Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇ....

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. 82.82 ಮತದಾನ

ವಾರ್ತಾಭಾರತಿವಾರ್ತಾಭಾರತಿ12 May 2018 8:43 PM IST
share
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ  ಶೇ. 82.82 ಮತದಾನ

ಬಂಟ್ವಾಳ, ಮೇ 12: ದ.ಕ.ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯು ಮುಕ್ತಾಯವಾಗಿದ್ದು, ಶೇ. 82.82ರಷ್ಟು ಮತದಾನವಾಗಿದೆ. ತಾಲೂಕಿನ 249 ಮತಗಟ್ಟೆಗಳಲ್ಲಿ ಉರಿಬಿಸಿಲೆನ್ನದೇ ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಬಂಟ್ವಾಳದ ಕೆಲವೆಡೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಹೊರತುಪಡಿಸಿ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.

ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರು ತಾಲೂಕಿನ ತೊಡಂಬಿಲ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆಯಲ್ಲಿ ಮತ ಚಲಾಯಿಸಿ ನಂತರ ಮಾತನಾಡಿ, ಇದು ತನ್ನ 8ನೆ ಸ್ಪರ್ಧೆಯಾಗಿದೆ. ಇಲ್ಲಿನ ಕ್ಷೇತ್ರದ ಮತದಾರರೇ ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಈ ಬಾರಿ ಮತ್ತೆ ನನ್ನನ್ನು ಗೆಲ್ಲಿಸಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಮಂಗಳೂರು ಉತ್ತರದ ಗುರುಪುರ ಮತಗಟ್ಟೆಯಲ್ಲಿ ಮತ ಚಲಾಯಿಸಿ ನಂತರ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಮತಚಲಾಯಿಸುವ ಮೂಲಕ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಬಂಟ್ವಾಳ ಬಂಡಾರಿಬೆಟ್ಟು ಎಸ್‌ವಿಎಸ್ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು.

ಜೀನ್ನೊಣ ದಾಳಿ- ಹಲವರಿಗೆ ಗಾಯ: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಳಿಕೆ ಶ್ರೀಸತ್ಯಸಾಯಿ ವಿಹಾರದ ವಿದ್ಯಾಕೇಂದ್ರದಲ್ಲಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬ್ರ 80 ಹಾಗೂ 81ರ ಮತಗಟ್ಟೆಯಲ್ಲಿ ಮತದಾರರ ಮೇಲೆ ಜೇನ್ನೊಣ ದಾಳಿ ಮಾಡಿದ್ದು, ಹಲವರು ಗಾಯಗೊಂಡ ಘಟನೆ ನಡೆಯಿತು.

ಇಲ್ಲಿನ ಮತಗಟ್ಟೆ ಆವರಣ ಪ್ರವೇಶದ ಮುಖ್ಯದ್ವಾರದಲ್ಲಿ ಗೂಡುಕಟ್ಟಿದ ಬೃಹತ್ ಗಾತ್ರದ ಜೇನುಗೂಡಿನಿಂದ ಜೇನುನೊಣಗಳು, ಇಲ್ಲಿನ ಎರಡು ಕೇಂದ್ರದ ಮತಗಟ್ಟೆಗಳಲ್ಲಿ ನಿಂತಿದ್ದ ಮತದಾರರ ಮೇಲೆ ತಟ್ಟನೆ ದಾಳಿ ಮಾಡಿದೆ. ಜೇನು ನೊಣ ಕಡಿತದಿಂದ ಹಲವು ಮತದಾರರಿಗೆ ಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ ಪ್ರಸಂಗವೂ ನಡೆದಿದೆ.

