ಮೆಕೆನ್ರೊರ 34 ವರ್ಷಗಳ ದಾಖಲೆ ಮುರಿದ ನಡಾಲ್

ಮ್ಯಾಡ್ರಿಡ್, ಮೇ 11: ಮ್ಯಾಡ್ರಿಡ್ ಓಪನ್ ಚಾಂಪಿಯನ್‌ಶಿಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗುರುವಾರ ತಡ ರಾತ್ರಿ ಸ್ಪೇನ್‌ನ ಟೆನಿಸ್ ತಾರೆ ರಫೆಲ್ ನಡೆಲ್ ಅವರು ಸತತ 50ನೇ ಸೆಟ್‌ನಲ್ಲಿ ಗೆಲುವು ದಾಖಲಿಸುವ 34 ವರ್ಷಗಳ ಹಿಂದೆ ಜಾನ್ ಮೆಕೆನ್ರೊ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
ಮೆಕೆನ್ರೊ ಅವರು 1984ರಲ್ಲಿ ಸತತ 49 ಸೆಟ್‌ಗಳಲ್ಲಿ ಜಯಿಸಿ ದಾಖಲೆ ಬರೆದಿದ್ದರು. ಜೊತೆಗೆ ಮ್ಯಾಡ್ರಿಡ್ ಇಂಡೋರ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ನಡಾಲ್ ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನದ ಡೀಗೊ ಸ್ವಾರ್ಟ್ಮನ್ ವಿರುದ್ಧ 6-3, 6-4 ಅಂತರದಲ್ಲಿ ಜಯ ಗಳಿಸಿ ತನ್ನ ಹೆಸರಲ್ಲಿ ಹೊಸ ದಾಖಲೆ ಬರೆದಿದ್ದಾರೆ. ನಡಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಅಸ್ಟ್ರೀಯದ ಡೊಮಿನಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ. ಥೀಮ್ ಅವರು ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊವೇಷಿಯಾದ ಬೊರ್ನಾ ಕೊರಿಕ್ ವಿರುದ್ಧ 2-6,7-6(7-5), 6-4 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದರು.
Next Story





