ಪೇಜಾವರ ಸ್ವಾಮೀಜಿಯಿಂದ ಮತದಾನ

ಉಡುಪಿ, ಮೇ 12: ಪೇಜಾವರ ಹಿರಿಯ ಯತಿ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಧ್ಯಾಹ್ನ 1.45ರ ಸುಮಾರಿಗೆ ಉಡುಪಿ ನಗರದ ನಾರ್ತ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ದೇಶಕ್ಕೆ ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಮತದಾನ ಮಾಡಿದ್ದೇನೆ. ರಾಜ್ಯದಲ್ಲಿ ಯಾವ ಸರಕಾರ ಬರಬೇಕು ಎಂಬ ಭವಿಷ್ಯ ಹೇಳುವುದಿಲ್ಲ. ಅದೆಲ್ಲ ಜನರಿಗೆ ಬಿಟ್ಟದ್ದು. ದೇವರ ಮತ್ತು ಜನರ ಇಚ್ಛೆಯಂತೆ ಆಗುತ್ತದೆ. ಪ್ರತಿಯೊಬ್ಬರು ಮತದಾನ ಮಾಡಬೇಕು. ಇದು ರಾಷ್ಟ್ರೀಯ ಕರ್ತವ್ಯ ಎಂದು ಹೇಳಿದರು.
Next Story