ಗುಲಾಬಿ ಬೀಮಾವರ, ಅಣ್ಣು ಪೂಜಾರಿ, ರವಿ ಪಡಿಬಾಗಿಲು, ತಿಮ್ಮಪ್ಪಯ್ಯ ಭಟ್ ಮಡಿಯಾಳ, ಅಣ್ಣು ಕುಲಾಲ್, ಬಾಲಕೃಷ್ಣ ಸುವರ್ಣ, ಫಲುಲ್ ಕುದ್ದುಪದವು ಮೊದಲಾದವರಿಗೆ ಜೇನ್ನೊಣ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ ಹೆಚ್ಚಾಗಿ ಕೆಂಪು ವಸ್ತ್ರ ಧರಿಸಿದವರನ್ನೇ ಜೇನ್ನೊ ಣವು ಗುರಿಯಾಗಿರಿಸಿ ದಾಳಿ ಮಾಡಿದೆ. ಇದರಿಂದಾಗಿ ಮತಗಟ್ಟೆ ಪರಿಸರದಲ್ಲಿ ಕೆಲ ಕಾಲ ಗೊಂದಲದ ಹಾಗೂ ಭಯದ ವಾತಾವರಣ ನಿರ್ಮಾಣವಾಗಿತ್ತು.

3 ಸಲ ಕೈಕೊಟ್ಟ ಮತಯಂತ್ರ: ತಾಲೂಕಿನ ವಗ್ಗ ಸಮೀಪದ ಮದ್ವ ಶಾಲೆಯಲ್ಲಿ ಮೂರು ಮತ ಯಂತ್ರಗಳು ಕೆಟ್ಟು ಹೋದ ಪರಿಣಾಮ ಮತದಾರರು ತೊಂದರೆ ಅನುಭವಿಸಿದ ಘಟನೆ ನಡೆಯಿತು. ಮೊದಲ ಮತಯಂತ್ರದ ಬಟನ್‌ನಲ್ಲಿ ಕಾಣಿಸಿಕೊಂಡರೆ, ಎರಡನೆ ಯಂತ್ರದಲ್ಲಿ ತಾಂತ್ರಿಕ ದೋಷ ಹಾಗೂ ಮೂರನೆ ಯಂತ್ರದ ಅರ್ಧದಲ್ಲಿ ಕೈಕೊಟ್ಟಿತು. ಸುಮಾರು 11ಗಂಟೆಗೆ ಮಂಗಳೂರಿನಿಂದ 4ನೆ ಮತಯಂತ್ರವನ್ನು ತರಿಸಿ, ಮತದಾರರು ಮತ ಚಲಾಯಿಸುವಂತಾಯಿತು.

ಬಂಡಿತಡ್ಕದಲ್ಲೂ ದೋಷ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕನ್ಯಾನ ದಕ್ಷಿಣದ ಬಂಡಿತ್ತಡ್ಕ 242ಎ ಮತಗಟ್ಟೆಯಲ್ಲಿ ಬೆಳಗ್ಗಿನಿಂದ ಮತಯಂತ್ರ ನಿಧಾನ ಗತಿಯಿಂದ ಮತಗಳನ್ನು ಗ್ರಹಿಸಿಕೊಳ್ಳುತ್ತಿತ್ತು. ಮೂರು ಬಾರಿ ಸ್ಟ್ರಕ್ ಆಗಿ ಮತ ಚಲಾವಣೆಯಲ್ಲಿ ತಡವಾಗಿಯಿತು. ಅದರಲ್ಲೂ ಬಿಜೆಪಿ ಅಭ್ಯರ್ಥಿಯ ಮತ ಚಲಾವಣೆಯಾಗಿ ಓಕೆಯಾಗಲು ಸಮಯವನ್ನು ತೆಗೆದುಕೊಳ್ಳುತ್ತಿತು ಎಂಬ ದೂರಿನ ಹಿನ್ನೆಲೆಯಲ್ಲಿ 10.45ರ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮತಯಂತ್ರವನ್ನು ಬದಲಾಯಿಸಿದರು. ಇದರಿಂದ ಸುಮಾರು 1 ತಾಸು ಮತದಾರರು ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಉಂಟಾಯಿತು.

