ದಾರುಲ್ ಉಲೂಮ್ ವಿಮೆನ್ಸ್ ಅರಬಿಕ್ ಕಾಲೇಜು ದಾಖಲಾತಿ ಪ್ರಾರಂಭ
ಮಂಗಳೂರು, ಮೇ 11: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು ಇದರ ಅಧೀನ ಸಂಸ್ಥೆಯಾದ ತಲಪಾಡಿಯ ದಾರುಲ್ ಉಲೂಮ್ ವಿಮೆನ್ಸ್ ಅರಬಿಕ್ ಕಾಲೇಜಿಗೆ ದಾಖಲಾತಿ ಪ್ರಾರಂಭಗೊಂಡಿದ್ದು, ಮೇ 12ರವರೆಗೆ ಮುಂದುವರಿಯಲಿದೆ.
ಆಸಕ್ತ ಪೋಷಕರು ಮಕ್ಕಳನ್ನು ದಾಖಲು ಮಾಡಬೇಕೆಂದು ಮನವಿ ಮಾಡಲಾಗಿದೆ. ಅರಬಿಕ್ ಕಾಲೇಜಿನಲ್ಲಿ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಒಂದೇ ಸೂರಿನಡಿಯಲ್ಲಿ ನೀಡಲಾಗುತ್ತದೆ. 10ನೆ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಒಟ್ಟು 5 ವರ್ಷದ ಆಲಿಮಾ ಕೋರ್ಸ್ ಜೊತೆಗೆ 2 ವರ್ಷ ಪದವಿಪೂವರ್ ಮತ್ತು 3 ವರ್ಷ ಬಿಎ ಪದವಿ ನೀಡಲಾಗುವುದು. ತಲಪಾಡಿ ಮಸ್ಜಿದ್ ಅಬ್ರಾರ್‌ನ ಸಮೀಪವಿರುವ ಮದ್ರಸತುಲ್ ಇಸ್ಲಾಮಿಯಾದಲ್ಲಿ ತರಗತಿಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





