ಶಾಸಕರ ಜೊತೆ ಉಪಾಹಾರ ಸೇವಿಸಿದ ಕೋತಿ ....!

ತುಮಕೂರು, ಮೇ 12: ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರಿಗೆ ಬೆಳಗ್ಗಿನ ಉಪಾಹಾರ ಸೇವಿಸಲು ಕೋತಿಯೊಂದು ಸಾಥ್ ನೀಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಶಾಸಕ ಸುರೇಶ್ ಬಾಬು ಅವರು ಬೆಳಗ್ಗೆ ಉಪಾಹಾರ ಸೇವಿಸುತ್ತಿರುವ ವೇಳೆ ಅವರ ಬಳಿಗೆ ಕೋತಿ ಲಗ್ಗೆಯಿಟ್ಟಿದೆ.
ಚುನಾವಣಾ ದಿನವಾಗಿರುವ ಶನಿವಾರ ಶಾಸಕರು ಒತ್ತಡದಲ್ಲಿದ್ದರೂ, ತನ್ನ ಬಳಿಗೆ ಬಂದ ಕೋತಿಗೆ ಉಪಾಹಾರದಲ್ಲಿ ಪಾಲು ನೀಡಿದರು. ಶಾಸಕರ ಜೊತೆ ತಿಂಡಿಯನ್ನು ಸೇವಿಸಿದ ಬಳಿಕ ಕೋತಿ ಅಲ್ಲಿಂದ ತೆರಳಿದೆ ಎಂದು ತಿಳಿದು ಬಂದಿದೆ.
Next Story





