ಬಿಜೆಪಿ, ಆರೆಸ್ಸೆಸ್ ತಿರಸ್ಕರಿಸಿ ಎಂದ ಜಾಗತಿಕ ಲಿಂಗಾಯತ ಮಹಾಸಭಾ
ಕಾಂಗ್ರೆಸ್ ಬೆಂಬಲಿಸಲು ನಿರ್ಧಾರ

ಬೆಂಗಳೂರು, ಮೇ 11: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರ 30 ಶೇ. ಮತಗಳು ಕಾಂಗ್ರೆಸ್ ಗೆ ಬೀಳಲಿವೆ ಎಂದು ಸಮುದಾಯದ ಮುಖಂಡರು ಇಂದು ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಹಾಗು ಅದರ ಯುವ ಸಂಘಟನೆಯಾದ ರಾಷ್ಟ್ರೀಯ ಬಸವ ಸೇನೆ ಈ ಬಗ್ಗೆ ಜಾಹೀರಾತು ಒಂದನ್ನು ಪ್ರಕಟಿಸಿದೆ. “ಲಿಂಗಾಯತರ ಹಿತ ಕಾಯುವವರಿಗಾಗಿ ನಮ್ಮ ಮತ” ಎಂದು ಅದರಲ್ಲಿ ತಿಳಿಸಲಾಗಿದೆ.
ಬಿಜೆಪಿ ಹಾಗು ಆರೆಸ್ಸೆಸ್ಸನ್ನು ತಿರಸ್ಕರಿಸುವಂತೆ ಕರೆ ನೀಡಲಾಗಿದ್ದು, ಬಿಜೆಪಿ ಹಾಗು ಆರೆಸ್ಸೆಸ್ ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಲಾಗಿದೆ. 30 ಶೇ. ಲಿಂಗಾಯತ ಮತಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಮಾತೆ ಮಹಾದೇವಿಯವರು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಮತಗಳು ಪ್ರಮುಖ ಪಾತ್ರ ವಹಿಸಲಿವೆ ಎನ್ನಲಾಗಿದ್ದು, ಬಿಜೆಪಿ ಹಾಗು ಕಾಂಗ್ರೆಸ್ ಎರಡೂ ಪಕ್ಷಗಳು ಈ ಸಮುದಾಯದ ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
Next Story





