ಪುತ್ತೂರು ಕ್ಷೇತ್ರದಲ್ಲಿ ಶೇ. 81 ಮತದಾನ
ಪುತ್ತೂರು, ಮೇ 12: ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ. 81 ಮತದಾನ ಆಗಿದೆ.
ಪುತ್ತೂರು ಕ್ಷೇತ್ರದ 1,00,620 ಮಂದಿ ಪುರುಷ ಹಾಗೂ 1,01,264 ಮಹಿಳಾ ಮತದಾರರದೂ ಸೇರಿದಂತೆ ಒಟ್ಟು 2,01,884 ಮತದಾರರಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಒಟ್ಟು 223 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಬೆಳಗ್ಗಿನ ವೇಳೆ ಬಿರುಸಿನ ಮತದಾನ ನಡೆದಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ.51ರಷ್ಟು ಮತದಾನ ಆಗಿತ್ತು. ಬಳಿಕ ಮಂದಗತಿಯಿಂದ ಮತದಾನ ಮುಂದುವರಿದಿತ್ತು, ಸಂಜೆ 4 ಗಂಟೆಯ ವೇಳೆಗೆ ಕ್ಷೇತ್ರದಲ್ಲಿ ಶೇ.65ರಷ್ಟು ಮತದಾನವಾಗಿತ್ತು. ರಾತ್ರಿ 8.30ರ ವೇಳೆಗೆ ಬಂದಿರುವ ಅಂಕಿ ಅಂಶಗಳ ಮಾಹಿತಿಯಂತೆ ಶೇ.81 ಮತದಾನವಾದ ಬಗ್ಗೆ ವರದಿಯಾಗಿದೆ.
ಇಲ್ಲಿನ ಶಾಂತಿಗೋಡು ಮತಗಟ್ಟೆಯಲ್ಲಿ ಗರಿಷ್ಠ 91.61 ಮತ್ತು ಸಂತಫಿಲೋಮಿನಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಕನಿಷ್ಠ 68.29 ಮತದಾನವಾಗಿದೆ.
Next Story





