ಹಾಸನ: ಹೃದಯಘಾತದಿಂದ ಮೃತಪಟ್ಟ ಯೋಧನ ಅಂತ್ಯಸಂಸ್ಕಾರ
.jpg)
ಹಾಸನ,ಮೇ.13: ರಾಜಸ್ಥಾನದ ಜೈಪುರದಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಣಿರಾಜು ಎಂಬವರು ಹೃದಯಘಾತವಾಗಿ ಮೃತಪಟ್ಟಿದ್ದು, ಭಾನುವಾರ ಸಂಜೆ ತನ್ನ ಜಮೀನಿನಲ್ಲಿ ಯೋಧನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ತಾಲೂಕಿನ ಬೂವನಹಳ್ಳಿ ಕೂಡಿನಲ್ಲಿ ವಾಸವಾಗಿರುವ ದ್ಯಾವೇಗೌಡ ಎಂಬವರ ಪುತ್ರ ಪಣಿರಾಜು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ದಿನದ ಹಿಂದಷ್ಟೇ ರಾಜಸ್ಥಾನದ ಜೈಪುರದಲ್ಲಿ ಹೃದಯಘಾತವಾಗಿದ್ದು, ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ. ಅವರು ಸೌಮ್ಯ ಎಂಬವಳನ್ನು ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದು, ಎರಡು ವರ್ಷದ ಒಬ್ಬಳು ಮಗಳು ಕೂಡ ಇದ್ದಾಳೆ.
ಭಾನುವಾರ ಸಂಜೆ ಸುಮಾರು 4-15 ರ ವೇಳೆ ಬೂವನಹಳ್ಳಿ ಕೂಡಿಗೆ ತುರ್ತು ವಾಹನದಲ್ಲಿ ಮೃತ ದೇಹವನ್ನು ತರಲಾಯಿತು. ಈ ವೇಳೆ ಕುಟುಂಬದವರ ಅಳಲು ಮುಗಿಲು ಮುಟ್ಟಿತ್ತು. ನಂತರ ತಮ್ಮ ಜಮೀನು ಇರುವ ದೊಡ್ಡ ಗೇಣಿಗೆರಿಗೆ ದೇಹವನ್ನು ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನೂರಾರು ಜನರು ಮಳೆಯಲ್ಲಿಯೇ ಮೃತ ಯೋಧನ ಅಂತಿಮ ದರ್ಶನ ಪಡೆದರು.
Next Story





