರಿ ಲಂಕೇಶ್ ಅನುಪಸ್ಥಿತಿ ನಿಮಗೆ ಕಾಡುತ್ತಿದ್ದೆಯೇ?
ಜಿಗ್ನೇಶ್ ಮೇವಾನಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಕಾಂಗ್ರೆಸ್ ಸರಕಾರ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಆರೋಪಿಗಳ ಬಂಧನವಾಗಬೇಕಿತ್ತು. ಈ ವಿಚಾರದಲ್ಲಿ ನರೇಂದ್ರಮೋದಿ, ಬಿಜೆಪಿ ಯಾಕೆ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತಿಲ್ಲ. ಏಕೆಂದರೆ, ನಿಮ್ಮ ವಿಚಾರಧಾರೆಯನ್ನು ನಂಬುವ, ನಿಮ್ಮ ಶಾಕೆಯ ಸದಸ್ಯರೆ ಈ ಹತ್ಯೆಯನ್ನು ವಾಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ.

ಮಂಗಳ ಗ್ರಹದಲ್ಲಿ ನೀರಿನ ಅಂಶ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಶೌಚ ಗುಂಡಿಯನ್ನು ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕರು ಸಾವನ್ನಪ್ಪದಿರುವುವಂತೆ ಯಾಕೆ ತಂತ್ರಜ್ಞಾನವನ್ನು ಆವಿಷ್ಕರಿಸುತ್ತಿಲ್ಲ? ಅದನ್ನು ಮಾಡಿದರೆ ನಿಮ್ಮ ಸ್ಕಿಲ್ ಇಂಡಿಯಾ ಯಶಸ್ವಿಯಾಗುತ್ತದೆ ಎಂದು ನರೇಂದ್ರಮೋದಿಗೆ ಜಿಗ್ನೇಶ್ ಮೇವಾನಿ ಸಲಹೆ ನೀಡಿದರು.

share
ಸಂದರ್ಶನ: ಅಮ್ಜದ್‌ ಖಾನ್ ಎಂ.
ಸಂದರ್ಶನ: ಅಮ್ಜದ್‌ ಖಾನ್ ಎಂ.
Next Story
X