Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆ ಕನಸೇ?

ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆ ಕನಸೇ?

ಅಂಜನಿ ತ್ರಿವೇದಿಅಂಜನಿ ತ್ರಿವೇದಿ13 May 2018 12:19 AM IST
share
ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆ ಕನಸೇ?

ಭಾರತವು ಸೇನಾ ಸಿಬ್ಬಂದಿಗಾಗಿ ಕೋಟ್ಯಂತರ ರೂ.ಗಳನ್ನು ಹಾಗೂ ಶಸ್ತ್ರಾಸ್ತ್ರಗಳಿಗಾಗಿ ಮತ್ತು ಗಡಿಯಲ್ಲಿನ ಬೆದರಿಕೆಗಳನ್ನು ಎದುರಿಸುವುದಕ್ಕಾಗಿ ನೂರಾರು ಕೋಟಿ ಡಾಲರ್‌ಗಳನ್ನು ವೆಚ್ಚ ಮಾಡುತ್ತಿದೆ. ಆದಾಗ್ಯೂ ಈ ದೇಶವು ತನ್ನದೇ ಆದ ಫೈಟರ್ ಜೆಟ್‌ಗಳನ್ನು ಹಾಗೂ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ನಿರ್ಮಿಸುತ್ತಿಲ್ಲ. ನಿಜಕ್ಕೂ ಇದು ದೇಶದ ಹೂಡಿಕೆದಾರರಿಗೆ ದೊರೆತಿರುವ ಉತ್ತಮ ಅವಕಾಶವೇ?. ಮೇಲ್ನೋಟಕ್ಕೆ ಹೌದೆನಿಸಿದರೂ, ಅದು ಅಷ್ಟೊಂದು ಶೀಘ್ರವಾಗಿ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ತೀರಾ ಕಡಿಮೆ.

 1960ರ ದಶಕದಿಂದಲೂ ಭಾರತವು ರಕ್ಷಣೆಯಲ್ಲಿ ಸ್ವಾವಲಂಬನೆ ಸಾಧಿಸಲು ಶ್ರಮಿಸುತ್ತಿದೆ. ಭಾರತವು ಜಗತ್ತಿನ ಅತ್ಯಧಿಕ ಮಿಲಿಟರಿ ಬಜೆಟ್ ಹೊಂದಿರುವ ದೇಶವಾಗಿದೆ ಹಾಗೂ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರನೂ ಹೌದು. ತನ್ನ ರಕ್ಷಣಾ ಅವಶ್ಯಕತೆಗಳಿಗಾಗಿನ ಶೇ.70ರಷ್ಟು ಸಾಮಗ್ರಿಗಳನ್ನು ಅದು ವಿದೇಶದಿಂದಲೇ ಆಮದುಮಾಡಿಕೊಳ್ಳುತ್ತಿದೆ. ಕಳೆದ ವರ್ಷ ಭಾರತದ ರಕ್ಷಣಾ ವೆಚ್ಚವು ಶೇ. 5.5ರಷ್ಟು ಹೆಚ್ಚಾಗಿದ್ದು, ಸುಮಾರು 66 ಶತಕೋಟಿ ಡಾಲರ್‌ಗಳಿಗೆ ತಲುಪಿರುವುದಾಗಿ ಕಳೆದ ವಾರದ ದತ್ತಾಂಶ ತೋರಿಸಿಕೊಟ್ಟಿದೆ. ಇದರಿಂದಾಗಿ ಖಾಸಗಿ ವಲಯಕ್ಕೆ 35 ಶತಕೋಟಿ ಡಾಲರ್‌ಗಳ ಹೂಡಿಕೆಯ ಅವಕಾಶವನ್ನು ಇದು ದೊರಕಿಸಿಕೊಡಲಿದೆಯೆಂದು ಜಾಗತಿಕ ಹಣಕಾಸು ಹೂಡಿಕೆದಾರ ಸಂಸ್ಥೆ ಬರ್ನ್‌ಸ್ಟೈನ್ ಅಂದಾಜಿಸಿದೆ.

 ಪ್ರಧಾನಿ ನರೇಂದ್ರ ಮೋದಿ 250 ಶತಕೋಟಿ ಡಾಲರ್‌ಗಳ ಸೇನಾ ಅಧುನೀಕರಣ ಯೋಜನೆಯನ್ನು ಜಾರಿಗೊಳಿಸಿರುವುದು ಪ್ರಶಂಸನೀಯ. ತಥಾಕಥಿತ ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದ ನೆಲದಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಆದ್ಯತೆ ನೀಡುತ್ತದೆ. ಯುದ್ಧ ವಿಮಾನಗಳಿಗಾಗಿ ಅತಿ ದೊಡ್ಡ ಆರ್ಡರ್ ಒಂದನ್ನು ಕೇಂದ್ರ ಸರಕಾರ ಕರೆದಿದ್ದು, ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ಆರ್ಡರ್‌ನಲ್ಲಿ ಜಾಗತಿಕ ಹೆವಿವೇಟ್‌ಗಳನ್ನು ಹಾಗೂ ದೇಶೀಯ ಕಂಪೆನಿಗಳನ್ನು ಆಕರ್ಷಿಸಿದೆ.

