Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶಾಂತಿಯುತ...

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ

ಕೆಲವೆಡೆ ಕೈಕೊಟ್ಟ ಮತಯಂತ್ರಗಳು, ಕಾದು ಸುಸ್ತಾದ ಮತದಾರರು

ವಾರ್ತಾಭಾರತಿವಾರ್ತಾಭಾರತಿ12 May 2018 11:06 PM IST
share
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ

ಚಿಕ್ಕಮಗಳೂರು, ಮೇ 12: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯಾದ್ಯಂತ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು. ಜಿಲ್ಲೆಯ ಮೂಡಿಗೆರೆ, ಶೃಂಗೇರಿ ಹಾಗೂ ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಕೆಲ ಮತಗಟ್ಟೆಗಳಲ್ಲಿ ಮುಂಜಾನೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ಕೆಲ ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ವಿಳಂಬವಾಗಿದ್ದ ಘಟನೆಗಳು ಹೊರತು ಪಡಿಸಿ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿತ್ತು.

ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪಟ್ಟಣದ ಮತಗಟ್ಟೆ ಸಂಖ್ಯೆ 173ರಲ್ಲಿ ಮತಚಲಾಯಿಸಲು ಕಾಂಗ್ರೆಸ್ ಅಭ್ಯರ್ಥಿ ಮುಂಜಾನೆ 7ಕ್ಕೆ ಮತಗಟ್ಟೆ ಬಳಿ ಆಗಮಿಸಿದ್ದರು. ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೋಟಮ್ಮ ಅವರೇ ಇವಿಎಂ ಯಂತ್ರದಲ್ಲಿ ಮೊದಲ ಮತ ದಾಖಲಿಸಲು ಮುಂದಾದಾಗ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿದೆ. ಅಧಿಕಾರಿಗಳು ಇವಿಎಂ ಸರಿಪಡಿಸಲು ಮುಂದಾದರಾದರೂ ತಕ್ಷಣಕ್ಕೆ ಸರಿಯಾಗಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಸೇರಿದಂತೆ ಮತಗಟ್ಟೆಗೆ ಮುಂಜಾನೆ ಬಂದಿದ್ದ ಮತದಾರರು ಕೆಲ ಹೊತ್ತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಚುನಾವಣಾ ಸಿಬ್ಬಂದಿ ಮತಯಂತ್ರದ ದೋಷ ಸರಿಪಡಿಸಿದ್ದರಿಂದ ಮತದಾನ ಶಾಂತಿಯುತವಾಗಿತ್ತು. 

ಶೃಂಗೇರಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಪಡುಬಯಲು ಬೂತ್‍ನ ಮತಗಟ್ಟೆ ಸಂಖ್ಯೆ 133ರಲ್ಲಿ ಮುಂಜಾನೆಯಿಂದಲೇ ಇವಿಎಂ ದೋಷ  ಕಾಣಿಸಿಕೊಂಡಿದ್ದರಿಂದ 1 ಗಂಟೆಗಳ ಕಾಲ ಮತದಾನ ವಿಳಂಬವಾಗಿತ್ತು. ನಂತರ ಮತದಾನ ಪ್ರಕ್ರಿಯೆ ಶಾಂತವಾಗಿ ನಡೆದಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಬೆಳಗ್ಗೆ ಮತಗಟ್ಟೆಗಳ ಮುಂದೆ  ಮತದಾರರ ಸಂಖ್ಯೆ ಕಡಿಮೆ ಇತ್ತು. ಮುಂಜಾನೆ ಕಡಿಮೆ ಸಂಖ್ಯೆಯಲ್ಲಿದ್ದ ಮತದಾರರ ಸಂಖ್ಯೆ ನಿಧಾನವಾಗಿ ಏರಿಕೆಯಾಗಿದ್ದು, ಈ ಭಾಗದಲ್ಲಿ ಮತಯಂತ್ರ ದೋಷಗಳಂತಹ ಸಮಸ್ಯೆ ಕಂಡು ಬಂದ ಬಗ್ಗೆ ವರದಿಯಾಗಿಲ್ಲ. ಮತದಾನ ಬಹುತೇಕ ಶಾಂತಿಯುತವಾಗಿತ್ತು. 

ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪ್ಪಳ್ಳಿ ವಾರ್ಡ್‍ನಲ್ಲಿರುವ ಶಾಂತಿನಗರ ಬಡಾವಣೆಯ ಮತಗಟ್ಟೆ ಸಂಖ್ಯೆ 116ರಲ್ಲಿ ಮುಂಜಾನೆ 7ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಯಿತಾದರೂ ಒಂದು ಕೇವಲ ಒಂದು ಮತ ದಾಖಲಾದ ತಕ್ಷಣ ಇವಿಎಂ ಯಂತ್ರ ಕೈಕೊಟ್ಟಿತ್ತು. ಮತಗಟ್ಟೆ ಅಧಿಕಾರಿ ಇವಿಎಂ ಯಂತ್ರದ ತಾಂತ್ರಿಕ ದೋಷವನ್ನು ಸರಿಪಡಿಸಿದರಾದರೂ ಮತ್ತೆ 6 ಮಂದಿ ಮತದಾನ ಮಾಡಿದ ಬಳಿಕ ಇವಿಎಂ ಮತ್ತೆ ಕೈ ಕೊಟ್ಟಿತ್ತು. ತಕ್ಷಣಕ್ಕೆ ಇವಿಎಂ ತಪಾಸಣೆ ಮಾಡುವ ಇಂಜಿನಿಯರ್ ಲಭ್ಯವಾಗದ್ದರಿಂದ ಮತದಾನ ಪ್ರಕ್ರಿಯೆ ಸುಮಾರು 2 ಗಂಟೆಗಳ ಕಾಲ ವಿಳಂಬವಾಯಿತು. ಇದರಿಂದಾಗಿ ಮತಗಟ್ಟೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ಸ್ಥಳೀಯ ಮತದಾರರು ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ಹೋಗಬೇಕಿದ್ದ ಜನತೆ ಕಾದು ಕಾದು ಹೈರಾಣಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯಗಳು ಮತಗಟ್ಟೆ ಎದುರು ಕಂಡು ಬಂತು. ಸುಮಾರು 2 ಗಂಟೆಗಳ ತರುವಾಯ ಚುನಾವಣಾ ಸಿಬ್ಬಂದಿ ಮತಯಂತ್ರ ಪರಿಶೀಲಿಸಿ ಸರಿಪಡಿಸಿದ್ದರಿಂದ ಬೆಳಗ್ಗೆ 9ರ ನಂತರ ಮತಗಟ್ಟೆಯಲ್ಲಿ ಮತದಾನ ಸಾಂಗವಾಗಿ ನಡೆಯಿತು.

ಉಳಿದಂತೆ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಶಾಂತವಾಗಿತ್ತಾದರೂ, ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಕ್ಯಾತನಬೀಡು ಗ್ರಾಮದ ಮತಗಟ್ಟೆ ಸಂಖ್ಯೆ 199ರಲ್ಲಿ ವಿಕಲಚೇತನ ಮತದಾರ ತೀರ್ಥಕುಮಾರ್ ಎಂಬವರು  ನೆಲದಲ್ಲೇ ತೆವಳಿಕೊಂಡು ಬಂದು ಮತದಾನ ಮಾಡಿದರು. ಇದೇ ಬೂತ್‍ನಲ್ಲಿ ಇಬ್ಬರು ವಯೋವೃದ್ಧರನ್ನು ಹೊತ್ತು ಕೊಂಡು ಬಂದು ಮತದಾನ ಮಾಡಿಸಿದದರು. ಅಲ್ಲದೇ ಬೆಳವಾಡಿ ಗ್ರಾಮದ 231, 232 ಸಂಖ್ಯೆಯ ಬೂತ್‍ನಲ್ಲಿ ಗಣೇಶ್ ರಾವ್ (85), ಹನುಮಮ್ಮ(99) ಎಂಬ ಹೆಸರಿನ ಇಬ್ಬರು ಹಿರಿಯ ಜೀವಗಳನ್ನು ಮತಗಟ್ಟೆಗೆ ಮತ್ತು ತಂದು ಮತ ಹಾಕಿಸಿದ ದೃಶ್ಯಗಳೂ ಕಂಡು ಬಂದವು.

ಜಿಲ್ಲಾಡಳಿತ ಅಂಗವಿಕಲರ ಹಾಗೂ ನಡೆಯಲು ಸಾಧ್ಯವಾಗದವರ ಸಹಾಯಕ್ಕೆಂದು ಜಿಲ್ಲೆಯ ಮತಗಟ್ಟೆಗಳ ಪೈಕಿ 400ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವ್ಹೀಲ್‍ಚೇರ್ ಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದರೂ, ಕ್ಯಾತನಬೀಡು, ಬೆಳವಾಡಿ, ಲಕ್ಯಾ ಗ್ರಾಮಗಳಲ್ಲಿ ವಯೋವೃದ್ಧರ ಹಾಗೂ ವಿಕಲಚೇತನ ಅನುಕೂಲಕ್ಕೆ ವ್ಹೀಲ್‍ಚೇರ್ ನೀಡದಿರುವ ಕ್ರಮಕ್ಕೆ ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಖರಾಯಪಟ್ಟಣದ ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿ ವಿಕಲಚೇತನ ಮತದಾರರು, ವಯೋವೃದ್ಧರು, ಗರ್ಭಿಣಿಯರು ವ್ಹೀಲ್‍ಚೇರ್ ಸಹಾಯದಿಂದ ಮತಗಟ್ಟೆಗೆ ಬಂದು ಮತಚಾಲಾಯಿಸಿದ ದೃಶ್ಯಗಳೂ ಗಮನಸೆಳೆದವು.

