ಹುಬ್ಬಳ್ಳಿ: ಮತದಾನದ ವೇಳೆ ಕುಸಿದು ಬಿದ್ದ ಗರ್ಭಿಣಿ ಮಹಿಳೆ

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ, ಮೇ 12: ರಾಜ್ಯಾದ್ಯಂತ ಶನಿವಾರ ವಿಧಾನಸಭೆಗೆ ಬಿರುಸಿನ ಮತದಾನ ನಡೆಯಿತು. ಎಲ್ಲ ವರ್ಗದ ಮತದಾರರು ವೋಟಿಂಗ್ ಮಾಡಲು ಮತಗಟ್ಟೆಗೆ ಆಗಮಿಸಿ ತಮ್ಮ ತಮ್ಮ ಮತದಾನದ ಹಕ್ಕು ಚಲಾವಣೆ ಮಾಡುತ್ತಿದ್ದರು.
ಇದರ ಮಧ್ಯೆ ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮತದಾನ ಕೇಂದ್ರದಲ್ಲಿ ಮತದಾನ ವೇಳೆ ಗರ್ಭಿಣಿ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ಸಾವಿತ್ರಿ ಕಿರೇಸೂರ ಎಂಬುವವರೇ ಅಸ್ವಸ್ಥಗೊಂಡ ಗರ್ಭಿಣಿ ಮಹಿಳೆ.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕೇಂದ್ರದಲ್ಲಿ ಮಹಿಳೆ ಮತದಾನ ಮಾಡಲು ಆಗಮಿಸಿದ್ದರು. ಸಾವಿತ್ರಿ ಕಿರೇಸೂರ ಮತ ಚಲಾಯಿಸುತ್ತಿದ್ದಂತೆ ಅಲ್ಲಿಯೇ ಕುಸಿದ ಬಿದ್ದರು. ಆಗ ಚುನಾವಣಾ ಸಿಬ್ಬಂದಿ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಕುಂದಗೋಳ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಿದರು. ಘಟನೆಯಿಂದ ಸ್ಥಳದಲ್ಲಿ ಸ್ವಲ್ಪ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿ, ಕೆಲ ಸಮಯ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
Next Story





