ಏಳರ ಹರೆಯದ ಬಾಲಕಿಯ ಅಪಹರಣ,ಅತ್ಯಾಚಾರ

ಶಾಹಜಾನಪುರ(ಉ.ಪ್ರ)ಮೇ 12: ಶಾಹಜಾನಪುರ ಜಿಲ್ಲೆಯ ರೌಸಾರ್ ಕೋಠಿ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಏಳರ ಹರೆಯದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದು,ಪ್ರಜ್ಞಾಹೀನಳಾಗಿ ಗಂಭೀರ ಸ್ಥಿತಿಯಲ್ಲಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆಯೊಂದರಲ್ಲಿ ಪಾಲ್ಗೊಳ್ಳಲೆಂದು ಗ್ರಾಮಕ್ಕೆ ತೆರಳಿದ್ದ ಬಾಲಕಿ ಇತರ ಮಕ್ಕಳೊಂದಿಗೆ ನಿದ್ರಿಸಿದ್ದಾಗ ಆರೋಪಿಯು ಆಕೆಯನ್ನು ನಿರ್ಜನ ಸ್ಥಳಕ್ಕೆ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸುಮಿತ್ ಶುಕ್ಲಾ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story