ಆದರೆ ಈ ಬೃಹತ್ ಯೋಜನೆಗಳ ದಾರಿಗೆ ಹಲವು ಎಡರುತೊಡರುಗಳಿವೆ. ರಕ್ಷಣಾ ಬಜೆಟ್ ದೊಡ್ಡ ಗಾತ್ರದ್ದಾದರೂ, ಅದರ ಅಧಿಕ ಪಾಲು ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಸಿಬ್ಬಂದಿಯ ವೇತನಕ್ಕೆ ಖರ್ಚಾಗುತ್ತದೆ. ಒಟ್ಟು ಯೋಜನಾ ಗಾತ್ರದ 20 ಶೇಕಡಕ್ಕೂ ಕಡಿಮೆ ಹಣ ಮಾತ್ರ ಸೇನೆಯ ಅಧುನೀಕರಣಕ್ಕೆ ಉಪಯೋಗವಾಗುತ್ತಿದೆ. ಏತನ್ಮಧ್ಯೆ, ಅಧಿಕಾರಶಾಹಿಯ ಕೆಂಪುಪಟ್ಟಿಯ ತೊಡಕುಗಳು ಭಾರತೀಯ ಕಂಪೆನಿಗಳನ್ನು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗೆ ಹಿಂದೇಟು ಹಾಕುವಂತೆ ಮಾಡಿವೆ.

ಹೆಚ್ಚುಕಮ್ಮಿ ನಾಲ್ಕು ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರಕಾರವು ಹೆಚ್ಚುಹೆಚ್ಚಾಗಿ ರಕ್ಷಣಾ ಸಾಮಗ್ರಿಗಳಿಗೆ ಹೆಚ್ಚುಹೆಚ್ಚಾಗಿ ವಿದೇಶಿ ಮಾರಾಟಗಾರರನ್ನು ಅವಲಂಬಿಸಿದೆ. ಅವರಲ್ಲಿ ಹೆಚ್ಚಿನವರನ್ನು ತನ್ನೆಡೆಗೆ ಸೆಳೆಯುವುದಕ್ಕಾಗಿ ರಕ್ಷಣಾ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ತನ್ನ ಖರೀದಿ ನೀತಿಯ ಕರಡು ನಿಯಮಾವಳಿಗಳನ್ನು ಪ್ರಕಟಿಸಿತ್ತು.

ಈ ಹೊಸ ನೀತಿಯು ಜಾರಿಗೆ ಬಂದಲ್ಲಿ ಭಾರತೀಯ ಸೇನೆಯ ರಕ್ಷಣಾ ವ್ಯವಹಾರದಲ್ಲಿ ಉತ್ತಮವಾದ ಪಾಲು ತನಗೆ ದೊರೆಯಲಿದೆಯೆಂದು ಭಾರತೀಯ ಹಾಗೂ ವಿದೇಶಿ ಕಂಪೆನಿಗಳು ಆಶಾವಾದ ಹೊಂದಿವೆ. ವಿಮಾನವಾಹಕ ಹಡಗುಗಳು ಹಾಗೂ ಡಿಸ್ಟ್ರಾಯರ್ ನೌಕೆಗಳು ಹಾಗೂ ಯುದ್ಧವಿಮಾನಗಳ ಖರೀದಿಗಾಗಿ ಸೇನೆಯು ನೂರಾರು ಕೋಟಿ ಡಾಲರ್‌ಗಳನ್ನು ವ್ಯಯಿಸಲಿದೆ. ದೇಶದ ಶೇ.85 ಜಲಾಂತರ್ಗಾಮಿ ನೌಕೆಗಳು ಹಾಗೂ ಶೇ.40ರಷ್ಟು ಕವಚಾವೃತ ಸೇನಾವಾಹನಗಳು ಕಾರ್ಯನಿರ್ವಹಣಾ ಅವಧಿಯು ಮುಗಿಯುತ್ತಾ ಬಂದಿರುವುದೇ ಇದಕ್ಕೆ ಕಾರಣವಾಗಿದೆ.

ರಕ್ಷಣಾ ಉದ್ಯಮಕ್ಕೆ ದೇಶದ ಖಾಸಗಿ ವಲಯವನ್ನು ಆಕರ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ ರಕ್ಷಣಾ ಉದ್ಯಮದ ಕಂಪೆನಿಗಳು ಸಂಕುಚಿತವಾದ ಲಾಭದ ಮಾರ್ಜಿನ್‌ಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಒಂದು ರಕ್ಷಣಾ ಉಪಕರಣ ತಯಾರಿಕೆಯ ಆರ್ಡರ್ ಅನ್ನು ಬಿಡ್ ಮಾಡಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತದೆ. ಸರಳವಾದ ಟೆಂಡರ್‌ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಧಿಕೃತ ಬಿಡ್ಡರ್‌ಗಳು ಲಭ್ಯವಾಗದಿರುವ ಸಮಸ್ಯೆಯೂ ಎದುರಾಗುತ್ತದೆ.

