ಶ್ರೀನಗರದಲ್ಲಿ ಉಗ್ರರ ದಾಳಿಗೆ ಓರ್ವ ಯೋಧ ಹುತಾತ್ಮ

ಶ್ರೀನಗರ, ಮೇ 12: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದಾರೆ
ಸಿಆರ್'ಪಿಎಫ್ 182 ಬೆಟಾಲಿಯನ್ ಪಡೆಯ ಮಂದೀಪ್ ಕುಮಾರ್ ಅವರು ಉಗ್ರರ ದಾಳಿಗೆ ಗಂಭೀರ ಗಾಯಗೊಂಡು ಹುತಾತ್ಮರಾದರು ಎಂದು ತಿಳಿದು ಬಂದಿದೆ.
ಪುಲ್ವಾಮ ಜಿಲ್ಲೆಯ ವಾಗುಮ್ ಎಂಬ ಗ್ರಾಮದಲ್ಲಿರುವ ಮನೆಯೊಂದರಲ್ಲಿ 4ರಿಂದ 6 ಉಗ್ರರು ಅಡಗಿ ಕುಳಿತಿದ್ದಾರೆ. ಅವರ ವಿರುದ್ಧ ಭದ್ರತಾ ಪಡೆ ಕಾರ್ಯಾಚರಣೆ ಕೈಗೊಂಡಿದ್ದಾರೆ.ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
Next Story





