ಟ್ಯಾಂಕರ್-ಟೆಂಪೋ ಮುಖಾಮುಖಿ ಢಿಕ್ಕಿ: 10 ಮಂದಿ ಮೃತ್ಯು
32 ಮಂದಿಗೆ ಗಾಯ

ಮಹಾರಾಷ್ಟ್ರ, ಮೇ 13: ಟ್ಯಾಂಕರ್ ಒಂದು ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ 10 ಮಂದಿ ಮೃತಪಟ್ಟು 32 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ನಗರದ ಲಾತೂರ್ ಮುಖೇದ್ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ನಾಲ್ವರು ಬಾಲಕಿಯರು ಮೃತಪಟ್ಟಿದ್ದಾರೆ. “ನಾಂದೇಡ್ ನ ಜಾಂಬ್ ಗ್ರಾಮದಲ್ಲಿ ಈ ಅಪಘಾಥ ಸಂಭವಿಸಿದೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಹೊತ್ತು ಈ ಟೆಂಪೋ ಮುಖೇದ್ ಗ್ರಾಮಕ್ಕೆ ತೆರಳುತ್ತಿತ್ತು. ವಿರುದ್ಧ ದಿಕ್ಕಿನಿಂದ ಬಂದ ಟ್ಯಾಂಕರ್ ಟೆಂಪೋಗೆ ಢಿಕ್ಕಿ ಹೊಡೆದಿತ್ತು” ಎಂದು ಮುಖೇದ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸಂಜಯ್ ಚೌಬೆ ಹೇಳಿದ್ದಾರೆ,
ಗಾಯಾಳುಗಳನ್ನು ಮುಖೇದ್ ಹಾಗು ಲಾಥೂರ್ ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ 10 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Next Story





