Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ...

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ವಾರ್ತಾಭಾರತಿವಾರ್ತಾಭಾರತಿ12 May 2018 9:22 PM IST
share
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಉಳ್ಳಾಲ, ಮೇ 12: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರದಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ, ಸೋಮೇಶ್ವರ, ತಲಪಾಡಿ, ಅಂಬ್ಲಮೊಗರು, ಹರೇಕಳ, ಮಂಜನಾಡಿ, ಕೊಣಾಜೆ, ಕುರ್ನಾಡು, ಬೋಳಿಯಾರು, ಬಾಳೆಪುಣಿ, ಕಿನ್ಯ, ಹರೇಕಳ, ಕೋಟೆಕಾರು ಸೇರಿದಂತೆ ಕೇತ್ರದ ಎಲ್ಲಾ ಕಡೆಗಳಲ್ಲಿಯೂ ಬೆಳಿಗ್ಗೆಯಿಂದಲೇ ಮತದಾರರ ಉತ್ಸಾಹ ಅಧಿಕವಾಗಿ ಕಂಡು ಬಂದಿತ್ತು. ಎಲ್ಲಾ ಮತದಾನ ಕೇಂದ್ರಗಳಲ್ಲಿಯೂ ಬೆಳಿಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ದೃಶ್ಯ ಕಾಣುತ್ತಿತ್ತು.

ವಿಳಂಬದ ಆರಂಭ: ಮುನ್ನೂರು ಗ್ರಾಮದ ಕುತ್ತಾರು ಶಾಲೆಯ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡಿತು. ತಾಂತ್ರಿಕ ಅಡಚಣೆಯಿಂದಾಗಿ ಮತದಾನ ಪ್ರಕ್ರಿಯೆ ವಿಳಂಬವಾಗಿದೆ . ವಿಳಂಬದ ಆರಂಭ ನಂತರವೂ ಕೆಲಕಾಲ ನಿಧಾನವಾಗಿ ಮತದಾನ ಪ್ರಕ್ರಿಯೆ ನಡೆದುದರಿಂದ ಸರತಿ ಸಾಲಿನಲ್ಲಿ ಮತದಾರರು ಹೆಚ್ಚು ಸಮಯ ನಿಲ್ಲಬೇಕಾಯಿತು.

ಶಾಂತಿಯುತ ಮತದಾನ : ಕುತ್ತಾರು, ಉಳ್ಳಾಲ, ಬಬ್ಬುಕಟ್ಟೆ ಭಾಗಗಳಲ್ಲಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಅರೆಸೇನಾ ಸಿಬ್ಬಂದಿ ಹಾಗೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬಬ್ಬುಕಟ್ಟೆ ಮತಗಟ್ಟೆಯ ಸಮೀಪ ಎರಡು ಪಕ್ಷದ ಮುಖಂಡರು ಗೇಟಿನವರೆಗೆ ಹೋಗುತ್ತಿರುವುದನ್ನು ಎರಡು ಪಕ್ಷದವರು ವಿರೋಧಿಸಿ, ಆನಂತರ ಪೊಲೀಸರು ಸುಣ್ಣದ ಮೂಲಕ ಮತಗಟ್ಟೆಯ 100 ಮೀ ಅಂತರದ ಎರಡೂ ಭಾಗದಲ್ಲಿ ಗೆರೆ ಹಾಕಿ ಅದರೊಳಗೆ ವಾಹನಗಳು ಮತ್ತು ಪಕ್ಷದ ಮುಖಂಡರು ಪ್ರವೇಶಿಸದಂತೆ ನೋಡಿಕೊಂಡರು.

