ಬೆಂಗಳೂರು: ಬಾವಿಗೆ ಬಿದ್ದ ಕಾರ್ಮಿಕನ ರಕ್ಷಣೆ
ಬೆಂಗಳೂರು, ಮೇ 11: ಬಾವಿಯೊಂದಕ್ಕೆ ಬಿದ್ದಿದ್ದ ಕಾರ್ಮಿಕನೊಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಮೇಶ್ ಎಂಬ ಕಾರ್ಮಿಕನನ್ನು ರಕ್ಷಣೆ ಮಾಡಿದ್ದು, ನಗರದ ಕಬ್ಬನ್‌ಪಾರ್ಕ್‌ನಲ್ಲಿ ಸುಮಾರು 15 ಅಡಿ ಆಳದ ಬಾವಿಗೆ ಮೇಲ್ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದ. ಉಸಿರಾಟಕ್ಕೂ ಕಷ್ಟವಿದ್ದ ಬಾವಿಯ ಆಳದಲ್ಲಿ ಬಿದ್ದಿದ್ದ ಕಾರ್ಮಿಕನನ್ನು ಅಗ್ನಿಶಾಮಕ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಹಗ್ಗವನ್ನು ಬಾವಿಯೊಳಗೆ ಬಿಟ್ಟು ಅದರ ಮೂಲಕ ಕಾರ್ಮಿಕನನ್ನು ಹೊರಗೆ ಎಳೆತರಲಾಯಿತು. ಸುಮಾರು ಅರ್ಧ ಗಂಟೆ ಕಾಲ ಬಾವಿಯೊಳಗೆ ಬಿದ್ದು ತೀವ್ರ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಮಿಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Next Story





