ಆಸ್ಟ್ರೇಲಿಯನ್ ಓಪನ್: ಮನು-ಸುಮೀತ್‌ಗೆ ಸೋಲು

ಸಿಡ್ನಿ, ಮೇ 12: ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ. ಸಾಯಿ ಪ್ರಣೀತ್ ಸೆಮಿ ಫೈನಲ್‌ನಲ್ಲಿ ಸೋಲುವ ಮೂಲಕ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ.
ಶನಿವಾರ 39 ನಿಮಿಷಗಳಲ್ಲಿ ಕೊನೆಗೊಂಡ ಸೆಮಿ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತದ ಮನು ಹಾಗೂ ಪ್ರಣೀತ್ ಇಂಡೋನೇಷ್ಯಾದ ಬೆರ್ರಿ ಅಂಗ್ರಿ ಯವಾನ್ ಹಾಗೂ ಹರ್ಡಿಯಾಂಟೊ ವಿರುದ್ಧ 17-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಭಾರತದ ಸಮೀರ್ ವರ್ಮ ಹಾಗೂ ಬಿ.ಸಾಯಿ ಪ್ರಣೀತ್ ಸೋಲುಣ್ಣುವುದರೊಂದಿಗೆ ಟೂರ್ನಮೆಂಟ್‌ನಿಂದ ನಿರ್ಗಮಿಸಿದ್ದರು.
Next Story