ಉದ್ದವಾಗಿ ಬೆಳೆದ ಸಾಲು: ವಿಟ್ಲ ಪಡ್ನೂರು ಗ್ರಾಮದ ಕಡಂಬು ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ಬೆಳಗ್ಗೆ ಸ್ವಲ್ಪ ತೊಂದರೆ ಕಾಣಿಸಿಕೊಂಡ ಕಾರಣ ಮತದಾರರ ಸರದಿ ಸಾಲು ಉದ್ದವಾಗಿ ಬೆಳೆದಿತ್ತು. ಅಶಕ್ತರಿಗೆ ಮತ್ತು ಅಂಗ ವಿಕಲರಿಗಾಗಿ ವೀಲ್ ಚೈರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಂದು ಹಂತದಲ್ಲಿ ಇವರ ಅರ್ಜಿ ಫಾರ್ಮ್‌ಗಳೆಲ್ಲಾ ಖಾಲಿಯಾಗಿ ಬೇರೆ ಕಡೆಯಿಂದ ತರುವ ವ್ಯವಸ್ಥೆ ಮಾಡುವವರೆಗೆ ಸ್ವಲ್ಪ ಸಮಯ ಇವರು ಕೂಡ ಸರದಿಯಲ್ಲಿ ನಿಲ್ಲುವಂತಾಯಿತು.

ಕುಸಿದು ಬಿದ್ದು ಸಾವು: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕೊಳ್ನಾಡು ಗ್ರಾಮದ ಕುಳಾಲು ಮತಗಟ್ಟೆಗೆ ಮತದಾನ ಮಾಡಲು ಆಗಮಿಸುತ್ತಿದ್ದ ಕುಳಾಲು ಹರೀಶ ಮೇರ (40) ಅವರು ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮನೆಯಿಂದ ಮತದಾನ ಕೇಂದ್ರಕ್ಕೆ ತೆರಳುತ್ತಿದ್ದಂತೆ ಕುಳಾಲು ಹರೀಶ ಮೇರ ಅವರು ತಲೆತಿರುಗಿ ಕುಸಿದು ಬಿದ್ದು, ಸ್ಥಳದಲ್ಲೇ  ಸಾವನ್ನಪ್ಪಿದ್ದಾರೆ.

ಶತಾಯುಷಿಯಿಂದ ಹಕ್ಕುಚಲಾವಣೆ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮಾಣಿ ಸಮೀಪದ ಪೆರಾಜೆ ಶಾಲೆಯಲ್ಲಿ ಪೆರಾಜೆ ಗ್ರಾಮದ ಬಡೆಕೋಡಿ ನಿವಾಸಿ 103 ಹರೆಯದ ಶತಾಯುಷಿ ಲಕ್ಮೀಯವರು ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿ ಯುವಕರನ್ನು ನಾಚುವಂತೆ ಮಾಡಿದರು.

ಮದುವಣಗಿತ್ತಿ: ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ವಿವಾಹವಾಗಿದ್ದ ನವ ವಧು ಬಿ.ಸಿ.ರೋಡಿನಲ್ಲಿ ಶನಿವಾರ ನಡೆಯಬೇಕಾಗಿದ್ದ ಅರತಕ್ಷತೆ ಮುನ್ನ ಬಂಟ್ವಾಳ ಎಸ್‌ವಿಎಸ್ ಪ್ರೌಢ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬಂಟ್ವಾಳ ಭಂಡಾರಿಬೆಟ್ಟುವಿನ ನವವಧು ಬೆಂಗಳೂರಿನಲ್ಲಿದ್ದು, ಕೆಲದಿನಗಳ ಹಿಂದೆ ದೆಹಲಿಯಲ್ಲಿ ವಿವಾಹ ಸಮಾರಂಭ ನಡೆದಿತ್ತು. ಬಿ.ಸಿ.ರೋಡಿನ ಮೊಡಂಕಾಪಿನಲ್ಲಿ ಸಭಾಂಗಣದಲ್ಲಿ ಚುನಾವಣೆಯಂದೆ ಅರತಕ್ಷತೆ ಆಯೋಜಿಸಿದ್ದು, ವಧು ಅರತಕ್ಷತೆಗಾಗಿ ಸಭಾಂಗಣಕ್ಕೆ ತೆರಳುವ ಹಾದಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ದೇಲಂತಬೆಟ್ಟುವಿನಲ್ಲಿ ಮಾತಿನ ಚಕಮಕಿ: ದೇಲಂತಬೆಟ್ಟು 241 ಮತಗಟ್ಟೆಯಲ್ಲಿ ಮತದಾರರನ್ನು ವಾಹನದಲ್ಲಿ ಕರೆದುಕೊಂಡು ಬಂದು ಬಿಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಕೆಲವು ಮೂಲಗಳ ಪ್ರಕಾರ ಒಂದು ಪಕ್ಷದವರಿಗೆ ಮತಗಟ್ಟೆಯ ಬಳಿಗೆ ನೇರವಾಗಿ ಹೋಗಲು ಬಿಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ.