ಚಿಕ್ಕಮಗಳೂರು ನಗರ ಸೇರಿದಂತೆ ಸಿಂದಿಗೆರೆ, ಕಳಸಾಪುರ, ಮೂಗ್ತಿಹಳ್ಳಿ, ಅಲ್ಲಂಪುರ, ಸಖರಾಯಪಟ್ಟಣ, ಲಕ್ಯಾ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಹಾಗೂ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ತರೀಕೆರೆ, ಕಡೂರು ಕ್ಷೇತ್ರಗಳಲ್ಲಿ ಮುಂಜಾನೆ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಬಿರುಸುಗೊಂಡಿದೆ. ಮುಂಜಾನೆ 7 ರಿಂದ 11 ಗಂಟೆಯ ವರೆಗೆ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.24.26ರಷ್ಟು ಮತದಾನವಾಗಿದ್ದರೇ, ಕಡೂರು ಶೇ.19.97, ತರೀಕೆರೆ ಶೇ.22.75, ಶೃಂಗೇರಿ ಶೇ.32.48 ಹಾಗೂ ಮೂಡಿಗೆರೆ ಕ್ಷೇತ್ರದಲ್ಲಿ ಶೇ.25.05 ರಷ್ಟು ಮತದಾನವಾಗಿತ್ತು. ಒಟ್ಟಾರೆ ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ 11ರವರೆಗೆ ಶೇ.24ರಷ್ಟು ಮತದಾನವಾಗಿತ್ತು. ಮಧ್ಯಾಹ್ನದ ಬಳಿಕ ಈ ಕ್ಷೇತ್ರಗಳಲ್ಲಿ ಮತದಾನ ಬಿರುಸುಗೊಂಡಿತ್ತು. 

ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಹಿರಿಯ, ವಯೋವೃದ್ಧ ಮತದಾರರು ಕೆಲವೆಡೆ ವ್ಹೀಲ್‍ಚೇರ್‍ಗಳ ಸಹಾಯದಿಂದ ಬಂದು ಮತದಾನ ಮಾಡಿದರೇ, ಕೆಲವೆಡೆ ಮಕ್ಕಳು, ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಹೊತ್ತು ತಂದು ಮತದಾನ ಮಾಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಮತಗಟ್ಟೆ ಆವರಣದ ಹೊರಭಾಗಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು, ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಪ್ರಯತ್ನಸುತ್ತಿದ್ದ ದೃಶ್ಯಗಳೂ ಸಾಮಾನ್ಯವಾಗಿದ್ದವು. ಕೆಲ ಗ್ರಾಮಗಳಲ್ಲಿ ಮತದಾರರು ಹಣ ಹೆಂಡ ನೀಡದಿರುವುದಕ್ಕೆ ಕೆಲ ರಾಜಕೀಯ ಪಕ್ಷಗಳು, ಮುಖಂಡರ ವಿರುದ್ಧ ದೂರಿದ ಪ್ರಸಂಗಗಳೂ ಕಂಡುಬಂದವು.

ಒಟ್ಟಾರೆ ಜಿಲ್ಲೆಯ ಐದು ವಿಧಾಸಭೆ ಕ್ಷೇತ್ರಗಳ ವ್ಯಾಪ್ತಿಯ ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳ ದೋಷದಿಂದ ಕೆಲ ಗಂಟೆಗಳು ಮತದಾನ ವಿಳಂಬವಾಗಿದ್ದನ್ನು ಹೊರತು ಪಡಿಸಿ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಶಾಂತಿಯಿಂದ ನಡೆಯಿತು. ಮತದಾನದ ಹಿನ್ನೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪ್ರತೀ ಬೂತ್‍ಗಳಲ್ಲೂ ಪೊಲೀಸರು ಹಾಗೂ ಅರೆಸೇನಾ ಪಡೆಗಳ ಸಿಬ್ಬಂದಿ ಭದ್ರತೆ ಒದಗಿಸಿದ್ದರು. 

ತಾನು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ತಾನು ವಾಸವಿದ್ದು, ತಮ್ಮ ಊರಿನಲ್ಲಿ ನೀರಿನ ಸಮಸ್ಯೆವ ವ್ಯಾಪಕವಾಗಿದೆ. ತೆಂಗು, ಅಡಿಕೆ ಮರಗಳು ಒಣಗಿ ಹೋಗಿವೆ. ಹಾಗಾಗಿ ತನ್ನ ಮತಕ್ಕೆ ಬೆಲೆ ಇದೆ. ಈ ಕಾರಣಕ್ಕೆ ಬೆಂಗಳೂರಿನಿಂದ ಗುರುವಾರ ರಾತ್ರಿ ಗ್ರಾಮಕ್ಕೆ ಬಂದಿದ್ದೇನೆ. ನೀರಾವರಿಗೆ ಒತ್ತು ನೀಡುವ ಸರಕಾರದ ಪರವಾಗಿ ತಾನು ಮತ ಚತಚಲಾಯಿಸುತ್ತೇನೆ.
- ಭಾರ್ಗವಿ, ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X