ಈ ಮಧ್ಯೆ, ರಕ್ಷಣಾ ಸಚಿವಾಲಯದ ಉನ್ನತವಲಯದಲ್ಲಿ ನಡೆದ ಬದಲಾವಣೆಗಳು, ಖಾಸಗಿ ಕಂಪೆನಿಗಳಿಗೆ ರಕ್ಷಣಾ ವಲಯವನ್ನು ಪ್ರವೇಶಿಸಲು ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ. ಉದಾಹರಣೆಗೆ ಫೈಟರ್ ಜೆಟ್‌ಗಳ ನಿರ್ಮಾಣಕ್ಕೆ ಲಾಕ್‌ಹೀಡ್ ಮಾರ್ಟಿನ್ ಕಾರ್ಪೊರೇಶನ್ ಸಂಸ್ಥೆಯು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಜೊತೆಗೆ ಆಯಕಟ್ಟಿನ ಪಾಲುದಾರಿಕೆಯನ್ನು ಸ್ಥಾಪಿಸಿದೆ. ಆದರೆ, ಈ ನಿಟ್ಟಿನಲ್ಲಾದ ಪ್ರಗತಿಯ ಸ್ಪಷ್ಟ ಚಿತ್ರಣ ಇನ್ನೂ ಲಭ್ಯವಾಗಿಲ್ಲ. ಈ ರೀತಿಯ ಉದ್ಯಮ ಸಹಕಾರದ ಮರುಪರಿಶೀಲನೆಗೆ ಬಲವಾದ ರಾಜಕೀಯ ಒತ್ತಡವೂ ಎದುರಾಗಿದೆ.

ಭಾರತೀಯ ಸೇನೆಯ ಸದೃಢೀಕರಣದ ಪ್ರಮುಖ ಫಲಾನುಭವಿಗಳೆಂದರೆ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಂತಹ ಸರಕಾರಿ ಸ್ವಾಮ್ಯದ ಕಂಪೆನಿಗಳಾಗಿವೆ. ಆದಾಗ್ಯೂ, ಹೂಡಿಕೆದಾರರು ಈಗಲೂ ಉತ್ಸುಕರಾಗಿಲ್ಲ. ಸರಕಾರಿ ಬೆಂಬಲಿತ ರಕ್ಷಣಾ ಸಂವಹನ ಕಂಪೆನಿ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್)ನ ಶೇರುಗಳ ವೌಲ್ಯವು ಈ ವರ್ಷ ಶೇ.30ರಷ್ಟು ಕುಸಿದಿದೆ. ಕುಸಿಯುತ್ತಿರುವ ಲಾಭದ ಪ್ರಮಾಣ ಹಾಗೂ ಆರ್ಡರ್‌ಗಳ ಲಭ್ಯತೆಯಲ್ಲಿ ವಿಳಂಬ ಇವು ಬಿಇಎಲ್ ಶೇರುಗಳ ವೌಲ್ಯ ಕುಸಿತಕ್ಕೆ ಕಾರಣವಾಗಿದೆ.

ಖಾಸಗಿ ವಲಯದ ಹೂಡಿಕೆದಾರರನ್ನು ನಿರ್ದಿಷ್ಟವಾಗಿ ಆಕರ್ಷಿಸುವ ಗುರಿ ಹೊಂದಿರುವ ನೀತಿಗಳಲ್ಲಿನ ಲೋಪದೋಷಗಳನ್ನು ಭಾರತವು ಸರಿಪಡಿಸದೆ ಇದ್ದಲ್ಲಿ, ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಅದರ ಕನಸು ಹತಾಶಕಾರಿಯಾದ ವಾಸ್ತವವಾಗಿ ಬದಲಾಗಲಿದೆ.

ಕೃಪೆ: hindustantimes.com

ಖಾಸಗಿ ವಲಯದ ಹೂಡಿಕೆದಾರರನ್ನು ನಿರ್ದಿಷ್ಟವಾಗಿ ಆಕರ್ಷಿಸುವ ಗುರಿ ಹೊಂದಿರುವ ನೀತಿಗಳಲ್ಲಿನ ಲೋಪದೋಷಗಳನ್ನು ಭಾರತವು ಸರಿಪಡಿಸದೆ ಇದ್ದಲ್ಲಿ, ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಅದರ ಕನಸು ಹತಾಶಕಾರಿಯಾದ ವಾಸ್ತವವಾಗಿ ಬದಲಾಗಲಿದೆ.

share
ಅಂಜನಿ ತ್ರಿವೇದಿ
ಅಂಜನಿ ತ್ರಿವೇದಿ
Next Story
X