ಪೊಲೀಸ್ ಇಲಾಖೆಯ ಹಾಗೂ ಗಡಿ ಭದ್ರತಾ ಪಡೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ 100 ಮೀಟರ್ ದೂರದಲ್ಲಿ ಮಾರ್ಕ್ ಮಾಡಿ ಇದರ ಒಳಗೆ ಯಾವ ಪಕ್ಷದವರೂ ಬರದಂತೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವೀಕಾಂತೇ ಗೌಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೂ ದೌಡಾಯಿಸಿದರು.

ಜನಾಕರ್ಷಣೆಯ ಮಾದರಿ ಮತಗಟ್ಟೆ: ಈ ಬಾರಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಥವಾ ಎರಡು ಕಡೆಗಳಲ್ಲಿ ಮಾದರಿ ಮತಗಟ್ಟೆ ರಚನೆ ಮಾಡಲಾಗಿತ್ತು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕೇಪು ಗ್ರಾಮದ ಕಲ್ಲಂಗಳ ಆಶ್ರಮ ಶಾಲೆಯ 91ನೆ ಮತಗಟ್ಟೆ ಮದುವಣಗಿತ್ತಿಯಂತೆ ಅಲಂಕಾರಗೊಂಡಿತ್ತು. ಬಣ್ಣಬಣ್ಣದ ವಸ್ತ್ರ, ನೆಲಕ್ಕೆ ಕೆಂಪು ಹಾಸು, ರಂಗುರಂಗಿನ ಬಲೂನುಗಳ ತೋರಣಗಳಿಂದ ಮತದಾರರನ್ನು ಸ್ವಾಗತಿಸುತ್ತಿತ್ತು. ಬಂದವರಿಗೆ ಬೆಲ್ಲ-ನೀರು, ಕುಳಿತುಕೊಳ್ಳಲು ಬಟ್ಟೆ ಹಾಸಿದ ಕುರ್ಚಿಗಳು ವಿಶೇಷತೆಯಾಗಿತ್ತು. ಈ ಮತಗಟ್ಟೆ ವಿಶೇಷ ಆಕರ್ಷಣೆಯಾಗಿ ಕಂಗೊಳಿಸಿತ್ತು.

ಪಿಂಕ್ ಮತಗಟ್ಟೆ: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಮಹಿಳಾ ಸ್ನೇಹಿ ಮತದಾನ ಕೇಂದ್ರವಾಗಿ ಗಮನ ಸೆಳೆಯಿತು. ಮತಗಟ್ಟೆ ಕೇಂದ್ರವನ್ನು ಪಿಂಕ್ ಬಣ್ಣದ ವಸ್ತ್ರ, ಬಲೂನುಗಳಿಂದ ಅಲಂಕರಿಸಲಾಗಿದ್ದು, ಚುನಾವಣಾ ಮಹಿಳಾ ಸಿಬ್ಬಂದಿ ಪಿಂಕ್ ಬಣ್ಣದ ಸಮವಸ್ತ್ರ ಧರಿಸಿದ್ದರು.

ಕ್ಷೇತ್ರದ ಐವರು ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಇದೇ 15ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ತಾಲೂಕಿನ ತುಂಬೆ ಗ್ರಾಮದ ಮತಗಟ್ಟೆಯೊಂದರಲ್ಲಿ ಶನಿವಾರ ಮೊದಲ ಮತ ಚಲಾಯಿಸಿದ ಖುಷಿಯಲ್ಲಿ ತಮ್ಮ ಬೆರಳಿಗೆ ಹಾಕಿರುವ ಶಾಹಿಯನ್ನು ಪ್ರದರ್ಶಿಸುತ್ತಿರುವ ಯುವ ಮತದಾರರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X