ಅಕ್ರಮ ಹಣ ಸಾಗಾಟ: ರಘುಪತಿ ಭಟ್ ವಿರುದ್ಧ ಪ್ರಕರಣ ದಾಖಲು
ಬ್ರಹ್ಮಾವರ, ಮೇ 11: ಅಕ್ರಮ ಹಣ ಸಾಗಾಟಕ್ಕೆ ಸಂಬಂಧಿಸಿ ಉಡುಪಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಪ್ರತಾಪ್ ಹೆಗ್ಡೆ ಹಾಗೂ ಚಾಲಕ ಹರೀಶ್ ಎಸ್. ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 10ರಂದು ಮಧ್ಯಾಹ್ನ ವೇಳೆ ಬ್ರಹ್ಮಾವರ ಕೃಷಿ ಕೇಂದ್ರದ ಬಳಿ ತಾತ್ಕಾಲಿಕ ವಾಗಿ ನಿರ್ಮಿಸಲಾದ ಚೆಕ್‌ಪೋಸ್ಟ್ ನಲ್ಲಿ ಕಾರು ತಪಾಸಣೆ ನಡೆಸಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ರಘು ಪತಿ ಭಟ್‌ಗೆ ಸಂಬಂಧಿಸಿದ 15000 ರೂ. ಮೌಲ್ಯದ ಕರಪತ್ರಗಳು ಹಾಗೂ ಎರಡು ಲಕ್ಷ ನಗದು ಪತ್ತೆಯಾಗಿದೆ. ಈ ಮೂಲಕ ಈ ಮೂವರು ಚುನವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ದೂರಲಾಗಿದೆ.
Next Story