ಕೈರಂಗಳದಲ್ಲಿ ಸಮಯ ಮುಗಿದ ಬಳಿಕ ಮತದಾನಕ್ಕೆ ಅವಕಾಶ ನೀಡದ ಅಧಿಕಾರಿಗಳು: ಕೈರಂಗಳದ ದುಗ್ಗಜ್ಜರ ಕಟ್ಟೆ ಮತದಾನ ಕೇಂದ್ರದಲ್ಲಿ ಸಂಜೆ ಆರು ಗಂಟೆಯ ಬಳಿಕ ಮತದಾನ ಮಾಡಲು ಬಂದಾಗ ಕೆಲವರು ವಿರೋದ ವ್ಯಕ್ತಪಡಿಸಿದ್ದು ಕೆಲ ಕ್ಷಣ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಬಬ್ಬುಕಟ್ಟೆ ಹಾಗೂ ಕುತ್ತಾರು ಪ್ರದೇಶದ ಮತಗಟ್ಟೆ ಪ್ರದೇಶದಲ್ಲಿ ಶಾಮಿಯಾನ ಹಾಕುವ ಕುರಿತಾಗಿ ಉಭಯ ಪಕ್ಷದ ಕಾರ್ಯಕರ್ತರ ನಡುವೆ ಚರ್ಚೆ ಉದ್ಭವಿಸಿ ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು. ಬಳಿಕ ದೊಡ್ಡ ಗಾತ್ರದ ಛತ್ರಿ ಬಳಸಿದರು. ಕೆಲವು ಬೂತ್‌ಗಳಲ್ಲಿ ಕ್ಯಾಂಪೇನ್ ನಡೆಯುವುನ್ನು ಪ್ಯಾರಾ ಮಿಲಿಟರಿ ಪಡೆ ತಡೆದ ಪ್ರಸಂಗ ನಡೆದಿದೆ.

ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲಾ ಮತದಾನ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ತನ್ನ ಜೊತೆ ಗಿದ್ದ ಯುವಕನ ಕೈಬೆರಳಿಗೆ ಹಾಕಿದ ಶಾಯಿ(ಇಂಕ್) ಮಾಸಿದಂತಿದ್ದು ಯುವಕರು ದೂರಿಕೊಂಡಾಗ ಸ್ವತಃ ಅಭ್ಯರ್ಥಿ ಬೋಳಿಯಾರ್ ಅವರ ಕೈಬೆರಳಿಗೆ ಹಾಕಿದ ಶಾಯಿ ಅದೇ ಸ್ಥಿತಿಯಲ್ಲಿದ್ದುದರಿಂದ ಮತ್ತೆ ಶಾಯಿ ಬಾಟಲಿಯನ್ನು ಬದಲಾಯಿಸಲಾಯಿತು.

ವೋಟರ್ ಐಡಿ ಬಿಟ್ಟು ಬಂದ ಅಜ್ಜಿ

ಮೊಂಟೆಪದವು ಮತದಾನ ಕೇಂದ್ರಕ್ಕೆ ಸುಮಾರು 80ರ ಹರೆಯದ ಶಾರದಾ ಹಾಗೂ ಲೀಲಾ ಎಂಬುವವರನ್ನು ಅವರ ಸಂಬಂಧಿಕರು ವಾಹನದಲ್ಲಿ ಕರೆ ತಂದಿದ್ದರು. ಆದರೆ ಮತಗಟ್ಟೆಗೆ ಬಂದ ಬಳಿಕ ಲೀಲಾ ಎಂಬ ಹಿರಿಯ ಮಹಿಳೆಯ ವೋಟರ್ ಐಡಿ ಮನೆಯಲ್ಲೇ ಉಳಿದಿದ್ದರಿಂದ ಐಡಿಯನ್ನು ಮನೆಯಿಂದ ತರುವವರೆಗೆ ಮತಗಟ್ಟೆಯ ಬಳಿ ಇಬ್ಬರು ಹಿರಿಯ ಮಹಿಳೆಯರು ಕಾದುಕೊಂಡು ಕುಳಿತಿರುವ ದೃಶ್ಯ ಕಂಡು ಬಂತು.

ಮನೆಯ ಶೌಚಾಲಯ ಬಳಸಿದ ಮಹಿಳಾ ಸಿಬ್ಬಂದಿಗಳು

ಬೋಳಿಯಾರ್ ಜಾರದಗುಡ್ಡೆ ದ.ಕ.ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರದಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲದಿದ್ದರಿಂದ ಬಳಿಕ ಅಲ್ಲೇ ಸಮೀಪವಿದ್ದ ಮನೆಯ ಶೌಚಾಲಯವನ್ನು ಚುನಾವಣೆ ಕೆಲಸಕ್ಕೆ ಬಂದಿದ್ದ ಸಿಬ್ಬಂದಿಗಳು ಬಳಸಬೇಕಾದ ಪರಿಸ್ಥಿತಿ ಶನಿವಾರ ಬೆಳಿಗ್ಗೆ ಎದುರಾಯಿತು.

