ಮಡಿಕೇರಿ: ಮದುವೆಗೂ ಮುನ್ನ ಮತಚಲಾಯಿಸಿದ ಮದುಮಗಳು

ಮಡಿಕೇರಿ,ಮೇ.12: ಮಡಿಕೇರಿಯ ಕಾಂಡನಕೊಲ್ಲಿ ಮತಗಟ್ಟೆಯಲ್ಲಿ ಮದುಮಗಳೊಬ್ಬರು ಹಸೆಮಣೆ ಏರುವುದಕ್ಕೂ ಮುನ್ನ ಮತ ಚಲಾಯಿಸುವ ಮೂಲಕ ಗಮನ ಸೆಳೆದರು.
ಐಮಣಿಯಂಡ ತಾನ್ಸಿ (ಸ್ಮಿತಾ) ಎಂಬುವವರು ಕೊಡವ ಸಾಂಪ್ರದಾಯಿಕ ವಿವಾಹದ ಉಡುಪಿನಲ್ಲಿ ಕಾಂಡನಕೊಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದ್ದಿನಾಡಂಡ ಕಾವೇರಪ್ಪ (ಪ್ರವೀಣ್) ಅವರನ್ನು ವರಿಸಿದರು.
Next Story





