ಹಾಸನ: ನಕಲಿ ಮತದಾನ ಮಾಡಿದ ಯುವಕನಿಗೆ ಥಳಿತ
.jpg)
ಹಾಸನ,ಮೇ.12: ನಕಲಿ ಮತದಾನ ಮಾಡಿದ್ದಾನೆ ಎನ್ನಲಾದ ಯುವಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಮತಗಟ್ಟೆ ಸಂಖ್ಯೆ 86 ವಿಧ್ಯಾನಗರದಲ್ಲಿ ನಡೆದಿದೆ.
ಮತದಾನ ಮಾಡಿ ಮತಗಟ್ಟೆಯಿಂದ ಹೊರಬಂದ ನಂತರ ಯುವಕನ ಬಗ್ಗೆ ಅನುಮಾನಗೊಂಡ ಸ್ಥಳಿಯರು ವಿಚಾರಣೆ ನಡೆಸಿದಾಗ ಸಮರ್ಪಕವಾಗಿ ಉತ್ತರಿಸದಿದ್ದಾಗ ಆತನಿಗೆ ಥಳಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಜನಿಕರಲ್ಲಿ ತಾನು ನಕಲಿ ಮತದಾನ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡ ಯುವಕ ತಾನು ಚಿಕ್ಕಮಂಗಳೂರು ಮೂಲದವನು ಎಂದು ಹೇಳಿಕೊಂಡಿದ್ದಾನೆ. ಯುವಕನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
Next Story