ಕ್ಷೇತ್ರವ್ಯಾಪಿ ನಾಲ್ಕು ಕಡೆಗಳಲ್ಲಿ ಪಿಂಕ್ ಪೋಲಿಂಗ್ ಸ್ಟೇಶನ್(ಮಹಿಳಾ ಸ್ನೇಹಿ ಮತದಾನ ಕೇಂದ್ರ) ಕಾರ್ಯಾಚರಿಸಿದ್ದು ಈ ಕೇಂದ್ರಗಳಲ್ಲಿ ಮಹಿಳೆಯರು ಹೊಸ ಉತ್ಸಾಹದೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.

ಬಬ್ಬುಕಟ್ಟೆ ಮತಗಟ್ಟೆಯಲ್ಲಿ 97ರ ಹರೆಯದ ರಾಧಾ ಮೂಲ್ಯ ಅವರನ್ನು ಪುತ್ರ ಮತಗಟ್ಟೆಗೆ ಹೊತ್ತು ಕರೆದುಕೊಂಡು ಮತ ಚಲಾಯಿಸಿದರು. ಕೊಣಾಜೆ, ಕುರ್ನಾಡು, ಮೊಂಟೆಪದವು, ಉಳ್ಳಾಲ ಅಂಬ್ಲಮೊಗರು, ಕುಂಪಲ, ಮಡ್ಯಾರು ಸೇರಿದಂತೆ ಬಹತೇಕ ಭಾಗದಲ್ಲಿಯೂ ಹಿರಿಯರು ಹಾಗೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ವಿಕಲಚೇತನ ಮತದಾರರು ಸಂಬಂಧಿಕರ ಆಶ್ರಯದೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕನ್ನು ಚಲಾಯಿಸಿದರು.

ಒಟ್ಟಿನಲ್ಲಿ ಈ ಭಾಗದಲ್ಲಿ ಶನಿವಾರ ನಡೆದ ಮತದಾನ ಪ್ರಕ್ರಿಯೆಯು ಯಾವುದೇ ಹೆಚ್ಚಿನ ಸಮಸ್ಯೆಗಳಿಲ್ಲದೆ ಶಾಂತಿಯುತವಾಗಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಯು.ಟಿ ಖಾದರ್ ಅವರು ತಾಲೂಕು ಪಂಚಾಯಿತಿ ಸದಸ್ಯ ಜಬ್ಬಾರ್ ಬೋಳಿಯಾರ್ ಸೇರಿದಂತೆ ಕಾರ್ಯಕರ್ತರೊಂದಿಗೆ ಆಗಮಿಸಿ ಬೋಳಿಯಾರಿನ ರಂತಡ್ಕ ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7.30ಕ್ಕೆ ಮತ ಚಲಾಯಿಸಿದರು. ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಹಾಗೂ ಮಂಗಳೂರು ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನತೆ ಮತ್ತೆ ಮತ್ತೆ ಶಾಸಕನನ್ನಾಗಿ ಆರಿಸುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಸರಿಯಾಗಿ 7 ಗಂಟೆಗೆ ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಧುಗಳ ಜೊತೆಗೂಡಿ ಆಗಮಿಸಿ ಮತ ಚಾಲಯಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಡಳಿತ ವೈಫಲ್ಯ, ಕೇಂದ್ರದಲ್ಲಿ ಮೋದಿ ಸರಕಾರದ ಜನಪರ ಯೋಜನೆಗಳು ಮಂಗಳೂರು ಕ್ಷೇತ್ರ ಬಿಜೆಪಿ ಶಾಸಕನನ್ನು ವಿಧಾನ ಸಭೆ ಕಳುಹಿಸುವ ನಂಬಿಕೆ ಇದೆ. ಧರ್ಮ ಬೇಧವಿಲ್ಲದೆ ಸಮಾಜ ಸೇವಕನಾಗಿ ಹೋರಾಟಗಾರನಾಗಿ ದುಡಿದ ಸೇವೆಯನ್ನು ಜನತೆ ಮರೆಯಲಾರರು ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X