ಮತ ಚಲಾಯಿಸಿದ 106 ವರ್ಷದ ಇಸ್ಮಾಯಿಲ್ ಹಾಜಿ

ಉಪ್ಪಿನಂಗಡಿ, ಮೇ 12: ಕರಾವಳಿಯ ಹಿರಿಯ ವ್ಯಕ್ತಿ 106 ವರ್ಷದ ಪ್ರಾಯವಿರುವ ಇಸ್ಮಾಯಿಲ್ ಹಾಜಿ ಕೆಮ್ಮಾರ ಅವರು ಇಂದು ಲವಲವಿಕೆಯಿಂದಲೇ ಮತ ಚಲಾವಣೆ ಮಾಡಿದರು.
ಕೆಮ್ಮಾರ ಹಿರಿಯ ಪ್ರಾಥನಿಕ ಶಾಲೆಯ ಓಟಿಂಗ್ ಬೂತ್ ಗೆ ಬಹಳ ಹುರುಪಿನಿಂದ ಆಗಮಿಸಿ ಮತದಾನ ಮಾಡಿದ ಈ ಇಳಿ ವಯಸ್ಸಿನ ಇಸ್ಮಾಯಿಲ್ ಹಾಜಿ ಅವರ ಬಗ್ಗೆ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ಅಭಿಮಾನ ವ್ಯಕ್ತಪಡಿಸಿ, ಅವರಿಗೆ ವಿಶೇಷ ಗೌರವ ನೀಡಿದರು.
Next Story





