ಶತಾಯುಷಿ ಐಸುಮ್ಮರಿಗೆ ಮೊಮ್ಮಗ ಸಾಥ್

ಅರಿಯಡ್ಕ, ಮೇ 12: ಅರಿಯಡ್ಕ ಗ್ರಾಮದ ಅರಿಯಡ್ಕ ಶಾಲಾ ಮತಗಟ್ಟೆಯಲ್ಲಿ ಶೇಕಮಲೆ ನಿವಾಸಿ ಶತಾಯುಷಿ 105 ಹರೆಯದ ಐಶುಮ್ಮ ತಮ್ಮ ಮೊಮ್ಮಗನ ಸಹಾಯದೊಂದಿಗೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.
ಇದುವರೆಗಿನ ಎಲ್ಲಾ ಮತದಾನದಲ್ಲಿಯೂ ತಪ್ಪದೇ ಮತದಾನ ಮಾಡಿದ ಐಸುಮ್ಮ ಈ ಬಾರಿಯೂ ತಮ್ಮ ಹಕ್ಕು ಚಲಾಯಿಸಿದರು. ಮತದಾನ ಕುರಿತು ಮಾತನಾಡಿದ ಅವರು ಓಟು ಎಲ್ಲರೂ ಹಾಕಬೇಕು ಇಷ್ಟ ಇದ್ದವರಿಗೆ ಹಾಕಿ , ಓಟು ಹಾಕದವರು ಸೋಮಾರಿಗಳು ಎಂದು ಹೇಳಿದರು. ಐದು ತಲೆಮಾರು ದಾಟಿದ ಐಶುಮ್ಮ ನಡೆಯಲಾಗದೆ ಕಳೆದ 15 ವರ್ಷಗಳಿಂದ ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ಕಣ್ಣು ಕಾಣದ ಇವರು ಕಳೆದ 15 ವರ್ಷಗಳಿಂದ ಮೊಮ್ಮಗ ಎಸ್. ಪಿ ಬಶೀರ್ ಅವರ ಸಹಾಯದಿಂದಲೇ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.
Next Story





