ಇಂಗ್ಲೆಂಡ್ ನಿಂದ ಹಾರಿ ಬಂದ ವಿಜ್ಞಾನಿಗೆ ಸಿಗದ ಮತದಾನ ಅವಕಾಶ !

ಬೆಂಗಳೂರು, ಮೇ 13: ಕರ್ನಾಟಕದಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸುವ ಉದ್ದೇಶಕ್ಕಾಗಿ ಇಂಗ್ಲೆಂಡ್ ನ ಲೀಡ್ಸ್ ವಿವಿಯಿಂದ ಆಗಮಿಸಿದ್ದ ವಿಜ್ಞಾನಿಯೊಬ್ಬರು ಮತದಾನದ ಅವಕಾಶ ವಂಚಿತಗೊಂಡ ಘಟನೆ ಬೆಳಕಿಗೆ ಬಂದಿದೆ.
35ರ ಹರೆಯದ ರಾಕೇಶ್ ತಿವಾರಿ ಅವರು ರಾಜರಾಜೇಶ್ವರಿ ನಗರದ ಮತದಾರ. ಮತದಾನ ಮಾಡಲು ಬೆಂಗಳೂರಿಗೆ ಆಗಮಿಸಿದ್ದರು. ತಿವಾರಿ ಅವರಿಗೆ ಇಂಗ್ಲೆಂಡ್ ನಿಂದ ಪುಣೆಗೆ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದರು. ಆದರೆ ಅವರು ಬೆಂಗಳೂರಿಗೆ ಆಗಮಿಸುವ ಸ್ವಲ್ಪ ಹೊತ್ತಿನ ಮೊದಲು ರಾಜರಾಜೇಶ್ವರಿ ನಗರದ ಚುನಾವಣೆ ಮುಂದೂಡಲಾದ ವಿಚಾರ ಗೊತ್ತಾಯಿತು. ಈ ಕಾರಣದಿಂದಾಗಿ ಅವರು ನಿರಾಸೆಗೊಂಡರು.
ಅವರು ಈ ಮೊದಲು ಎಪ್ರಿಲ್ 16 ರಂದು ಭಾರತಕ್ಕೆ ಆಗಮಿಸುವುದು ನಿಗದಿಯಾಗಿತ್ತು, ಆದರೆ ಚುನಾವಣೆ ಕಾರಣಕ್ಕಾಗಿ ಅವರು ಬೇಗನೇ ಆಗಮಿಸಿದ್ದರು. 2016 ರಲ್ಲಿ ಇಂಗ್ಲೆಂಡ್ ಗೆ ತೆರಳುವ ಮೊದಲು ತಿವಾರಿ ಪುಣೆಯ ಭಾರತೀಯ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು.
ರಾಕೇಶ್ ಅವರು ಕರ್ನಾಟಕದಲ್ಲಿ ಬರಗಾಲದ ಸಹ-ಸಂಭವಿಸುವಿಕೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಮೇ 28ರಂದು ಅವರು ಪುಣೆಯ ಭಾರತೀಯ ಹವಾಮಾನ ಇಲಾಖೆಯಲ್ಲಿ ಸಂಶೋಧನಾ ವರದಿ ಮಂಡಿಸಲಿದ್ದಾರೆ.
ಮತದಾರರ ಗುರುತು ಪತ್ರಗಳು ಅಕ್ರಮವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಚುನಾವಣೆಯನ್ನು ಮುಂದೂಡಲಾಗಿದೆ.
ಮೇ 28ರಂದು ಚುನಾವಣೆ ನಡೆಯಲಿದ್ದು, ಆದರೆ ಆ ದಿನ ರಾಕೇಶ್ ಅವರಿಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.
" ನನಗೆ ಮೇ ತಿಂಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗದಿರುವುದಕ್ಕೆ ನಾನು ಹೆಚ್ಚು ನಿರಾಶೆಗೊಂಡಿದ್ದೇನೆ’’ ಎಂದು ರಾಕೇಶ್ ತಿವಾರಿ ತಿಳಿಸಿದ್ದಾರೆ.







