ಹುಬ್ಬಳ್ಳಿ: ಚುನಾವಣಾ ಸಿಬ್ಬಂದಿಗೆ ಇಲ್ಲದ ಊಟದ ವ್ಯವಸ್ಥೆ; ಪ್ರತಿಭಟನೆ
ಹುಬ್ಬಳ್ಳಿ, ಮೇ 11: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ತಮಗೆ ಸರಿಯಾದ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಚುನಾವಣಾ ಸಿಬ್ಬಂದಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಹುಬ್ಬಳ್ಳಿ ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.
ಮಧ್ಯಾಹ್ನದ ಸಮಯವಾದರೂ ಬೆಳಗಿನ ತಿಂಡಿ ಹಾಗೂ ಊಟ ನೀಡಿಲ್ಲವೆಂದು ಆಕ್ರೋಶಗೊಂಡ ಚುನಾವಣಾ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೊಲೀಸರನ್ನು ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು.
ಕೂಡಲೇ ಸ್ಥಳಕ್ಕೆ ಧಾವಿಸಿದ ಚುನಾವಣಾಧಿಕಾರಿ ಇಬ್ರಾಹಿಂ ಮೈಗೂರ್ ಅವರನ್ನೂ ತರಾಟೆಗೆ ತೆಗೆದುಕೊಂಡ ಸಿಬ್ಬಂದಿ, ಸರಿಯಾದ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಆಹಾರ ವಿತರಣೆ ಮಾಡುವಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಿ ಸಿಬ್ಬಂದಿಯನ್ನು ಇಬ್ರಾಹಿಂ ಮೈಗೂರು ಸಮಾಧಾನಪಡಿಸಿದರು.
Next Story





