ಆಳ್ವಾಸ್‌ನಲ್ಲಿ ‘ನರ್ಸಸ್‌ಡೇ’ ಆಚರಣೆ

ಮೂಡುಬಿದಿರೆ, ಮೇ.13: ಆಧುನಿಕ ಶುಷ್ರೂಶಾ ಪದ್ಧತಿಯ ಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ ವನ್ನು ಇಂಟರ್‌ನ್ಯಾಷನಲ್ ನರ್ಸಿಂಗ್ ಡೇ (ಐಎನ್‌ಡಿ) ಎಂದು ಆಚರಿಸಲಾಗುತ್ತಿದೆ.
ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಶುಕ್ರವಾರ ಸಂಜೆ ನಡೆದ ‘ನರ್ಸಸ್ ಡೇ -2018’ ಕಾರ್ಯಕ್ರಮದಲ್ಲಿ ಜನರ ಆರೋಗ್ಯ ಮತ್ತು ಸಮಾಜಕ್ಕೆ ದಾದಿಯರ ಕೊಡುಗೆಯ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಯಿತು. ನರ್ಸಿಂಗ್ ಅಧೀಕ್ಷಕಿ ರೇಖಾ ಫ್ಲಾವಿಯಾ ಡಿಸೋಜ ಅವರು ಫ್ಲಾರೆನ್ಸ್ ನೈಟಿಂಗೇಲ್ ವ್ಯಕ್ತಿ ಚಿತ್ರಣವಿತ್ತರು.
ಆಳ್ವಾಸ್ ಹೆಲ್ತ್ ಸೆಂಟರ್‌ನ ವೈದ್ಯಕೀಯ ಅಧೀಕ್ಷಕ, ಶಸ್ತ್ರ ಚಿಕಿತ್ಸಾ ತಜ್ಞ ಡಾ. ಹರೀಶ್ ನಾಯಕ್ ಅವರು ‘ನರ್ಸಸ್ ಡೇ-2018’ ಕುರಿತು ಮಾತನಾಡಿದರು. ‘ನರ್ಸಸ್: ಇನ್‌ಸ್ಪಾಯರ್, ಇನ್ನೋವೇಟ್ ಆ್ಯಂಡ್ ಇನ್‌ಪ್ಲೂಯೆನ್ಸ್’ ಎಂಬ ಈ ವರ್ಷದ ಆಶಯವನ್ನು ಬಿತ್ತರಿಸಲಾಯಿತು. ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರದೆದುರು ದಾದಿಯರು ದೀಪ ಬೆಳಗಿದರು. ನೈಟಿಂಗೇಲ್ ಜನ್ಮ ದಿನಾಚರಣೆಯಂಗವಾಗಿ ಕೇಕ್ ಕತ್ತರಿಸಿ ಹಂಚಿ ಸವಿದು ಸಂಭ್ರಮಿಸಲಾಯಿತು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವಿನಯ ಆಳ್ವ, ವಿವಿಧ ವಿಭಾಗಗಳ ತಜ್ಞ ರಾದ ಡಾ. ಸದಾನಂದ ನಾಯಕ್, ಡಾ ರೇವತಿ ಭಟ್, ಡಾ. ಹಾನಾ ಶೆಟ್ಟಿ, ಡಾ. ಗುರುಪ್ರಸಾದ್, ಡಾ. ವಸಂತ ಟಿ., ಡಾ. ಮಮತಾ, ಡಾ. ಸ್ವರ್ಣರೇಖಾ, ಡಾ. ಸುಕೇಶ್ , ಆಡಳಿತಾಧಿಕಾರಿ ಭಾಸ್ಕರ್ , ದಾದಿಯರು, ದಾದಿಯರ ಸಹಾಯಕರು ಉಪಸ್ಥಿತರಿದ್ದರು.
ಶಿವಪ್ಪ ಎಸ್. ಜೈನಾಪುರ್ ನಿರೂಪಿಸಿದರು. ಸುನಿಲ್ ನಾಕ್ ವಂದಿಸಿದರು.





