ಸೊರಬ: ಶಾಸಕ ಮಧುಬಂಗಾರಪ್ಪ, ಕುಮಾರ್ ಬಂಗಾರಪ್ಪ ಮತಚಲಾವಣೆ

ಸೊರಬ,ಮೇ.12: ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ ತಮ್ಮ ಪತ್ನಿ ಅನಿತಾ ಮಧುಬಂಗಾರಪ್ಪ ರೊಂದಿಗೆ ತಮ್ಮ ಗ್ರಾಮವಾದ ಕುಬಟೂರಿನ ಮತಗಟ್ಟೆ ಸಂಖ್ಯೆ-31ರಲ್ಲಿ ಮತಚಲಾವಣೆ ಮಾಡಿದರು.
ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ, ಪತ್ನಿ ವಿದ್ಯುಲ್ಲತ, ಮಗ ಅರ್ಜುನ್, ಮಗಳು ಲಾವಣ್ಯರೊಂದಿಗೆ ತಮ್ಮ ಗ್ರಾಮವಾದ ತಾಲೂಕಿನ ಕುಬಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-31 ರಲ್ಲಿ ಮತ ಚಲಾಯಿಸಿದರು.
Next Story





