ದ.ಕ.ಜಿಲ್ಲೆ: ಕಾಂಗ್ರೆಸ್ ಅಭ್ಯರ್ಥಿಗಳ ಮತಗಟ್ಟೆಗಳ ವಿವರ
ಮಂಗಳೂರು, ಮೇ 11: ದ.ಕ.ಜಿಲ್ಲೆ 8 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಶನಿವಾರ ಮತದಾನ ಮಾಡುವ ಮತಗಟ್ಟೆಗಳ ವಿವರ ಹೀಗಿವೆ.
ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಬಿ. ರಮಾನಾಥ ರೈ ಕಳ್ಳಿಗೆ ಗ್ರಾಮದ ತೊಡಂಬಿಲ ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7 ಗಂಟೆಗೆ, ಮಂಗಳೂರು ಕ್ಷೇತ್ರದ ಅಭ್ಯರ್ಥಿ ಯು.ಟಿ. ಖಾದರ್ ಬೋಳಿಯಾರು ಗ್ರಾಮದ ಅಮ್ಮೆಂಬಳ ಕರಿಶಾಲೆಯ ದ.ಕ. ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7ಕ್ಕೆ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಬೆಂದೂರ್ನ ಸೈಂಟ್ ಸೆಬಾಸ್ಟಿನ್ ಶಾಲೆಯಲ್ಲಿ ಬೆಳಗ್ಗೆ 7ಕ್ಕೆ, ಮಂಗಳೂರು ನಗರ ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯ್ದಿನ್ ಬಾವ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 7ಕ್ಕೆ ಮತ ಚಲಾಯಿಸಲಿದ್ದಾರೆ.
ಬೆಳ್ತಂಗಡಿ ಕ್ಷೇತ್ರದ ಅಭ್ಯರ್ಥಿ ವಸಂತ ಬಂಗೇರ ಬೆಳ್ತಂಗಡಿ ದ.ಕ.ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7ಕ್ಕೆ, ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ ಅಭಯಚಂದ್ರ ಜೈನ್ ಮೂಡುಬಿದಿರೆಯ ದಿಗಂಬರ ಜೈನ್ ಹೈಯರ್ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7ಕ್ಕೆ, ಪುತ್ತೂರು ಕ್ಷೇತ್ರದ ಅಭ್ಯರ್ಥಿ ಶಕುಂತಲಾ ಶೆಟ್ಟಿ ಮುನ್ನೂರು ಗ್ರಾಮದ ಕುತ್ತಾರ್ ಪದವಿನ ದ.ಕ.ಜಿಪಂ ಶಾಲೆಯಲ್ಲಿ ಬೆಳಗ್ಗೆ 8ಕ್ಕೆ, ಸುಳ್ಯ ಕ್ಷೇತ್ರದ ಅಭ್ಯರ್ಥಿ ಡಾ.ಬಿ.ಆರ್.ರಘು ಪುತ್ತೂರು ತಾಲೂಕಿನ ನೆಕ್ಕಿಲಾಡಿಯ ಸರಕಾರಿ ಹೈಯರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7ಕ್ಕೆ, ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ವೆಲೆನ್ಸಿಯಾ ಸೈಂಟ್ ಮೆರೀಸ್ ಕಾನ್ವೆಂಟ್ ಆಶ್ರಮದಲ್ಲಿ ಬೆಳಗ್ಗೆ 7ಕ್ಕೆ ಮತ ಚಲಾಯಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.